1 ಕೋಟಿ ಮೌಲ್ಯದ ಗಾಂಜಾ ವಶ: ರಾಜಕಾರಣಿ ಸೇರಿ ಮೂವರ ಸೆರೆ
ಬೆಂಗಳೂರು 1 ಕೋಟಿ ಮೌಲ್ಯದ ಗಾಂಜಾ ವಶ| ಸಿಸಿಬಿ ಪೊಲೀಸರ ಭರ್ಜರಿ ಬೇಟೆ| 204 ಕೆ.ಜಿ ಗಾಂಜಾ ಜಪ್ತಿ| ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ಪ್ರತಿ ಕೆ.ಜಿ ಗಾಂಜಾಗೆ 40 ಸಾವಿರಕ್ಕೆ ನೀಡಿ ಖರೀದಿಸಿ ತರುತ್ತಿದ್ದ ಆರೋಪಿಗಳು| ಕರ್ನಾಟಕದ ಪೆಡ್ಲರ್‌ಗಳಿಗೆ ತಲಾ ಕೆ.ಜಿ.ಗೆ 50 ರಿಂದ 70 ಸಾವಿರಕ್ಕೆ ಮಾರಾಟ|
ಬೆಂಗಳೂರು(ಆ.28): ಹೊರ ರಾಜ್ಯಗಳಿಂದ ಕ್ವಿಂಟಾಲ್ ಗಟ್ಟಲೇ ಗಾಂಜಾ ತಂದು ರಾಜ್ಯದಲ್ಲಿ ವಿತರಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ, ಪ್ರಮುಖ ಪೂರೈಕೆದಾರರಾದ ಮೈಸೂರು ಮೂಲದ ರಾಜಕಾರಣಿ ಸೇರಿದಂತೆ ಮೂವರನ್ನು ಸೆರೆ ಹಿಡಿದಿದೆ.
ಮೈಸೂರಿನ ಕೆ.ಆರ್.ಪುರದ ಸಮೀರ್, ಕೈಸರ್ ಪಾಷ ಅಲಿಯಾಸ್ ಜಾಕೀರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಇಸ್ಮಾಯಿಲ್ ಶರೀಫ್ ಬಂಧಿತರಾಗಿದ್ದು, ಆರೋಪಿಗಳಿಂದ .1 ಕೋಟಿ ಮೌಲ್ಯದ 204 ಕೆ.ಜಿ ಗಾಂಜಾ, ಮೂರು ಮೊಬೈಲ್‌ಗಳು ಹಾಗೂ ಲಾರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆಂಧ್ರಪ್ರದೇಶದಿಂದ ಕಂಟೈನರ್ ಲಾರಿಯಲ್ಲಿ ಎರಡು ಕ್ವಿಂಟಾಲ್ ಗಾಂಜಾ ತಂದಿದ್ದ ಆರೋಪಿಗಳು, ದೇವನಹಳ್ಳಿ ಸಮೀಪ ರಾಜ್ಯದ ಇತರೆಡೆ ಸಾಗಿಸಲು ಕಾರಿಗೆ ತುಂಬುತ್ತಿದ್ದರು. ಆಗ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಸಮೀರ್ ತಂಡವನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಕಬಾಬ್ ಜೊತೆ ಗಾಂಜಾ ಮಾರಾಟ: ಇಬ್ಬರ ಬಂಧನ
ಹೊರ ರಾಜ್ಯಕ್ಕೂ ಸಪ್ಲೈ:
ಹಲವು ವರ್ಷಗಳಿಂದ ಆರೋಪಿಗಳು ದಂಧೆಯಲ್ಲಿ ತೊಡಗಿರುವುದು ಗೊತ್ತಾಗಿದ್ದು, ಇದೇ ಮೊದಲ ಬಾರಿಗೆ ಬಂಧಿತರಾಗಿದ್ದಾರೆ. ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಾತ್ರವಲ್ಲದೆ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಹ ಆರೋಪಿಗಳು ಗಾಂಜಾ ಪೂರೈಸಿರುವ ಮಾಹಿತಿ ಸಿಕ್ಕಿದೆ ಎಂದು ಆಯುಕ್ತರು ಹೇಳಿದ್ದಾರೆ.
