ಬೆಂಗಳೂರು: ಹೆಂಡ್ತಿ ಕಾಟ ತಾಳಲಾರದೆ ಓಡಿಹೋಗಿದ್ದ ಗಂಡ ಪತ್ತೆ..!
ಸ್ವಇಚ್ಛೆಯಿಂದ ನಾನು ಮನೆ ಬಿಟ್ಟು ಹೋಗಿದ್ದಾಗಿ ವಿಪಿನ್ ಗುಪ್ತಾ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಪತ್ನಿ ಶ್ರೀಪರ್ಣಾ ನನ್ನನ್ನು 2ನೇ ಮದುವೆಯಾಗಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನ್ನ ಮೇಲೆ ನಿಗಾ ವಹಿಸಲು ಮನೆ ಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾಳೆ. ಈಕೆಯ ವರ್ತನೆಯಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಹೀಗಾಗಿ ನಾನು ಮತ್ತೆ ಆಕೆಯ ಜತೆಗೆ ಸಂಸಾರ ಮಾಡುವುದಿಲ್ಲ. ನನ್ನನ್ನು ಜೈಲಿಗೆ ಕಳುಹಿಸಿ ಎಂದು ವಿಪಿನ್ ಗುಪ್ತಾ ಪೊಲೀಸರ ಬಳಿ ಅಂಗಲಾಚಿದ್ದಾರೆ.
ಬೆಂಗಳೂರು(ಆ.17): ಇತ್ತೀಚೆಗೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ವಿಪಿನ್ ಗುಪ್ತಾ (34) ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಉತ್ತರ ಪ್ರದೇಶದ ನೋಯ್ದಾದಲ್ಲಿ ಪತ್ತೆ ಹಚ್ಚಿ ನಗರಕ್ಕೆ ಕರೆತಂದಿದ್ದಾರೆ. ಆಶ್ಚರ್ಯ ಸಂಗತಿ ಎಂದರೆ, ನನಗೆ ಪತ್ನಿ ಜತೆಗೆ ಸಂಸಾರ ಮಾಡಲು ಆಗುವುದಿಲ್ಲ. ನಾನು ಮನೆಗೆ ಹೋಗುವುದಿಲ್ಲ. ಜೈಲಿಗೆ ಕಳುಹಿಸಿ ಎಂದು ವಿಪಿನ್ ಗುಪ್ತಾ ಪೊಲೀಸರ ಎದುರು ಮನವಿ ಮಾಡಿದ್ದಾರೆ.
ಸ್ವಇಚ್ಛೆಯಿಂದ ನಾನು ಮನೆ ಬಿಟ್ಟು ಹೋಗಿದ್ದಾಗಿ ವಿಪಿನ್ ಗುಪ್ತಾ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಪತ್ನಿ ಶ್ರೀಪರ್ಣಾ ನನ್ನನ್ನು 2ನೇ ಮದುವೆಯಾಗಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನ್ನ ಮೇಲೆ ನಿಗಾ ವಹಿಸಲು ಮನೆ ಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾಳೆ. ಈಕೆಯ ವರ್ತನೆಯಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಹೀಗಾಗಿ ನಾನು ಮತ್ತೆ ಆಕೆಯ ಜತೆಗೆ ಸಂಸಾರ ಮಾಡುವುದಿಲ್ಲ. ನನ್ನನ್ನು ಜೈಲಿಗೆ ಕಳುಹಿಸಿ ಎಂದು ವಿಪಿನ್ ಗುಪ್ತಾ ಪೊಲೀಸರ ಬಳಿ ಅಂಗಲಾಚಿದ್ದಾರೆ. ವಯಸ್ಕನಾಗಿರುವುದರಿಂದ ಆತ ಎಲ್ಲಿಗೆ ಹೋಗಬೇಕು ಎನ್ನುವುದು ಆತನೇ ನಿರ್ಧರಿಸ ಬೇಕು ಎಂದು ಪೊಲೀಸರು ಹೇಳಿದ್ದಾರೆ.
ಮೂವರು ಸುಪಾರಿ ಕಿಲ್ಲರ್ಸ್‌ನಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ: ಬೆಚ್ಚಿಬಿದ್ದ ಮುಳಬಾಗಿಲು!
