Asianet Suvarna News Asianet Suvarna News

Rameshwaram Cafe Blast ಆತುರದಲ್ಲಿ ಬಂದು 45 ಸೆಕೆಂಡ್‌ ನಲ್ಲಿ ಬಾಂಬರ್‌!

ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಬಾಂಬ್ ಇಟ್ಟವ ಆತುರಾತುರವಾಗಿ ಕೃತ್ಯ ಎಸಗಿದ ಜಾಗದಿಂದ ಜಾಗ ಖಾಲಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Bengaluru Rameshwaram Cafe Blast Suspect activity  caught on CCTV gow
Author
First Published Mar 4, 2024, 1:32 PM IST

ಬೆಂಗಳೂರು (ಮಾ.4): ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಬಾಂಬ್ ಇಟ್ಟವ ಆತುರಾತುರವಾಗಿ ಕೃತ್ಯ ಎಸಗಿದ ಜಾಗದಿಂದ ಜಾಗ ಖಾಲಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಬಸ್ ಇಳಿದ ಬಳಿ ಡೈರೆಕ್ಟ್ ಹೊಟೆಲ್ ಗೆ ಬರುವ ಬಾಂಬರ್. ಹೊಟೆಲ್ ಗೆ ಬರುವಾಗಲೇ ಟೈಮರ್ ಫಿಕ್ಸ್ ಮಾಡಿದ್ನಾ? ಎಂಬ ಪ್ರಶ್ನೆ ಎದ್ದಿದೆ. ಬ್ಯಾಗ್ ಹಾಕಿಕೊಂಡು ಕೂಲ್ ಆಗಿಯೇ ಹೊಟೆಲ್ ಒಳಗೆ  ಎಂಟ್ರಿ ಆಗಿದ್ದು, ಬಳಿಕ ಹೋಟೆಲ್ ಒಳಗಡೆ ಹೋಗಿ ಇಡ್ಲಿ ಖರೀದಿ ಮಾಡಿದ್ದಾನೆ. ಬಳಿಕ ಬಾಂಬ್ ಇಟ್ಟು ಮೊಬೈಲ್ ಅಲ್ಲಿ ಮಾತನಾಡುವಂತೆ ಓಡೋಡಿ ಬರ್ತಾನೆ.

Rameshwaram Cafe Blast ಹಿನ್ನೆಲೆ ರಾಜಧಾನಿಯಲ್ಲಿ 20 ವರ್ಷದಲ್ಲಿ ನಡೆದ ಸ್ಫೋಟಗಳಿವು, ಸಂಘಟನೆಗಳದ್ದೇ ಕುತಂತ್ರ!

ಹೋಟೆಲ್ ಗೆ ಬರುವಾಗಲೂ ಬಾಂಬರ್‌ ಬಳಿ ಬ್ಯಾಗ್ ಇದೆ. ಹೋಗುವಾಗಲೂ ಆತನ ಬಳಿ ಬ್ಯಾಗ್‌ ಇರುವುದು ಕಂಡು ಬಂದಿದೆ.  ಆದ್ರೆ, ಬರುವಾಗ ದೊಡ್ಡ ಬ್ಯಾಗ್, ಹೋಗುವಾಗ ಚಿಕ್ಕ ಬ್ಯಾಗ್ ಇದವುದು ಕಂಡುಬಂದಿದೆ. ಬ್ಯಾಗಲ್ಲಿ ಮತ್ತೊಂದು ಬ್ಯಾಗ್ ಹಾಕಿಕೊಂಡು ಬಂದು ಒಂದು ಬ್ಯಾಗ್ ಹೊಟೇಲ್‌ನ ಸಿಂಕ್ ಇರುವ ಜಾಗದಲ್ಲಿ ಇಟ್ಟು ಪರಾರಿಯಾಗಿರಬಹುದು ಎಂದು ಊಹಿಸಲಾಗಿದೆ.