ಪ್ರತಿ ತಿಂಗಳು ಗಾಂಜಾ ಸಾಗಾಣೆ:
ಸಮೀರ್, ಕೈಸರ್ ಹಾಗೂ ಇಸ್ಮಾಯಿಲ್ ಸ್ನೇಹಿತರಾಗಿದ್ದು, ಹಣದಾಸೆಗೆ ಗಾಂಜಾ ದಂಧೆಯಲ್ಲಿ ತೊಡಗಿದ್ದರು. ಹತ್ತು ವರ್ಷಗಳಿಂದ ಕಂಟೈನರ್ ಚಾಲಕನಾಗಿದ್ದ ಸಮೀರ್, ಸರಕು ಸಾಗಾಣಿಕೆ ಸಲುವಾಗಿ ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಉತ್ತರ ಭಾರತಕ್ಕೆ ತೆರಳುತ್ತಿದ್ದ. ಅಲ್ಲಿಂದ ಮರಳುವಾಗ ಸಮೀರ್ ಖಾಲಿ ಕಂಟೈನರ್‌ನಲ್ಲಿ ಆಂಧ್ರಪ್ರದೇಶದಿಂದ ಗಾಂಜಾ ತುಂಬಿಕೊಂಡು ಬೆಂಗಳೂರಿಗೆ ಬರುತ್ತಿದ್ದ. ನಂತರ ಬೆಂಗಳೂರಿನಿಂದ ಇತರೆಡೆಗೆ ಗಾಂಜಾ ಹಂಚಿಕೆಯಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಶಿವಾರೆಡ್ಡಿ ಗ್ಯಾಂಗ್ ಲಿಂಕ್:
ಈ ಆರೋಪಿಗಳಿಗೆ ಆಂಧ್ರಪ್ರದೇಶದ ಕುಖ್ಯಾತ ಗಾಂಜಾ ಮಾರಾಟಗಾರ ಶಿವಾರೆಡ್ಡಿ ಗಾಂಜಾ ಮಾರುತ್ತಿದ್ದ. ಅಂತೆಯೇ ಆ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯ ತುನಿ ಎಂಬ ಗ್ರಾಮದಿಂದ ಕಂಟೈನರ್‌ನಲ್ಲಿ ಗಾಂಜಾ ತುಂಬಿಕೊಂಡು ದೇವನಹಳ್ಳಿಗೆ ಬುಧವಾರ ರಾತ್ರಿ ಸಮೀರ್ ಬಂದಿದ್ದ. ಆ ವೇಳೆ ಆತನೊಂದಿಗೆ ಕೈಸರ್ ಹಾಗೂ ಇಸ್ಮಾಯಿಲ್ ಕೂಡ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕಾಗಿ ವ್ಯವಸ್ಥಿತವಾಗಿ ಜಾಲವೊಂದು ಕಾರ್ಯನಿರ್ವಹಿಸುತ್ತಿತ್ತು. ಬೆಂಗಳೂರು, ಮೈಸೂರು, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಸಬ್ ಪೆಡ್ಲರ್‌ಗಳ ಮೂಲಕ ಗಾಂಜಾ ಬಿಕರಿಯಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಕಪ್, ಕಾರಿನಲ್ಲಿ 175 ಕೆ.ಜಿ. ಗಾಂಜಾ ಸಾಗಾಟ
ಕೆಳದ ತಿಂಗಳು ಸಹ 300 ಕೆ.ಜಿ. ವಹಿವಾಟು:
ಕಳೆದ ತಿಂಗಳು ಸಹ ಆಂಧ್ರಪ್ರದೇಶದಿಂದ ಸುಮಾರು 300 ಕೆ.ಜಿಯಷ್ಟುಗಾಂಜಾ ತಂದು ಆರೋಪಿಗಳು ಮಾರಾಟ ಮಾಡಿದ್ದರು. ಅಂದು ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ ಆರೋಪಿಗಳು, ಕೊನೆಗೆ ಸೆರೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಲಭೆಗೂ ಗಾಂಜಾ ನಂಟು:
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಕೋರರಲ್ಲಿ ಕೆಲವರು ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ತಪಾಸಣೆ ವೇಳೆ ಗೊತ್ತಾಗಿದೆ. ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಪಾಲಿಕೆ ಚುನಾವಣೆ ಸ್ಪರ್ಧಿಸಿ ಸೋಲು
ಮೈಸೂರಿನ ಸಮೀರ್ ಹಾಗೂ ಕೈಸರ್ ಪಾಷ, ಗಾಂಜಾ ದಂಧೆಯಲ್ಲಿ ಕೋಟಿಗಟ್ಟಲೇ ಹಣ ಸಂಪಾದಿಸಿದ್ದರು. ಶ್ರೀಮಂತಿಕೆ ಬಂದ ನಂತರ ಕೈಸರ್, ಸ್ಥಳೀಯವಾಗಿ ರಾಜಕೀಯ ಶುರು ಮಾಡಿದ್ದ. ಮೈಸೂರಿನ ಮಹಾನಗರ ಪಾಲಿಕೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಕೆಲವೇ ಮತಗಳಿಂದ ಕೈಸರ್ ಸೋಲುಂಡಿದ್ದ. ಕೆಲ ಪೊಲೀಸ್ ಅಧಿಕಾರಿಗಳು ಆತನಿಂದ ಫಲಾನುಭವಿಗಳಾಗಿದ್ದರು. ಹೀಗಾಗಿ ದಂಧೆ ನಿರಾಂತಕವಾಗಿ ನಡೆದಿತ್ತು ಎಂದು ತಿಳಿದು ಬಂದಿದೆ.
ಹಣದಾಸೆ ತೋರಿಸಿ ಇಸ್ಮಾಯಿಲ್‌ನನ್ನು ದಂಧೆಗೆ ಸಮೀರ್ ಬಳಸಿಕೊಂಡಿದ್ದ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಹೊಸಕೋಟೆ ಪ್ರದೇಶಗಳಿಗೆ ಗಾಂಜಾ ಪೂರೈಕೆ ಉಸ್ತುವಾರಿಯನ್ನು ಇಸ್ಮಾಯಿಲ್ ಹೊತ್ತಿದ್ದ. ಐದಾರು ವರ್ಷಗಳಿಂದ ದಂಧೆ ನಡೆಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಟೈನರ್ ಬಳಕೆ ಯಾಕೆ?
ಹೊಸ ಹನಗಳ ಸಾಗಾಣಿಕೆ ಕಾರಣಕ್ಕೆ ಕಂಟೈನರ್‌ಗಳನ್ನು ಹೆಚ್ಚಿನದಾಗಿ ಪೊಲೀಸರು ತಪಾಸಣೆ ನಡೆಸುವುದಿಲ್ಲ. ಇದನ್ನೇ ಬಳಸಿಕೊಂಡ ಸಮೀರ್, ಹೊರ ರಾಜ್ಯಗಳಲ್ಲಿ ಸರಕು ತಲುಪಿಸಿ ಬೆಂಗಳೂರಿಗೆ ಮರಳುವಾಗ ಗಾಂಜಾ ತುಂಬಿಕೊಂಡು ಬರುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆ.ಜಿಗೆ 15 ರಿಂದ 20 ಸಾವಿರ ಲಾಭ:
ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ಪ್ರತಿ ಕೆ.ಜಿ ಗಾಂಜಾಗೆ .40 ಸಾವಿರಕ್ಕೆ ನೀಡಿ ಖರೀದಿಸಿ ತರುತ್ತಿದ್ದ ಆರೋಪಿಗಳು, ಕರ್ನಾಟಕದ ಪೆಡ್ಲರ್‌ಗಳಿಗೆ ತಲಾ ಕೆ.ಜಿ.ಗೆ 50 ರಿಂದ 70 ಸಾವಿರಕ್ಕೆ ಮಾರುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಶ್ರೀಮಂತರೇ ಹೆಚ್ಚಿನ ಗ್ರಾಹಕರಾಗಿದ್ದರು. ಈ ಆರೋಪಿಗಳಿಂದ ಗಾಂಜಾ ಖರೀದಿಸಿ ಸಬ್ ಪೆಡ್ಲರ್‌ಗಳು, ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ತುಂಬಿ ಸಾರ್ವಜನಿಕರಿಗೆ ಮಾರುತ್ತಿದ್ದರು ಎಂದು ತಿಳಿದುಬಂದಿದೆ.
