*   ಡಾರ್ಕ್ ನೆಟ್‌ ಮೂಲಕ ವಿದೇಶಗಳಿಂದ ಡ್ರಗ್ಸ್‌ ಖರೀದಿಸಿ ಬಳಿಕ ನಗರದಲ್ಲಿ ಮಾರಾಟ *  ಸ್ಥಳೀಯ ವ್ಯಕ್ತಿಯಿಂದ ಗಾಂಜಾ ಖರೀದಿ*  ಆರೋಪಿಗಳಿಂದ .8 ಲಕ್ಷ ಮೌಲ್ಯದ ಡ್ರಗ್ಸ್‌ ವಶ  

ಬೆಂಗಳೂರು(ಜೂ.25): ನಗರದಲ್ಲಿ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದ ಡಿಜೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.

ವಿದೇಶ ಮೂಲದ ಜಿಪಿನ್‌ ಝಾಡೆ ಬಂಧಿತನಾಗಿದ್ದು, ಆರೋಪಿಯಿಂದ 6.5 ಲಕ್ಷ ಮೌಲ್ಯದ ಎಂಡಿಎಂಎ ಹಾಗೂ ಗಾಂಜಾ ಸೇರಿದಂತೆ ಇತರೆ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ವಿವೇಕ ನಗರದಲ್ಲಿ ನೆಲೆಸಿದ್ದ ಆರೋಪಿ, ನಗರದಲ್ಲಿ ಡಿಜೆ ಆಗಿ ಕೆಲಸ ಮಾಡುತ್ತಿದ್ದ. ಡಾರ್ಕ್ ನೆಟ್‌ ಮೂಲಕ ವಿದೇಶಗಳಿಂದ ಡ್ರಗ್ಸ್‌ ಖರೀದಿಸಿ ಬಳಿಕ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಅಲ್ಲದೆ ಆಫ್ರಿಕಾ ಮೂಲದ ಪೆಡ್ಲರ್‌ ಹಾಗೂ ಸ್ಥಳೀಯ ವ್ಯಕ್ತಿಯಿಂದ ಆರೋಪಿ ಗಾಂಜಾ ಸಹ ಖರೀದಿಸುತ್ತಿದ್ದ. ಅದರಲ್ಲೂ ಎಕ್ಸೈಟೆಸಿ ಮಾತ್ರೆಗಳನ್ನು 3ರಿಂದ 4 ಸಾವಿರಕ್ಕೆ ಮಾರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಡ್ರಗ್ಸ್‌ ಕೇಸಲ್ಲಿ ಜೈಲು ಸೇರಿದ ಪತಿಗೆ ಬೇಲ್‌ ಕೊಡಿಸಲು ಮಾದಕವಸ್ತು ಮಾರಾಟಕ್ಕಿಳಿದ ಪತ್ನಿ!

ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ವಿದೇಶಿ ಪ್ರಜೆಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ನೈಜೀರಿಯಾ ಮೂಲದ ಡ್ಯಾನೀಯಲ್‌ ಹಾಗೂ ಖಲೀಫಾ ಬಂಧಿತರಾಗಿದ್ದು, ಆರೋಪಿಗಳಿಂದ .8 ಲಕ್ಷ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ.