Asianet Suvarna News Asianet Suvarna News

Bengaluru Crime ತಡೆಯಲು ಕೇಂದ್ರದ ಪ್ಲಾನ್: ಪೊಲೀಸರ ಕೈಸೇರಿದೆ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌

Bengaluru City Police: ಬೆಂಗಳೂರು ಪೊಲೀಸರು ಅಪರಾಧ ಕೃತ್ಯಗಳ ಪತ್ತೆ ಮತ್ತು ತಡೆ ಹಿಡಿಯಲು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕೇಂದ್ರ ಗೃಹ ಇಲಾಖೆ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಮತ್ತು ವಿಶೇಷ ಆಪ್‌ ಒಂದನ್ನು ನೀಡಿದ್ದು, ಈಗಾಗಲೇ ರಾತ್ರಿ ಹೊತ್ತು ಅನವಶ್ಯಕವಾಗಿ ತಿರುಗಾಡುವವರನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

bengaluru police to adopt finger print scanner to instantly check crime records of suspects
Author
First Published Sep 13, 2022, 4:32 PM IST

ವರದಿ: ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು: ಅಮೆರಿಕಾದಂತ ದೇಶಗಳಲ್ಲಿ ಪ್ರತಿಯೊಬ್ಬ ನಾಗರಿಕನ ಫಿಂಗರ್‌ ಪ್ರಿಂಟ್‌, ಡಿಎನ್‌ಎ ಮತ್ತಿತರ ಮುಖ್ಯ ಮಾಹಿತಿಗಳು ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ಬಳಿ ಇರುತ್ತವೆ. ಯಾವುದಾದರೂ ಪ್ರಕರಣದಲ್ಲಿ ಫಿಂಗರ್‌ ಪ್ರಿಂಟ್‌ ಸಿಕ್ಕರೆ, ತಮ್ಮ ಬಳಿ ಇರುವ ಡೇಟಾ ಜೊತೆಗೆ ತಾಳೆ ನೋಡಿ ಪರಿಶೀಲಿಸಲಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳು ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅಂತದ್ದೇ ಒಂದು ಅಡ್ವಾನ್ಸ್ಡ್‌ ಟೆಕ್ನಾಲಕಿ ಬೆಂಗಳೂರಿನಲ್ಲೂ ಶೀಘ್ರ ಬರಲಿದೆ. ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನ ತಡೆಯೋಕೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಅಪರಾಧ ಕೃತ್ಯಗಳ ತಡೆ ಹಾಗೂ ಕ್ರಿಮಿನಲ್​ಗಳನ್ನ ಬಂಧಿಸಲು ಸಹಾಯವಾಗುವ ಹೊಸ ಆ್ಯಪ್​ವೊಂದನ್ನು ಕೇಂದ್ರ ಗೃಹ ಇಲಾಖೆ ಪರಿಚಯಿಸಿದೆ.

ಬೆಂಗಳೂರು ಪೊಲೀಸರ ಕೈ ಸೇರಿದ ಹೊಸ ಆಪ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನರು ರಾತ್ರಿ ಹಗಲು ಎನ್ನದೇ ಕೆಲಸ ಮಾಡ್ತಾರೆ. ಅದರಲ್ಲೂ ಐಟಿ-ಬಿಟಿ ಹಾಗೂ ಎಮ್‌ಎನ್‌ಸಿ ಕಂಪನಿಗಳಲ್ಲಿ ಕೆಲಸ ಮಾಡೋರು ತಡರಾತ್ರಿಯಾದ್ರೂ ಓಡಾಡ್ತಾನೆ ಇರ್ತಾರೆ. ಇದದನ್ನೇ ಬಂಡವಾಳ ಮಾಡಿಕೊಳ್ಳುವ ಕ್ರಿಮಿನಲ್‌ಗಳು, ತಡರಾತ್ರಿ ಓಂಟಿಯಾಗಿ ಓಡಾಡೋರನ್ನು ಅಡ್ಡಹಾಕಿ ಸುಲಿಗೆ ಮಾಡ್ತಾರೆ. ಅಷ್ಟೇ ಅಲ್ಲದೆ ನಗರದಲ್ಲಿ ಇತ್ತೀಚೆಗೆ ಕೊಲೆ, ದರೋಡೆಯಂತಹ ಅಪರಾಧಗಳು ಹೆಚ್ಚುತ್ತಲೇ ಇವೆ. ಹೀಗಾಗಿಯೇ ನಗರಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ತಡೆಗೆಂದು ಕೇಂದ್ರ ಗೃಹ ಇಲಾಖೆ ಹೊಸದೊಂದು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಎಮ್‌ಸಿಸಿಟಿಎನ್ಎಸ್ ಅನ್ನೋ ಆ್ಯಪ್​ ಅನ್ನು ಪ್ರಾಯೋಗಿಕವಾಗಿ ಬೆಂಗಳೂರು ಪೊಲೀಸರಿಗೆ ಪರಿಚಯಿಸಿದ್ದು, ಪೊಲೀಸರು ಈಗಾಗಲೇ ಫೀಲ್ಡಿಗಿಳಿದು ಈ ಆ್ಯಪ್​ನ ಬಳಕೆ ಮಾಡ್ತಿದ್ದಾರೆ.

