* ಹನಿಟ್ಟ್ಯಾಪ್ ಮಾಡುತ್ತಿದ್ದ ಸುಂದರಿ ಬೆಂಗಳೂರು ಪೊಲೀಸರ ಬಲೆಗೆ..* ಪ್ರಭಾವಿಗಳನ್ನೆ ಟಾರ್ಗೆಟ್ ಮಾಡುತ್ತಿದ್ದ ಕಾವ್ಯಾ ಅರೆಸ್ಟ್...* ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ *  ಹೈ ಪ್ರೊಫೈಲ್  ವ್ಯಕ್ತಿಗಳನ್ನೆ ಟಾರ್ಗೆಟ್ ಮಾಡ್ತಿದ್ಲು ಚೆಲುವೆ

ಬೆಂಗಳೂರು(ಅ.14): ಪ್ರಭಾವಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್(Honey Trap) ಮಾಡುತ್ತಿದ್ದ ಸುಂದರಿ ಸದ್ಯ ಬೆಂಗಳೂರು ಪೊಲೀಸರ(Bengaluru Police) ಬಲೆಗೆ ಬಿದ್ದಿದ್ದಾಳೆ. ಹೌದು ತನ್ನ ಸುಂದರ ಮೈಮಾಟದಿಂದ ಹೈಪ್ರೊಫೈಲ್ ವ್ಯಕ್ತಿಗಳನ್ನು ಖೆಡ್ಡಾಗೆ ಬೀಳಿಸುತ್ತಿದ್ದ ಯುವತಿ ಅರೆಸ್ಟ್‌ ಆಗಿದ್ದು, ಈಕೆ ರಾಷ್ಟ್ರೀಯ ಪಕ್ಷದ ಜೊತೆ ನಿಕಟ ಸಂಪರ್ಕ ಹೊಂದಿದ್ದಳೆಂಬ ಮಾಹಿತಿ ಲಭ್ಯವಾಗಿದೆ.

ಹೌದು ಐಎಎಸ್, ಐಪಿಎಸ್, ಐಎಫ್ ಎಸ್ ಅಧಿಕಾರ ಟಾರ್ಗೆಟ್ ಮಾಡುತ್ತಿದ್ದ ಸುಂದರಿ, ಕಾವ್ಯಾ(ಹೆಸರು ಬದಲಾಯಿಸಲಾಗಿದೆ) ಮೈಮಾಟಕ್ಕೆ ಅನೇಕರು ಮಾರುಹೋಗಿದ್ದಾರೆ. ಇನ್ನು ಈ ಯುವತಿ ರಾಷ್ಟ್ಯೀಯ ಪಕ್ಷವೊಂದರ ಸದಸ್ಯೆಯಾಗಿದ್ದು, ತಮಿಳುನಾಡಿನ (Tamil Nadu) ಇನ್ಚಾರ್ಜ್ ಆಗಿದ್ದಾರೆ. ಗಣ್ಯರಿಗೇ ಗಾಳ ಹಾಕುತ್ತಿದ್ದ ಕಾವ್ಯಾ ಅವರುಗಳ ಜೊತೆ ಸ್ನೇಹ ಗಳಿಸಿ ಸಂಭಂದ ಬೆಳೆಸುತ್ತಿದ್ದಳು. ಬಳಿಕ ಫೋಟೋ, ವಿಡಿಯೋ ಇದೆ ಎಂದು ಹೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಳು. 

ಇದೇ ರೀತಿ ನಗರದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರ ಜೊತೆ ಸಲುಗೆ ಬೆಳಸಿದ್ದ ಕಾವ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ಕಾಂಟ್ರಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದಾರೆ. ಕೇಸ್ ದಾಖಲಿಸಿದ ಪೊಲೀಸರು ಆದರೀಗ ಕೊನೆಗೂ ಐಎಎಸ್, ಐಪಿಎಸ್, ಐಎಫ್ ಎಸ್, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಗಾಳ ಹಾಕುತ್ತಿದ್ದ ಈ ಮಹಿಳೆಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 

ಒರಿಸ್ಸಾದಲ್ಲಿ ಬಿರುಗಾಳಿ ಎಬ್ಬಿಸಿದ ಹನಿ ಟ್ರ್ಯಾಪ್: ತುಪ್ಪಕ್ಕಾಗಿ ಜಾರಿ ಹಳ್ಳದಲ್ಲಿ ಬಿದ್ದವರೆಷ್ಟು?

