* ಅನ್ಯಕೋಮಿನ ಯುವತಿ ಜೊತೆ ಓಡಾಟ, ವ್ಯಕ್ತಿ ಮೇಲೆ ಹಲ್ಲೆ* ನೈತಿಕ ಪೊಲೀಸ್‌ಗಿರಿ ನಡೆಸಿದ ಪುಂಡರ ವಿರುದ್ಧ ಭಾರೀ ಆಕ್ರೋಶ* ಪುಂಡರ ಬಂಧಿಸಿದ ಬೆಂಗಳೂರು ಪೊಲೀಸರು 

ಬೆಂಗಳೂರು(ಸೆ.19) ಹಿಂದೂ ವ್ಯಕ್ತಿ ಜೊತೆ ಅನ್ಯಕೋಮಿನ ಸಹೋದ್ಯೋಗಿಯೊಬ್ಬಳಿದ್ದ ಕಾರಣವನ್ನೇ ಮುಂದಿಟ್ಟುಕೊಂಡ ಗುಂಪೊಂದು ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಿಗೆ ಬಂದಿದೆ. ಆದರೆ ಘಟನೆ ವರದಿಯಾದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಹಲ್ಲೆ ನಡೆಸಿದವರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಸಿಎಂ ಬೊಮ್ಮಾಯಿ ಕೂಡಾ ಟ್ವೀಟ್ ಮಾಡಿ ಆರೋಪಿಗಳ ಬಂಧನವನ್ನು ಖಚಿತಪಡಿಸಿದ್ದಾರೆ.

ಹಿಂದೂ ವ್ಯಕ್ತಿ ಜೊತೆ ಮುಸ್ಲಿಂ ಸಹೋದ್ಯೋಗಿ: ಮುಸ್ಲಿಂ ಗುಂಪಿನಿಂದ ನೈತಿಕ ಪೊಲೀಸ್‌ಗಿರಿ!

ಹೌದು ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದ ಸಹೋದ್ಯೋಗಿಳಾಗಿದ್ದ ಮಹೇಶ್ ಹಾಗೂ ಓರ್ವ ಅನ್ಯಕೋಮಿನ ಯುವತಿಯ ಮೇಲೆ ಅನಾಮಿಕರು ಹಲ್ಲೆ ನಡೆಸಿದ್ದಾರೆ. ಹೌದು ಹಲ್ಲೆ ನಡೆದ ದಿನ ಬ್ಯಾಂಕ್‌ನಲ್ಲಿ ಹೆಚ್ಚು ಕೆಲಸವಿದ್ದು, ಮುಗಿದಾಗ ತಡವಾಗತ್ತು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ಏಕಾಂಗಿಯಾಗಿ ಹೋಗುವುದು ಭದ್ರತಾ ದೃಷ್ಟಿಯಿಂದ ಸರಿಯಲ್ಲ ಎಂದ ಹಿರಿಯ ಅಧಿಕಾರಿಗಳು ಮಹಿಳೆಗೆ ಡ್ರಾಪ್ ನೀಡುವಂತೆ ಮಹೇಶ್‌ಗೆ ಸೂಚಿಸಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಮಹೇಶ್ ಮಹಿಳೆಗೆ ಡ್ರಾಪ್ ನೀಡಲು ಮುಂದಾಗಿದ್ದಾನೆ.

"

ಆದರೆ ಇದನ್ನು ಸಹಿಸದ ಪುಂಡರ ಗುಂಪೊಂದು ಅನ್ಯ ಕೋಮಿನ ಮಹಿಳೆ ಜೊತೆ ತೆರಳುತ್ತಿದ್ದ ಮಹೇಶ್ ಮೇಲೆ ಹಲ್ಲ ನಡೆಸಿದ್ದಾರೆ. ಅಲ್ಲದೇ ಮಹಿಳೆಯಿಂದ ಆಕಯ ಮನೆಯವರ ಫೋನ್ ನಂಬರ್ ಕೂಡಾ ಪಡೆದಿದ್ದಾರೆ. ಅಲ್ಲದೇ ಬೈಕ್ ಬಿಟ್ಟು ಆಟೋದಲ್ಲಿ ತೆರಳುವಂತೆಯೂ ತಾಕೀತು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಅನ್ಯ ಕೋಮಿನವರು ಒಟ್ಟಿಗೆ ಓಡಾಡುವುದು ತಪ್ಪೇ? ಎಂದು ಪ್ರಶ್ನೆ ಎದ್ದಿದ್ದು, ನೈತಿಕ ಪೊಲೀಸ್‌ಗಿರಿ ಮೆರೆದವರನ್ನು ಬಂಧಿಸುವಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಒತ್ತಾಯ ಕೇಳಿ ಬಂದಿತ್ತು.

Scroll to load tweet…

ಸದ್ಯ ಈ ಘಟನೆ ವರದಿಯಾದ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಬೆಂಗಳೂರು ಪೊಲೀಸರು, ನೈತಿಕ ಪೊಲೀಸ್‌ಗಿರಿ ನಡೆಸಿದ ಪುಂಡರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್ 'ಅನ್ಯಕೋಮಿನ ಯುವತಿ ಜೊತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳಲ್ಲಿ ಇಬ್ಬರನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಈ ಸಂಬಂಧ ಕೇಸ್‌ ದಾಖಲಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

Scroll to load tweet…

ಇನ್ನು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಘಟನೆಯ ಬಗ್ಗೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಟ್ವೀಟ್ ಮಾಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾದ ಮಾಹಿತಿಯನ್ನು ದೃಢಪಡಿಸಿದ್ದಾರೆ.