ಹೊಟೆಲ್ ನಲ್ಲಿ ಇರುವಾಗ ಮೊಬೈಲ್ ಅಲ್ಲಿ ಮಾತನಾಡುವಂತೆ ನಾಟಕ ಮಾಡಿದ್ದು, ಒಳಗೆ ಬಂದು ಹೊರಗೆ ಹೋಗುವವರೆಗೂ ಸಂಪೂರ್ಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಂಬರ್ ಹೋಟೆಲ್ ಬರುವಾಗ ಮುಖ ಕಾಣದಂತೆ ಟೋಪಿ, ಮಾಸ್ಕ್, ಫಿಂಗರ್ ಪಿಂಟ್ ಸಿಗಬಾರದು ಎಂದು ಕೈಗೆ ಗ್ಲೌಸ್ ಧರಿಸಿ ಬಂದಿದ್ದಾನೆ. ಸುಮಾರು 9 ನಿಮಿಷಗಳ ಕಾಲ ಇದ್ದ ಹೋಟೆಲ್ ಒಳಗೆ  ಇದ್ದ ಬಾಂಬರ್ ಒಂಬತ್ತು ನಿಮಿಷವೂ ಡ್ರಾಮಾ ಮಾಡಿ, ಒಂದೇ ಒಂದು ಸಾಕ್ಷಿ ಸಿಗದಂತೆ ಬಾಂಬಿಟ್ಟು ಎಸ್ಕೇಪ್ ಆಗಿದ್ದಾನೆ.

ಸಿಸಿಟಿವಿಯಲ್ಲಿರುವ ಶಂಕಿತನೇ ಬಾಂಬ್ ಫಿಕ್ಸ್ ಮಾಡಿರುವ ಮಾಹಿತಿ ಇದೆ. ಕಪ್ಪು ಬಣ್ಣದ ಬ್ಯಾಗ್ ನಲ್ಲಿ ಬಾಂಬ್ ಫಿಕ್ಸ್ ಮಾಡಿರುವ ದೃಶ್ಯ ಸಿಸಿಬಿ ಬಳಿ ಇದ್ದು, ಕೊಂಚವೂ ಹಿಂಜರಿಯದೇ ಕಪ್ಪು ಬಣ್ಣದ ಬ್ಯಾಗ್ ಹ್ಯಾಂಡ್ ವಾಶ್ ಬಳಿ ಇಟ್ಟಿದ್ದಾನೆ.  ಶಂಕಿತ  ಬಾಂಬ್ ಬ್ಯಾಗ್ ಇಡಲು 45 ಸೆಂಕೆಡ್ ತೆಗೆದುಕೊಂಡಿದ್ದಾನೆ. ಬ್ಯಾಗ್ ಇಡುವಾಗ ಯಾರಿಗೂ ಅನುಮಾನ ಬಂದಿಲ್ಲ ಎಂಬುದೇ ಆಶ್ಚರ್ಯ. ಮಂಗಳೂರು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ನಂತೆ ಇದೂ ನಡೆದಿದೆ ಎಂಬ ಮಾಹಿತಿ, ತನಿಖಾ ಹಂತದ ಮಾಹಿತಿ ಕಲೆ ಹಾಕಿರುವ ಸಿಸಿಬಿ.

Rameshwaram Cafe Blast ಡಿಜೆ ಹಳ್ಳಿಯ ಓರ್ವ ಸೇರಿ ಮೂವರು ಶಂಕಿತರು ಅರೆಸ್ಟ್!