ಈ ಗಾಂಜಾ ಪತ್ತೆಯಾಗದೆ ಹೋಗಿದ್ದರೆ ಸುಮಾರು ಎರಡು ಲಕ್ಷ ಮಂದಿ ಕೈ ಸೇರುತ್ತಿತ್ತು. ರಾಜ್ಯವನ್ನು ಮಾದಕ ವಸ್ತು ಮುಕ್ತವಾಗಿಸಲು ಗೃಹ ಸಚಿವರು ಘೋಷಿಸಿದ್ದಾರೆ. ಡ್ರಗ್ಸ್ ದಂಧೆಯನ್ನು ಸಹಿಸುವುದಿಲ್ಲ. ನಿರಂತರ ಕಾರ್ಯಾಚರಣೆ ನಡೆಯಲಿದೆ.
ಮೈಸೂರಿನ ರಾಜಕಾರಣಿ ಸೇರಿ ಮೂವರ ಸೆರೆ
ಹೊರ ರಾಜ್ಯಗಳಿಂದ ಕ್ವಿಂಟಾಲ್ ಗಟ್ಟಲೇ ಗಾಂಜಾ ತಂದು ರಾಜ್ಯದಲ್ಲಿ ವಿತರಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ, ಪ್ರಮುಖ ಪೂರೈಕೆದಾರರಾದ ಮೈಸೂರು ಮೂಲದ ರಾಜಕಾರಣಿ ಸೇರಿದಂತೆ ಮೂವರನ್ನು ಸೆರೆ ಹಿಡಿದಿದೆ.
ಮೈಸೂರಿನ ಕೆ.ಆರ್.ಪುರದ ಸಮೀರ್, ಕೈಸರ್ ಪಾಷ ಅಲಿಯಾಸ್ ಜಾಕೀರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಇಸ್ಮಾಯಿಲ್ ಶರೀಫ್ ಬಂಧಿತರಾಗಿದ್ದು, ಆರೋಪಿಗಳಿಂದ .1 ಕೋಟಿ ಮೌಲ್ಯದ 204 ಕೆ.ಜಿ ಗಾಂಜಾ, ಮೂರು ಮೊಬೈಲ್‌ಗಳು ಹಾಗೂ ಲಾರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆಂಧ್ರಪ್ರದೇಶದಿಂದ ಕಂಟೈನರ್ ಲಾರಿಯಲ್ಲಿ ಎರಡು ಕ್ವಿಂಟಾಲ್ ಗಾಂಜಾ ತಂದಿದ್ದ ಆರೋಪಿಗಳು, ದೇವನಹಳ್ಳಿ ಸಮೀಪ ರಾಜ್ಯದ ಇತರೆಡೆ ಸಾಗಿಸಲು ಕಾರಿಗೆ ತುಂಬುತ್ತಿದ್ದರು. ಆಗ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಸಮೀರ್ ತಂಡವನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಉಡುಪಿ; ಲಾರಿಯೊಳಗಿನ ಬಿದಿರಿನ ಒಳಗಿತ್ತು 49 ಕೆಜಿ ಗಾಂಜಾ!
