19ರ ಯುವತಿ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್ : ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಪಡೆ

ರಾಮನಗರದಲ್ಲಿ ನಡೆದಿದ್ದ 19 ವರ್ಷದ ಯುವತಿ ಹತ್ಯೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ

19 year old Ramanagara girl killed by family snr

 ರಾಮ​ನ​ಗ​​ರ (ಅ.17): ಮಾಗಡಿ ತಾಲೂಕು ಬೆಟ್ಟ​ಹ​ಳ್ಳಿ​ಯಲ್ಲಿ ಅನ್ಯಕೋ​ಮಿನ ಯುವ​ಕನನ್ನು ಪ್ರೀತಿ​ಸಿದ ಕಾರ​ಣಕ್ಕೆ ನಡೆ​ದಿದ್ದ ಮರ್ಯಾದಾ ಹತ್ಯೆ ಪ್ರಕ​ರ​ಣ​ವನ್ನು ಪೊಲೀ​ಸರು ಭೇದಿ​ಸು​ವಲ್ಲಿ ಯಶ​ಸ್ವಿ​ಯಾ​ಗಿ​ದ್ದಾರೆ.

ಗ್ರಾಮದ 19 ವರ್ಷದ ಹೇಮ​ಲತಾ ಎಂಬ ಯುವ​ತಿ​ಯ ಕೊಲೆ ತೀವ್ರ ಕುತೂ​ಹಲ ಕೆರ​ಳಿಸಿ ಗಂಭೀರ ಸ್ವರೂಪ ಪಡೆ​ದು​ಕೊಂಡಿತ್ತು. ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಸಾಮೂ​ಹಿಕ ಅತ್ಯಾ​ಚಾರ ಕೊಲೆ ಎಂದೆಲ್ಲಾ ವದಂತಿ​ಗ​ಳನ್ನು ಹಬ್ಬಿ​ಸ​ಲಾ​ಗಿತ್ತು. ಆದರೆ, ಕುಟುಂಬಸ್ಥರೇ ಯುವತಿಯ ಕೊಲೆ ಮಾಡಿರುವುದು ಪ್ರಾಥ​ಮಿ​ಕ ತನಿಖೆಯಿಂದ ಬೆಳಕಿಗೆ ಬಂದಿದೆ. ಹೆತ್ತ ಮಗ​ಳನ್ನೇ ಕೊಲೆ ಮಾಡಿದ ಆರೋ​ಪದ ಮೇಲೆ ತಂದೆ ಕೃಷ್ಣಪ್ಪ (48), ದೊಡ್ಡ​ಪ್ಪನ ಮಗ ಚೇತನ್‌ (21) ಹಾಗೂ ಅಪ್ರಾಪ್ತ ಬಾಲ​ಕ​ನನ್ನು ಪೊಲೀ​ಸರು ಬಂಧಿ​ಸಿ​ದ್ದಾರೆ. ಈ ಕೊಲೆಗೆ ಯುವತಿ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದೆ ಕಾರಣ ಎನ್ನಲಾಗಿದೆ.

ಆದರೆ, ಯುವತಿಯನ್ನು ತಂದೆಯೇ ಕೊಲೆ ಮಾಡಿ, ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದನು. ಅಲ್ಲದೆ, ಕೊಲೆಯಾಗಿರುವ ಜಾಗದ ಬಗ್ಗೆಯೂ ಸುಳಿವು ನೀಡುವ ಮೂಲಕ ಯುವತಿಯ ಪ್ರಿಯತಮನ ಮೇಲೆ ಕೊಲೆ ಆರೋಪ ಹೊರಿಸಲು ಸಂಚು ರೂಪಿಸಿದ್ದನು.

ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ ...