ಐಬಿ ಹಾಗೂ ರಾ ಅಧಿಕಾರಿಗಳಿಂದಲೂ ತನಿಖೆ:
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐಬಿ ಹಾಗೂ ರಾ ಸಂಸ್ಥೆಗಳಿಂದಲೂ ಆರೋಪಿಯ ಹುಡುಕಾಟಕ್ಕೆ ತಲಾಷ್‌ ನಡೆಯುತ್ತಿದೆ. ದೇಶಾದ್ಯಂತ ನಿಗಾ ಇರಿಸಿದ್ದ ಕೆಲ ವ್ಯಕ್ತಿಗಳ ಮೇಲೆ ಅನುಮಾನ ಇದ್ದು, ಅನುಮಾನಿತ ವ್ಯಕ್ತಿಗಳನ್ನ ಐಜಿ ಹಾಗೂ ರಾ ಮಾನಿಟರ್ ಮಾಡುತ್ತಿರುತ್ತೆ. ಅಂತಹ ಶಂಕಿತರು ಅಥವಾ ಶಂಕಿತರ ಸಂಪರ್ಕದಲ್ಲಿರುವ  ಉಗ್ರರಿಂದ ನಡೀತಾ ಸ್ಪೋಟ ಎಂಬ ಬಗ್ಗೆ ಶಂಕೆ ಇದ್ದು, ಘಟನೆ ನಡೆದ ದಿನದಿಂದಲೂ ಐಬಿ ಹಾಗೂ ರಾ ಅಧಿಕಾರಿಗಳು ಫುಲ್ ಅಲರ್ಟ್ ಆಗಿದೆ. ಹೀಗಾಗಿ ತಮಗಿರುವ ಮಾಹಿತಿಗಳನ್ನ ಬೆಂಗಳೂರು ಪೊಲೀಸರ ಜೊತೆ ರಾ ಹಾಗೂ ಐಬಿ ಶೇರ್ ಮಾಡುತ್ತಿದೆ. ಸಿಸಿಕ್ಯಾಮರಾದಲ್ಲಿ ಸೆರೆಯಾದ ವ್ಯಕ್ತಿಗೂ ಅನುಮಾನಿತರ ಜೊತೆ ಹೋಲಿಕೆ ಮಾಡಿ ತನಿಖೆ ನಡೆಸುತ್ತಿದೆ.

ಇನ್ನು ಮೊಬೈಲ್‌ ನಂಬರ್ ಗಳ ಪರಿಶೀಲನೆ ಮುಂದುವರೆಸಿರುವ ಪೊಲೀಸರು. ಸುಮಾರು 10ಸಾವಿರಕ್ಕೂ ಅಧಿಕಾ ನಂಬರ್ ಗಳ ಪರಿಶೀಲನೆ ಮಾಡಿದ್ದಾರೆ. ಆದರೂ ಆರೋಪಿಯ ನಂಬರ್ ಫೈನಲೈಸ್ ಮಾಡಲು ಸಾಧ್ಯವಾಗುತ್ತಿಲ್ಲ. ಟವರ್ ಡಂಪ್ ಪಡೆದು ಆ ಸಮಯದಲ್ಲಿ ಏರಿಯಾ ಎಂಟ್ರಿ- ಎಗ್ಸಿಟ್  ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳಲಾಗಿದೆ. ಮೊಬೈಲ್ ನ್ನ ಹಿಡಿದು ಕೊಂಡಿರುವುದು, ಕಿವಿ ಬಳಿ ಇಟ್ಟುಕೊಂಡು ಮಾತನಾಡುವ ರೀತಿ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾ ದಲ್ಲಿ ಆರೋಪಿ ಕಾಣಿಸಿಕೊಳ್ಳುವ ಸಮಯದಲ್ಲಿ ಆ್ಯಕ್ಟೀವ್ ಆಗಿದ್ದ ನಂಬರ್ ಗಳ ಪರಿಶೀಲನೆ ಮಾಡಲಾಗುತ್ತಿದ್ದು, ಯಾವುದೇ ನಂಬರ್ ಖಚಿತವಾಗದ ಹಿನ್ನಲೆ ಬಾಂಬರ್ ಡಮ್ಮಿ ಪೋನ್ ಬಳಕೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ.

Follow Us:
Download App:
  • android
  • ios