* ಬದ್ಮಾಶ್ ಹ್ಯಾಂಗೋವರ್ ಪಬ್ ನ ಡಿಜೆಯಿಂದ ಕನ್ನಡಕ್ಕೆ ಅಪಮಾನ ಪ್ರಕರಣ* ಕ ರ ವೇ ಕನ್ನಡ ಪ್ರಕಾಶ್ ಅಂಡ್ ಟೀಂ ಇಂದ ಆಕ್ರೋಶ * ಹ್ಯಾಂಗೋವರ್ ಪಬ್ ಒಳಗೆ ಪ್ರತಿಭಟನೆ * ಕನ್ನಡ ಹಾಡು ಹಾಕಿಸಿ ನೃತ್ಯ ಮಾಡಿದ ಕಾರ್ಯಕರ್ತರು
ಬೆಂಗಳೂರು(ಫೆ. 06) ಕನ್ನಡ (Karnataka) ನಾಡಲ್ಲಿ ಕನ್ನಡಕ್ಕೆ ಬೆಲೆಯೇ ಇಲ್ವಾ? ಎನ್ನುವ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ(Social Media) ಈ ಘಟನೆ ನಂತರ ಮತ್ತೆ ಮತ್ತೆ ಕೇಳಲಾಗುತ್ತಿದೆ.
ನೋಡೋದಕ್ಕೆ (Bengaluru Pub) ಮೇಲೆ ಕನ್ನಡ ಬಾವುಟ ಹಾಕಿದ್ದ ಪಬ್ ದರ್ಪ ಮೆರೆಯುತ್ತಿತ್ತು ಒಂದೇ ಒಂದು ಕನ್ನಡ ಸಾಂಗ್ ಹಾಕಿ ಅಂತ ಕೇಳಿದ್ದಕ್ಕೆ ಅನ್ಯಭಾಷಿಕರು ದರ್ಪ ತೋರಿಸಿದ್ದರು. ಹುಟ್ಟುಹಬ್ಬ (Birthday) ಹಿನ್ನೆಲೆ ಅಣ್ಣಂದಿರ ಜೊತೆ ಪಬ್ ಗೆ ಹೋಗಿದ್ದ ಯುವತಿಗೆ ಅವಾಜ್ ಹಾಕಿದ್ದರು. ಯುವತಿಗೆ ಅವಾಜ್ ಹಾಕಿದ್ದೂ ಅಲ್ಲದೆ ಅಣ್ಣನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದರು. ಕೋರಮಂಗಲದ ಬದ್ಮಾಶ್ ಹ್ಯಾಂಗ್ ಓವರ್ ಪಬ್ ನಲ್ಲಿ ಘಟನೆ ನಡೆದಿತ್ತು ಎನ್ನುವುದು ಕನ್ನಡ ಹೋರಾಟಗಾರರ ಆರೋಪ.
ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನ: ಪಬ್‌ನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಧಮ್ಕಿ..?
ಡಿಜೆ ಸಿದ್ದಾರ್ಥ್ ಅಲಿಯಾಸ್ ಡಿಜೆ ಆಪೊಸಿಟ್ ಹಲ್ಲೆ ಮಾಡಲು ಮುಂದಾಗಿದ್ದ. ಒಂದೇ ಒಂದು ಕನ್ನಡ ಹಾಡು ಹಾಕಿ ಅಂತಾ ರಿಕ್ವೆಸ್ಟ್ ಮಾಡಿದ್ರು ಹಾಕದ ಡಿಜೆ ದರ್ಪ ತೋರಿಸಿದ್ದ. ಕನ್ನಡ ಸಾಂಗ್ ಹಾಕಲಿಕ್ಕೆ ಆಗಲ್ಲ.. ಕನ್ನಡ ಸಾಂಗ್ ಕೇಳೋದಾದ್ರೆ ಹೊರಗ್ ಹೋಗಿ ಎಂದು ದಬಾಯಿಸಿದ್ದ.
ರಾತ್ರಿ 8:30 ರಿಂದ 12:30 ರ ವರೆಗೂ, ಸತತ 3 ಗಂಟೆಗಳ ಕಾಲ ಯುವತಿ ರಿಕ್ವೆಸ್ಟ್ ಮಾಡಿಕೊಂಡರೂ ಕೇಳಿರಲಿಲ್ಲ ಯುವತಿ ಸುಮಿತ ಹಾಗೂ ಆತನ ಸಹೋದರ ನಂದಕಿಶೋರ್ ಮೇಲೆ ಹಲ್ಲೆಗೂ ಇದೇ ಸಂದರ್ಭದಲ್ಲಿ ಯತ್ನಿಸಲಾಗಿದೆ. ವಿವೇಕನಗರದ ನಿವಾಸಿ ಸುಮಿತ ಎಂಬಾಕೆ ಬರ್ತಡೆ ಆಚರಣೆಗೆ ಪಬ್ ಗೆ ತೆರಳಿದ್ದರು. ನನ್ನ ಬರ್ತ್ ಡೇ ಒಂದು ಕನ್ನಡ ಹಾಡನ್ನ ಪ್ಲೇ ಮಾಡಿ ಎಂದು ರಿಕ್ವೇಸ್ಟ್ ಮಾಡ್ಕೊಂಡಿದ್ದಕ್ಕೆ
ಕನ್ನಡ ಗಿನ್ನಡ ಇಲ್ಲ, ಕನ್ನಡ ಬೇಕು ಅಂದ್ರೇ ಈ ಪಬ್ ಗೆ ಬರಬೇಡಿ ಎಂದು ಡಿಜೆ ಆವಾಜ್ ಹಾಕಿದ್ದ.
ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತು. ಗಂಭೀರವಾಗಿ ತೆಗೆದುಕೊಂಡ ಕರವೇ ಕನ್ನಡ ಪ್ರಕಾಶ್ ಮತ್ತು ಅವರ ತಂಡ ಪಬ್ ಗೆ ತೆರಳೀ ಬುದ್ಧಿ ಕಲಿಸಿದೆ. ಹ್ಯಾಂಗೋವರ್ ಪಬ್ ಒಳಗೆ ಪ್ರತಿಭಟನೆ ನಡೆಸಿದ್ದು ಡಿಜೆ ಕ್ಷಮೆ ಕೇಳುವಂತೆ ಆಗ್ರಹಿಸಿತು.
ಹ್ಯಾಂಗೋವರ್ ಪಬ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಕನ್ನಡ ಹಾಡು ಹಾಕಿಸಿ ನಂತರ ನೃತ್ಯ ಮಾಡಲಾಗಿದೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮಹಿಳಾ ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ. ಅವಾಜ್ ಹಾಕಿದ್ದ ಡಿಜೆ ಕ್ಷಮೆ ಕೇಳಿದ್ದಾನೆ.