ಇದನ್ನೂ ಓದಿ: Phone Battery: ಚಾರ್ಜ್‌ ಆಗುತ್ತಿದ್ದ ಅಮ್ಮನ ಫೋನ್‌ ಸ್ಫೋಟ: ಬಲಿಯಾದ 8 ತಿಂಗಳ ಕಂದಮ್ಮ

ಬೆರಳಚ್ಚು ಮೂಲಕ ಅಪರಾಧಿಗಳ ಪತ್ತೆಕಾರ್ಯ:

ಎಮ್‌ಸಿಸಿಟಿಎನ್ಎಸ್​ ಅನ್ನೋ ಈ ಹೊಸ ಆ್ಯಪ್‌ ಅನ್ನು ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಲಾಗಿದ್ದು, ಇದರಲ್ಲಿ ಕ್ರಿಮಿನಲ್ಸ್​ಗಳ ಹಿಸ್ಟರಿ ಸೇರಿದಂತೆ ಇತರೆ ಎಲ್ಲ ಮಾಹಿತಿ ಲಭ್ಯವಿರಲಿದೆ. ಒಮ್ಮೆ ಒಬ್ಬರ ಫಿಂಗರ್​ ಪ್ರಿಂಟ್​ ಅನ್ನು ಸ್ಕ್ಯಾನರ್​ನಲ್ಲಿ ತೆಗೆದುಕೊಂಡರೆ ಸಾಕು, ಅದು ಆ್ಯಪ್​ನಲ್ಲಿರುವ ಅಪರಾಧಿಗಳ ಫಿಂಗರ್​ ಪ್ರಿಂಟ್​ ಜೊತೆ ಮ್ಯಾಚ್​ ಆದ್ರೆ, ಆ ವ್ಯಕ್ತಿಯ ಪೂರ್ವಾಪರ ಕ್ಷಣ ಮಾತ್ರದಲ್ಲಿ ಪೊಲೀಸ್ರಿಗೆ ಸಿಗುತ್ತದೆ. ಇದರಿಂದಾಗಿ ತಲೆಮರೆಸಿಕೊಂಡು ಸುತ್ತಾಡುತ್ತಿರುವ ಆರೋಪಿಗಳು ಸುಲಭವಾಗಿ ಪೊಲೀಸ್ರ ಬಲೆಗೆ ಬೀಳುತ್ತಾರೆ. ಈ ಕಾರಣದಿಂದಲೇ ನಗರದ ಪ್ರತಿ ಸ್ಟೇಷನ್‌ಗೆ ತಲಾ ಐದರಂತೆ ಸ್ಕ್ಯಾನರ್​ಗಳನ್ನು ಹಾಗೂ ಮೊಬೈಲ್​ಗಳಿಗೆ ಆ್ಯಪ್​ಗಳನ್ನ ಅವಳವಡಿಸಿಕೊಡಲಾಗಿದೆ. ರಾತ್ರಿ 11 ಗಂಟೆ ನಂತರ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ಜನರ ಬೆರಳಚ್ಚನ್ನು ಸ್ಕ್ಯಾನ್​ ಮಾಡಿಸುತ್ತಿದ್ದಾರೆ. ಈ ಕೆಲಸ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದ, ಕೆಲವು ಕಡೆ ಈ ಆ್ಯಪ್​ ಸಹಾಯದಿಂದ ಆರೋಪಗಳ ಬಂಧನ ಸಹ ಆಗಿದೆಯಂತೆ. 

ಇದನ್ನೂ ಓದಿ: ಬಿಜೆಪಿ ಶಾಸಕನ ತಾಯಿಯ ಕಿವಿ ಕತ್ತರಿಸಿ ಕಿವಿಯೋಲೆ ಕದ್ದ ಕಳ್ಳರು!

ಸ್ಕ್ಯಾನ್​ ಮಾಡುವ ವೇಳೆ ಯಾರಾದ್ರೂ ಅಪರಾಧ ಹಿನ್ನಲೆ ಇರುವ ವ್ಯಕ್ತಿ ಸಿಕ್ಕಿ ಬಿದ್ರೆ, ಕೂಡಲೇ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಇಲಾಖೆ ತೀಮಾರ್ನಿಸಿದೆ. ಹೀಗಾಗಿಯೇ ಯಾವುದೇ ಕ್ರಿಮಿನಲ್ ಸುಳ್ಳು ಹೇಳಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ.

Follow Us:
Download App:
  • android
  • ios