ಏನಿದು ಪ್ರಕ​ರಣ:  ಕಳೆದ ಅ. 9ರಂದು ಬಿ.ಕಾಂ ವ್ಯಾಸಂಗ ಮಾಡು​ತ್ತಿದ್ದ 19 ವರ್ಷದ ಪುತ್ರಿ ಹೇಮಲತಾ ಕಾಣೆ​ಯಾ​ಗಿ​ರುವ ಬಗ್ಗೆ ತಂದೆ ಕೃಷ್ಣಪ್ಪ ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖ​ಲಿ​ಸಿ​ದ್ದನು. ಅದ​ರಲ್ಲಿ ಆಕೆ​ಯನ್ನು ಪ್ರೀತಿ​ಸು​ತ್ತಿದ್ದ ಯುವಕ ಪುನೀತ್‌ ಎಂಬು​ವನ ಮೇಲೆ ಅನು​ಮಾ​ನ​ವಿದೆ ಎಂದು ಉಲ್ಲೇಖಿ​ಸಿ​ದ್ದನು. ಅದ​ರಂತೆ ಪೊಲೀ​ಸರು ಪುನೀತ್‌ನನ್ನು ಪೊಲೀಸ್‌ ಠಾಣೆಗೆ ಕರೆ​ತಂದು ವಿಚಾ​ರ​ಣೆಗೆ ಒಳ ಪಡಿ​ಸಿ ಕಳು​ಹಿ​ಸಿ​ದ್ದ​ರು. ಮರುದಿನವೇ ಮತ್ತೊಮ್ಮೆ ಪೊಲೀಸ್‌ ಠಾಣೆಗೆ ಆಗಮಿಸಿದ ಕೃಷ್ಣಪ್ಪ, ಗ್ರಾಮದ ಹೊಲದಲ್ಲಿ ರಕ್ತ​ಸಿಕ್ತ ಕಲೆ​ಯಿ​ರುವ ಮಗಳ ಚಪ್ಪಲಿ ಕಂಡಿ​ರುವ ಬಗ್ಗೆ ನಿಂಗಮ್ಮ ಎಂಬು​ವರು ನೀಡಿದ ಮಾಹಿ​ತಿ​ಯನ್ನು ತಿಳಿ​ಸಿ​ದ್ದಾನೆ.

ಸಂಬಂಧಿ​ಕರ ಜಮೀನಿನಲ್ಲಿ ಅಡಿಕೆ ಸಸಿ ನೆಡಲು ತೆಗಿದಿದ್ದ ಗುಂಡಿಯನ ಮಣ್ಣು ಮುಚ್ಚಿರುವಂತೆ ಕಂಡು ಬಂದಿದ್ದು, ಅಲ್ಲಿ ಮಗಳನ್ನು ಯಾರೋ ಮಣ್ಣು ಮಾಡಿರುವ ಅನು​ಮಾ​ನವಿದೆ ಎಂದು ಕೃಷ್ಣಪ್ಪ ತಾನು ಪಾರಾ​ಗಲು ಪೊಲೀ​ಸ​ರನ್ನು ನಂಬಿಸಲು ಮತ್ತೊಂದು ದೂರು ನೀಡಿದ್ದನು.