ಪ್ರಕರಣದ ಹಿನ್ನೆಲೆ:
ಲಖನೌ ಮೂಲದ ವಿಪಿನ್ ಗುಪ್ತಾ, ಪತ್ನಿ ಶ್ರೀಪರ್ಣಾ ಹಾಗೂ ಇಬ್ಬರು ಪುತ್ರಿಯರ ಜತೆಗೆ ಟಾಟಾ ನಗರದ ಆಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ವಿಪಿನ್ ಗುಪ್ತಾ ಜೂನ್‌ನಲ್ಲಿ ಉದ್ಯೋಗ ತೊರೆದಿದ್ದರು. ಹೊಸ ಉದ್ಯೋಗಕ್ಕಾಗಿ ಹುಡುಕಾಟದಲ್ಲಿ ತೊಡಗಿದ್ದರು.
ಆ.4ರಂದು ಮಧ್ಯಾಹ್ನ 12.42ಕ್ಕೆ ಮನೆ ಯಿಂದ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದರು. ಇದಾದ 25 ನಿಮಿಷಕ್ಕೆ ಖಾತೆಯಿಂದ 1.80 ಲಕ್ಷ ಡ್ರಾ ಮಾಡಿದ್ದಾರೆ. ಬಳಿಕ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾ ಗಿಲ್ಲ. ಹೀಗಾಗಿ ತಮ್ಮ ಪತಿಯನ್ನು ಹುಡುಕಿ ಕೊಡಿ ಎಂದು ಶ್ರೀಪರ್ಣಾ ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ನಿಯಮದ ಪ್ರಕಾರ ಪೊಲೀಸರು ವಿಪಿನ್ ಗುಪ್ತಾನಿಂದ ಹೇಳಿಕೆ ಪಡೆದು ನಾಪತ್ತೆ ಪ್ರಕರಣ ಇತ್ಯರ್ಥಪಡಿಸಿದ್ದಾರೆ.
Ramanagara: ಡಿವೋರ್ಸ್ ಬೇಕು ಎಂದ ಹೆಂಡತಿಯ ಉಸಿರನ್ನೇ ನಿಲ್ಲಿಸಿದ ಗಂಡ
8 ತಿಂಗಳ ಹಿಂದೆ ಗೋವಾಕ್ಕೆ ಓಡಿಹೋಗಿದ್ದ
ಟೆಕ್ಕಿ ವಿಪಿನ್ ಗುಪ್ತಾ ಅವರು ಎಂಟು ತಿಂಗಳ ಹಿಂದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಒಂಟಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬಳಿಕ ಪತ್ನಿ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಗೋವಾದಲ್ಲಿ ವಿಪಿನ್‌ನನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದು ಕುಟುಂಬಕ್ಕೆ ಒಪ್ಪಿಸಿದ್ದರು. ಇದೀಗ ಆ.4ರಂದು ಮತ್ತೆ ವಿಪಿನ್ ನಾಪತ್ತೆಯಾಗಿದ್ದರು. ಇದೀಗ ಮತ್ತೆ ಪೊಲೀಸರು ಹುಡುಕಿ ಕರೆತಂದಿದ್ದಾರೆ.
ಪರಾರಿಗೆ ಮುನ್ನ ತಿರುಪತಿಯಲ್ಲಿ ಮುಡಿ!
ಆ.4ರಂದು ನಗರದಿಂದ ತಿರುಪತಿ ಬಸ್ ಏರಿ ಹೊರಟಿದ್ದ ವಿಪಿನ್ ಬಳಿಕ ತಿರುಪತಿಯಲ್ಲಿ ಮುಡಿ ಕೊಟ್ಟು ಅಲ್ಲಿಂದ ಬಸ್‌ನಲ್ಲೇ ವಿಶಾಖಪಟ್ಟಣ, ಒಡಿಶಾ, ಕೋಲ್ಕತಾಕ್ಕೆ ಪ್ರಯಾಣ ಬೆಳೆಸಿ ಬಳಿಕ ಉತ್ತರಪ್ರದೇಶದ 'ನೋಯ್ದಾದಲ್ಲಿ ತಂಗಿದ್ದರು. ಮತ್ತೊಂದೆಡೆ ವಿಪಿನ್ ಜಾಡು ಹಿಡಿದ ಕೊಡಿಗೇಹಳ್ಳಿ ಠಾಣೆ ಪೊಲೀಸರು, ನೋಯ್ದಾಗೆ ತೆರಳಿ ವಿಪಿನ್‌ನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆತಂದಿದ್ದಾರೆ.