ಬೆಂಗಲೂರು[ಡಿ.16]: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. 2019 ರಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿದ್ದು, ಇವು ಪೊಲೀಸರಿಗೆ ತಲೆನೋವಾಗಿರುವ ಪರಿಣಮಿಸಿವೆ. ಹೀಗಿರುವಾಗ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದರಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. 

ಆಟೋ ಚಾಲಕನ ಪ್ರಾಮಾಣಿಕತೆಗೆ ಬೆಂಗಳೂರು ಪೊಲೀಸರ ಸಲಾಂ!

ಹೌದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈ ಸಂಬಂಧ ಟ್ವೀಟ್ ಒಂದನ್ನು ಮಾಡಿದ್ದು, 'ಶಾಪ್, ಮಾಲ್ ಗಳಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಸಂಖ್ಯೆ ನೀಡಬೇಡಿ. ಇದು ಸೈಬರ್ ಕೈಂ ತಡೆಯಲು ನಾವಿರಿಸಬೇಕಾದ ಪ್ರಥಮ ಹೆಜ್ಜೆ. ಮೊಬೈಲ್ ಸಂಖ್ಯೆ ಕೊಡಲು ನಿರಾಕರಿಸಿ. ಮೊಬೈಲ್ ಸಂಖ್ಯೆಯನ್ನು ಡೇಟಾ ಆಗಿ ಮಾರಾಟ ಮಾಡಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ನೀಡುವುದರಿಂದ ಸೈಬರ್ ಕ್ರೈಂ ನಡೆಸಲು ನೀವೇ ಬಾಗಿಲು ತೆರೆದಂತಾಗುತ್ತದೆ' ಎಂದು ಬರೆದಿದ್ದಾರೆ.

ಸೈಬರ್ ಪ್ರಕರಣಗಳು ಇತರೇ ಪ್ರಕರಣಗಳಂತೆ ಪತ್ತೆ ಹಚ್ಚಲು ಸುಲಭವಲ್ಲ. ಸೈಬರ್ ಪ್ರಕರಣಗಳ ಇತ್ಯರ್ಥ ಪಡಿಸುವ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಈ ಮಹತ್ವದ ಸಲಹೆ ನೀಡಿದ್ದಾರೆ. ಇದರಿಂದ ಸಾರ್ವಜನಿಕರೂ ಕೂಡಾ ಸುರಕ್ಷಿತವಾಗಿರಬಹುದು. ಪೊಲೀಸರಿಗೂ ತಲೆನೋವು ತಪ್ಪುತ್ತದೆ.

ಆಟೋ ಚಾಲಕನ ಪ್ರಾಮಾಣಿಕತೆಗೆ ಬೆಂಗಳೂರು ಪೊಲೀಸರ ಸಲಾಂ!