ಉಪ​ವಿ​ಭಾ​ಗಾ​ಧಿ​ಕಾ​ರಿ​ಗಳ ಸಮ​ಕ್ಷ​ಮ​ದಲ್ಲಿ ಗುಂಡಿ​ಯಿಂದ ಶವ​ವನ್ನು ಹೊರಕ್ಕೆ ತೆಗೆ​ದಾಗ ಅದು ಹೇಮ​ಲತಾ ಗುರುತು ಪತ್ತೆ​ಯಾ​ಯಿತು. ಪೊಲೀ​ಸರು ಕೊಲೆ ಪ್ರಕ​ರಣ ದಾಖ​ಲಿ​ಸಿ​ಕೊಂಡು ತನಿಖೆ ಆರಂಭಿ​ಸಿ​ದ​ರು. ತನಿಖೆ ಪ್ರಗ​ತಿ​ಯ​ಲ್ಲಿ​ರು​ವಾ​ಗಲೇ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹಾಥ್ರಸ್‌ ಹೋಲುವ ಘಟನೆ ಬೆಟ್ಟ​ಹ​ಳ್ಳಿಯೂ ನಡೆ​ದಿದೆ ಎಂದೆಲ್ಲ ವದಂತಿ​ಗ​ಳನ್ನು ಹರಿ​ದಾ​ಡು​ತ್ತಿತ್ತು. ಅಲ್ಲದೆ, ಸ್ವತಃ ಯುವತಿ ಪೋಷ​ಕರೇ ​ತ​ಮಗೆ ನ್ಯಾಯ ಸಿಗು​ತ್ತಿ​ಲ್ಲ​ವೆಂದು ಮಾಧ್ಯ​ಮ​ದ​ವರ ಮೊರೆ ಹೋಗಿ​ದ್ದರು. ಕೆಲ​ವಡೆ ಪ್ರತಿ​ಭ​ಟ​ನೆ​ಗಳು ನಡೆ​ದಿ​ದ್ದ​ವು. ಇದೆ​ಲ್ಲವೂ ಪ್ರಕ​ರ​ಣದ ತನಿಖೆ ದಿಕ್ಕು ತಪ್ಪಿ​ಸುವ ಪ್ರಯತ್ನವಾಗಿ ನಡೆ​ದಿ​ತ್ತು.

ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ ...

ಮಗಳು ಕಾಣೆ​ಯಾ​ಗಿ​ರುವ ಬಗ್ಗೆ ತಂದೆ ಕೃಷ್ಣಪ್ಪ ತಡ​ವಾಗಿ ದೂರು ಕೊಟ್ಟಿದ್ದನು. ಅಲ್ಲದೆ ಶವ ಸಂಸ್ಕಾ​ರದ ವೇಳೆ ಕೃಷ್ಣಪ್ಪ ಮತ್ತು ಕುಟುಂಬ ಕಣ್ಣೀರು ಇಡಲೇ ಇಲ್ಲ. ಇವ​ನ್ನೆಲ್ಲ ಸೂಕ್ಷ್ಮ​ವಾಗಿ ಗಮ​ನಿ​ಸಿದ್ದ ಪೊಲೀ​ಸರು, ಕುಟುಂಬದ ಪಾತ್ರದ ಬಗ್ಗೆಯೇ ತನಿಖೆ ಆರಂಭಿ​ಸಿ​ದರು.

ಈ ಕೊಲೆ ಪ್ರಕ​ರ​ಣ​ದಲ್ಲಿ ಇನ್ನೂ ಕೆಲವು ಆರೋ​ಪಿ​ಗಳು ಭಾಗಿ​ಯಾ​ಗಿ​ರುವ ಶಂಕೆ​ಯಿದೆ. ಈವ​ರೆಗೆ ವೈಜ್ಞಾ​ನಿಕ ಮತ್ತು ತಾಂತ್ರಿಕ ತನಿಖಾ ಕ್ರಮ​ಗ​ಳನ್ನು ಅನು​ಸ​ರಿಸಿ ಸಾಕ್ಷಾ​ಧಾ​ರ​ಗ​ಳನ್ನು ಕಲೆ ಹಾಕ​ಲಾ​ಗಿದೆ. ತನಿಖೆ ಇನ್ನೂ ಪ್ರಗ​ತಿ​ಯ​ಲ್ಲಿದ್ದು, ಮತ್ತಷ್ಟುಆರೋ​ಪಿ​ಗ​ಳನ್ನು ಬಂಧಿ​ಸ​ಲಾ​ಗು​ವುದು ಎಂದು ಪೊಲೀಸ್‌ ಮಹಾ​ನಿ​ರೀಕ್ಷ​ಕ ಸೀಮಂತ್‌ ಕುಮಾರ್‌ ಸಿಂಗ್‌ ಪ್ರತಿ​ಕ್ರಿಯಿಸಿ​ದ್ದಾ​ರೆ.

