Asianet Suvarna News Asianet Suvarna News

Ramanagara: ಡಿವೋರ್ಸ್ ಬೇಕು ಎಂದ ಹೆಂಡತಿಯ ಉಸಿರನ್ನೇ ನಿಲ್ಲಿಸಿದ ಗಂಡ

ನಿಮ್ಮ ಜೊತೆಗೆ ಜೀವನ ಮಾಡಲಾಗುವುದಿಲ್ಲ, ನನಗೆ ಡಿವೋರ್ಸ್ ಕೊಡಿ ಎಂದು ಕೇಳಿದ ಪತ್ನಿಯ ಉಸಿರನ್ನೇ ನಿಲ್ಲಿಸಿದ ಪತಿರಾಯ.

Ramanagara husband stopped his wifes breath saying that she wanted divorce sat
Author
First Published Aug 14, 2024, 12:01 PM IST | Last Updated Aug 14, 2024, 12:01 PM IST

ರಾಮನಗರ (ಆ.14): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನನಗೆ ಡಿವೋರ್ಸ್ ಕೊಟ್ಟುಬಿಡಿ ನಾನು ಬೇರೆ ಜೀವನವನ್ನು ನೋಡಿಕೊಳ್ಳುತ್ತೇನೆ ಎಂದು ಕೇಳಿದ ಹೆಂಡತಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ಹತ್ಯೆ ಮಾಡಿ ಬಂದಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಹೌದು, ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಿನ್ನೆ ನಡೆದಿದೆ. ಗಂಡನಿಂದ ಕೊಲೆಯಾದ ಮಹಿಳೆಯನ್ನು ದಿವ್ಯಾ (32) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಉಮೇಶ್ ಆಕೆಯ ಗಂಡನಾಗಿದ್ದಾನೆ. ಮದುವೆಯಾಗಿ ಕೆಲವು ವರ್ಷಗಳು ಜೀವನ ನಡೆಸಿದ ಇಬ್ಬರ ನಡುವೆ ಇತ್ತೀಚೆಗೆ ಮನಸ್ತಾಪ ಉಂಟಾಗಿದೆ. ಇದರಿಂದ ನನಗೆ ಡಿವೋರ್ಸ್ ಕೊಟ್ಟುಬಿಡಿ ನಾನು ಬೇರೆ ಜೀವನ ಕಟ್ಟಿಕೊಳ್ಳುತ್ತೇನೆ ಎಂದು ದಿವ್ಯಾ ಕೇಳಿದ್ದಾಳೆ. ಆಗ ಉಮೇಶ್ ತನ್ನ ಹೆಂಡತಿಯನ್ನು ಸಮಾಧಾನಪಡಿಸಿ ಆಗಾಗ್ಗೆ ಬುದ್ಧಿಯನ್ನೂ ಹೇಳಿದ್ದಾನೆ. ಆದರೆ, ಇದ್ಯಾವುದನ್ನೂ ಕೇಳದ ದಿವ್ಯಾಳಿಗೆ ಜಗಳ ಮಾಡುತ್ತಲೇ ಡಿವೋರ್ಸ್ ಕೊಡುವುದಾಗಿ ಹೇಳಿದ್ದಾನೆ.

ರಾಯಚೂರು : ಸಹ ಶಿಕ್ಷಕಿಗೆ ರಾತ್ರಿ ಮಲಗಲಿಕ್ಕೆ ಬಾ ಎಂದು ಕರೆದ ಮುಖ್ಯಶಿಕ್ಷಕ ಮೆಹಬೂಬ್ ಅಲಿ

ಈ ಹಿನ್ನೆಲೆಯಲೆಯಲ್ಲಿ ಡಿವೋರ್ಸ್ ಅರ್ಜಿ ಹಾಕಿದ ದಂಪತಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಚ್ಚೇದನ ಪಡೆಯುತ್ತಿದ್ದೇವೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಡಿವೋರ್ಸ್ ಕೇಸಿಗೆ ಸಂಬಂಧಿಸಿದಂತೆ ನಿನ್ನೆ ಮಾಗಡಿ ಕೋರ್ಟ್‌ಗೆ ದಂಪತಿ ಹಾಜರಾಗಿ ವಿಚಾರಣೆಯನ್ನು ಎದುರಿಸಿದ್ದರು. ಇನ್ನು ಹೆಂಡತಿಗೆ ಒಲ್ಲದ ಮನಸ್ಸಿನಿಂದ ಡಿವೋರ್ಸ್ ಕೊಡಲು ಮುಂದಾಗಿದ್ದ ಉಮೇಶ್‌ಗೆ ಪತ್ನಿ ತನ್ನನ್ನು ಬಿಟ್ಟು ಹೋಗಬಾರದು ಎಂಬ ಸ್ವಾರ್ಥ ಕಾಡುತ್ತಿತ್ತು. ಹೀಗಾಗಿ, ನ್ಯಾಯಾಲಯಕ್ಕೆ ಹೋಗಿ ಬಂದು ಮನೆಗೆ ವಾಪಸ್ ಹೋಗುವ ಮೊದಲು ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಪುಸಲಾಯಿಸಿ ಹೆಂಡತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ.

ಪಟ್ಟಣಗೆರೆ ಶೆಡ್ ಮಾದರಿಯಲ್ಲೇ ತುಮಕೂರು ಶೆಡ್‌ನಲ್ಲಿ ಸ್ನೇಹಿತನ ಕೊಲೆ

ಮಾಗಡಿ ತಾಲೂಕಿನ ಹೂಜುಗಲ್ಲು ಬೆಟ್ಟಕ್ಕೆ ಕರೆದೊಯ್ದು ಅಲ್ಲಿನ ದೇವಸ್ಥಾನದಲ್ಲಿ ದಿವ್ಯಾ ಪೂಜೆ ಮಾಡುತ್ತಿರುವಾಗಲೇ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಅಲ್ಲಿಂದ ಮೃತದೇಹವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿ ಆಗಿದ್ದಾನೆ. ಇನ್ನು ಅರಣ್ಯದಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಜಾಡು ಹಿಡಿದು ಹೊರಟ ಪೊಲೀಸರು ಶವದ ಗುರುತು ಪತ್ತೆ ಮಾಡಿದ್ದಾರೆ. ನಂತರ, ಆಕೆಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಕೆದಕಿದಾಗ ಆಕೆಯ ಗಂಡನೇ ಡಿವೋರ್ಸ್ ವಿಚಾರವಾಗಿ ಹೆಂಡತಿಯನ್ನು ಕೊಲೆ ಮಾಡಿ ಕಾಡಿನಲ್ಲಿ ಬೀಸಾಡಿ ಹೋಗಿದ್ದಾನೆ ಎಂಬ ಸುಳಿವು ಲಭ್ಯವಾಗಿದೆ. ಈ ಘಟನೆ ಕುರಿತಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Latest Videos
Follow Us:
Download App:
  • android
  • ios