ಕಾವ್ಯಾಳನ್ನು ಬಂಧಿಸಿ ವಿಚಾರಣೆ ವೇಳೆ ಆಕೆಯ ಕತರ್ನಾಕ್ ಹಿಸ್ಟರಿ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದವನಿಗೆ ಸಿಕ್ಕಿದ್ದು ಬರೀ 3000..!
ಇನ್ನು ಕೆಲ ದಿನಗಳ ಹಿಂದಷ್ಟೇ ಭಾರತೀಯ ಸೇನಾ(Indian Army) ನೆಲೆಗಳ ಕುರಿತು ಫೋಟೋ ಸಹಿತ ಮಾಹಿತಿ ನೀಡಿದ್ದ ರಾಜಸ್ಥಾನ ಮೂಲದ ತನ್ನ ‘ಗೂಢಚಾರಿ’ ಜಿನೇಂದ್ರ ಸಿಂಗ್‌ನಿಗೆ ಪಾಕಿಸ್ತಾನದ ಇಂಟರ್‌ ಸರ್ವೀಸಸ್‌ ಇಂಟೆಲಿಜೆನ್ಸಿ (ಐಎಸ್‌ಐ) ನೀಡಿದ್ದು ಕೇವಲ ಮೂರು ಸಾವಿರ ರು. ಮಾತ್ರ ಎಂಬ ಕುತೂಹಲಕಾರಿ ಸಂಗತಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಯಲ್ಲಿ ಬಯಲಾಗಿತ್ತು

ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಪ್ರಕರಣದ ಆರೋಪಿ ಜಿನೇಂದ್ರ ಸಿಂಗ್‌ನ ಖಾತೆಗೆ ಆನ್‌ಲೈನ್‌ ಮೂಲಕ ಮೂರು ಸಾವಿರ ರು. ಸಂದಾಯವಾಗಿದೆ. ಈ ಹಣ ವರ್ಗಾವಣೆ ಬಗ್ಗೆ ಪರಿಶೀಲಿಸಿದಾಗ ಆ ಮೊತ್ತವು ಪಾಕಿಸ್ತಾನದ ಕರಾಚಿ ವ್ಯಕ್ತಿಯಿಂದ ಜಮೆಯಾಗಿರುವುದು ಗೊತ್ತಾಗಿದೆ ಎಂದು ವಿಶ್ವಸನೀಯ ಉನ್ನತ ಮೂಲಗಳು ತಿಳಿಸಿದ್ದವು.

Bengaluru: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಸುಂದರಿಯಿಂದ ಹನಿಟ್ರ್ಯಾಪ್!

ತನ್ನ ಹನಿಟ್ರ್ಯಾಪ್‌ ಬಲೆಗೆ ಬಿದ್ದ ಜಿನೇಂದ್ರ ಸಿಂಗ್‌ನನ್ನು ಭಾರತೀಯ ಸೇನಾಧಿಕಾರಿಯೆಂದೇ ಆರಂಭದಲ್ಲಿ ಐಎಸ್‌ಐ ಭಾವಿಸಿದೆ. ಹೀಗಾಗಿ ಆತನಿಂದ ಭಾರಿ ಮಾಹಿತಿ ಸಿಗುವ ನಿರೀಕ್ಷೆ ಹೊಂದಿದ್ದ ಐಎಸ್‌ಐ ಏಜೆಂಟ್‌ಗಳು, ಜಿನೇಂದ್ರನಿಗೆ ಆತನ ‘ಫೇಸ್‌ಬುಕ್‌ ಸುಂದರಿ’ ಮೂಲಕ ಹಣದಾಸೆ ತೋರಿಸಿ ಪುಸಲಾಯಿಸಿದ್ದಾರೆ. ಅಂತೆಯೇ ರಾಜಸ್ಥಾನದಲ್ಲಿರುವ ಸೇನಾ ನೆಲೆಯೊಂದರ ಭಾವಚಿತ್ರವನ್ನು ‘ಫೇಸ್‌ಬುಕ್‌ ಸುಂದರಿ’ ಜತೆ ಹಂಚಿಕೊಂಡಿದ್ದಕ್ಕೆ ಪ್ರತಿಯಾಗಿ ಆತನ ಖಾತೆಗೆ ಹಣ ಜಮೆಯಾಗಿದೆ ಎಂದು ಮೂಲಗಳು ಹೇಳಿದ್ದವು