ಊರಿಗೆ ಊರಿಗೆ ಗೊತ್ತಿತ್ತು:

ಕೊಲೆಯನ್ನು ಕುಟುಂಬಸ್ಥರೇ ಮಾಡಿದ್ದಾರೆ ಎಂಬುದು ಬೆಟ್ಟಹಳ್ಳಿಯ ಪ್ರತಿಯೊಬ್ಬರು ತಿಳಿದಿತ್ತು. ಆದರೆ, ಯಾರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಇಡೀ ಪ್ರಕರಣದ ದಿಕ್ಕನ್ನೇ ತಪ್ಪಿಸುವ ಪ್ರಯತ್ನ ಕೊಲೆಯ ಹಿಂದೆ ನಡೆದಿತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ.

ನೆಟ್ಟಿಗರ ಮೇಲೂ ಕೇಸ್‌:

ಯುವತಿ ಹೇಮ​ಲತಾ ಕೊಲೆಯನ್ನು ಸಾಮೂಹಿಕ ಅತ್ಯಚಾರ ಕೊಲೆ ಎಂದು ಸಾಮಾ​ಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೇ, ಪ್ರಚೋ​ದ​ನಾ​ಕಾರಿ ಸಂದೇ​ಶ​ಗ​ಳನ್ನು ವೈರಲ್‌ ಮಾಡಿ ಕರ್ನಾಟಕ ಪೊಲೀಸ್‌ ಇಲಾಖೆಯನ್ನು ಅಣಕಿಸುವ ಕೆಲಸ ಮಾಡಿದ್ದ ನೆಟ್ಟಿಗರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಬೆಟ್ಟ​ಹ​ಳ್ಳಿ​ಯಲ್ಲಿ ಯುವ​ತಿ​ಯ ಕೊಲೆಯನ್ನು ಯಾವ ರೀತಿ ಮಾಡಲಾಗಿದೆ. ಪ್ರಕ​ರ​ಣ​ದ​ಲ್ಲಿ ಇನ್ನು ಎಷ್ಟುಮಂದಿ ಭಾಗಿ​ಯಾ​ಗಿ​ದ್ದಾರೆ ಎಂಬು​ದರ ತನಿಖೆ ನಡೆಯುತ್ತಿದೆ. ಎಲ್ಲ ಆಯಾ​ಮ​ಗ​ಳಿಂದಲೂ ತನಿಖೆ ಮುಂದು​ವ​ರೆ​ದಿ​ದೆ.

-ಸೀಮಂತ್‌ ಕುಮಾರ್‌ ಸಿಂಗ್‌, ಐಜಿ, ಕೇಂದ್ರ ವಲಯ.
 
ಯುವ​ತಿಯ ಕೊಲೆ ಪ್ರಕ​ರ​ಣ​ದಲ್ಲಿ ಸಾಮಾ​ಜಿಕ ಜಾಲತಾಣ​ಗ​ಳಲ್ಲಿ ಸಾಮೂ​ಹಿಕ ಅತ್ಯಾ​ಚಾರ, ಹಾಥ್ರಸ್‌ನಂತೆ ಕಗ್ಗೊಲೆ ಎಂದೆಲ್ಲ ರೋಚ​ಕ​ವಾಗಿ ಬರೆದು ಸಾರ್ವ​ಜ​ನಿ​ಕ​ರನ್ನು ಪ್ರಚೋದಿಸಲು ಯತ್ನಿ​ಸಿದ ಆರೋ​ಪದ ಮೇಲೆ ಕೆಲ​ವರ ವಿರುದ್ಧ ಎಫ್‌​ಐ​ಆರ್‌ ದಾಖ​ಲಿ​ಸಲಾ​ಗು​ವುದು.

-ಎಸ್‌. ಗಿರೀಶ್‌, ಎಸ್‌ಪಿ
 

Latest Videos
Follow Us:
Download App:
  • android
  • ios