ಹೊರ ರಾಜ್ಯಕ್ಕೂ ಸಪ್ಲೈ:
ಹಲವು ವರ್ಷಗಳಿಂದ ಆರೋಪಿಗಳು ದಂಧೆಯಲ್ಲಿ ತೊಡಗಿರುವುದು ಗೊತ್ತಾಗಿದ್ದು, ಇದೇ ಮೊದಲ ಬಾರಿಗೆ ಬಂಧಿತರಾಗಿದ್ದಾರೆ. ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಾತ್ರವಲ್ಲದೆ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಹ ಆರೋಪಿಗಳು ಗಾಂಜಾ ಪೂರೈಸಿರುವ ಮಾಹಿತಿ ಸಿಕ್ಕಿದೆ ಎಂದು ಆಯುಕ್ತರು ಹೇಳಿದ್ದಾರೆ.
ಪ್ರತಿ ತಿಂಗಳು ಗಾಂಜಾ ಸಾಗಾಣೆ:
ಸಮೀರ್, ಕೈಸರ್ ಹಾಗೂ ಇಸ್ಮಾಯಿಲ್ ಸ್ನೇಹಿತರಾಗಿದ್ದು, ಹಣದಾಸೆಗೆ ಗಾಂಜಾ ದಂಧೆಯಲ್ಲಿ ತೊಡಗಿದ್ದರು. ಹತ್ತು ವರ್ಷಗಳಿಂದ ಕಂಟೈನರ್ ಚಾಲಕನಾಗಿದ್ದ ಸಮೀರ್, ಸರಕು ಸಾಗಾಣಿಕೆ ಸಲುವಾಗಿ ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಉತ್ತರ ಭಾರತಕ್ಕೆ ತೆರಳುತ್ತಿದ್ದ. ಅಲ್ಲಿಂದ ಮರಳುವಾಗ ಸಮೀರ್ ಖಾಲಿ ಕಂಟೈನರ್‌ನಲ್ಲಿ ಆಂಧ್ರಪ್ರದೇಶದಿಂದ ಗಾಂಜಾ ತುಂಬಿಕೊಂಡು ಬೆಂಗಳೂರಿಗೆ ಬರುತ್ತಿದ್ದ. ನಂತರ ಬೆಂಗಳೂರಿನಿಂದ ಇತರೆಡೆಗೆ ಗಾಂಜಾ ಹಂಚಿಕೆಯಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಶಿವಾರೆಡ್ಡಿ ಗ್ಯಾಂಗ್ ಲಿಂಕ್:
ಈ ಆರೋಪಿಗಳಿಗೆ ಆಂಧ್ರಪ್ರದೇಶದ ಕುಖ್ಯಾತ ಗಾಂಜಾ ಮಾರಾಟಗಾರ ಶಿವಾರೆಡ್ಡಿ ಗಾಂಜಾ ಮಾರುತ್ತಿದ್ದ. ಅಂತೆಯೇ ಆ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯ ತುನಿ ಎಂಬ ಗ್ರಾಮದಿಂದ ಕಂಟೈನರ್‌ನಲ್ಲಿ ಗಾಂಜಾ ತುಂಬಿಕೊಂಡು ದೇವನಹಳ್ಳಿಗೆ ಬುಧವಾರ ರಾತ್ರಿ ಸಮೀರ್ ಬಂದಿದ್ದ. ಆ ವೇಳೆ ಆತನೊಂದಿಗೆ ಕೈಸರ್ ಹಾಗೂ ಇಸ್ಮಾಯಿಲ್ ಕೂಡ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕಾಗಿ ವ್ಯವಸ್ಥಿತವಾಗಿ ಜಾಲವೊಂದು ಕಾರ್ಯನಿರ್ವಹಿಸುತ್ತಿತ್ತು. ಬೆಂಗಳೂರು, ಮೈಸೂರು, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಸಬ್ ಪೆಡ್ಲರ್‌ಗಳ ಮೂಲಕ ಗಾಂಜಾ ಬಿಕರಿಯಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.