Bengaluru| ಪ್ರೀತಿಸಿದಾಕೆಗೆ ಖಾಸಗಿ ಕ್ಷಣಗಳ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್, ಬಂಧನ!
* ದೂರವಾಗಿದ್ದಕ್ಕೆ ಹಣಕ್ಕೆ ಕಿರುಕುಳ ಯುವಕನಿಗೆ ಹಲ್ಲೆ ಮಾಡಿಸಿದ್ದ ಯುವತಿ
* ಗೆಳತಿಯ ಖಾಸಗಿ ಕ್ಷಣಗಳ ಫೋಟೋ ತೋರಿಸಿ ಬ್ಲ್ಯಾಕ್ ಮೇಲ್: ಬಂಧನ
ಬೆಂಗಳೂರು(ನ.23): ಗೆಳತಿಯ ಖಾಸಗಿ ಕ್ಷಣಗಳ ಫೋಟೋ (Explicit Photos) ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್ ಮೇಲ್ (Blackmail) ಮಾಡುತ್ತಿದ್ದ ಯುವಕ ಮತ್ತು ಆ ವಿಡಿಯೋಗಾಗಿ ಆತನ ಮೇಲೆ ಹಲ್ಲೆ ಮಾಡಿದ ಮೂವರು ಸೇರಿ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ಬ್ಲ್ಯಾಕ್‌ಮೇಲ್ ಆರೋಪದಡಿ ಸಹಕಾರ ನಗರದ ಸಂತೋಷ್‌ಕುಮಾರ್(23) ಹಾಗೂ ಹಲ್ಲೆ ಆರೋಪದಡಿ ಸಹಕಾರ ನಗರದ ಎರಿಸ್ವಾಮಿ (23), ನಂಜುಂಡಸ್ವಾಮಿ (25) ಮತ್ತು ಆಕಾಶ್ (19) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಂತೋಷ್ ಸಹಕಾರ ನಗರದ ಬೇಕರಿಯಲ್ಲಿ ಕೆಲಸ ಮಾಡಿಕೊಂಡುತ್ತಿದ್ದು, ಎರಡು ವರ್ಷದ ಹಿಂದೆ ಯುವತಿಯೊಬ್ಬಳ ಪರಿಚಯವಾಗಿ ಬಳಿಕ ಅದು ಪ್ರೀತಿಗೆ (Love) ತಿರುಗಿತ್ತು. ಹೀಗಾಗಿ ಇಬ್ಬರು ಹಲವರು ಬಾರಿ ಖಾಸಗಿಯಾಗಿ ಸಮಯ ಕಳೆದಿದ್ದರು. ಈ ವೇಳೆ ಸಂತೋಷ್ ಮೊಬೈಲ್‌ನಲ್ಲಿ ಯುವತಿಯ ಕೆಲ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದ. ದಿನಗಳೆದಂತೆ ಈತನ ವರ್ತನೆಯಿಂದ ಬೇಸತ್ತು ದೂರವಾಗಿದ್ದಳು. ಇದರಿಂದ ಕೋಪಗೊಂಡ ಸಂತೋಷ್, ಆಕೆಯ ಖಾಸಗಿ ಫೋಟೋಗಳನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಮುಂದಾಗಿದ್ದ. ಹಲವು ಬಾರಿ ಯುವತಿಯಿಂದ ಹಣ ಪಡೆದಿದ್ದ. ಕೆಲ ದಿನಗಳ ಹಿಂದೆ ನಾನು ಬೈಕ್ ತೆಗೆದುಕೊಳ್ಳಬೇಕು ಎಂದು ಹಣಕ್ಕೆ ಬೇಡಿಕೆ ಇರಿಸಿದ್ದ. ಇಲ್ಲವಾದರೆ, ಈ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಹೆದರಿದ ಯುವತಿ ಹಣ ನೀಡಿದ್ದಳು.
ಸಂತೋಷ್‌ನ ಕಾಟದಿಂದ ಬೇಸರಗೊಂಡಿದ್ದ ಯುವತಿ, ಆತನ ಕಿರುಕುಳದ (Harassment) ಬಗ್ಗೆ ಆಪ್ತ ಸ್ನೇಹಿತರಾದ ಆಕಾಶ್, ನಂಜುಂಡಸ್ವಾಮಿ, ಯರಿಸ್ವಾಮಿ ಬಳಿ ಹೇಳಿಕೊಂಡಿದ್ದಳು. ಅಂತೆಯೆ ನನ್ನ ಖಾಸಗಿ ಫೋಟೋ ಇರುವ ಆತನ ಮೊಬೈಲ್ ಫೋನ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನ.16ರಂದು ತಡರಾತ್ರಿ 12.30ರ ಸುಮಾರಿಗೆ ಸಹಕಾರ ನಗರದಲ್ಲಿರುವ ಸಂತೋಷ್ ಮನೆಗೆ ನುಗ್ಗಿ ಖಾರದ ಪುಡಿ ಎರಚಿ ಸಂತೋಷ್ ಹಾಗೂ ಆತನ ಸ್ನೇಹಿತ ಧರ್ಮೇಂದ್ರದಾಸ್ ಮೇಲೆ ಹಲ್ಲೆ ನಡೆಸಿ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಅಂತೆಯೆ ಬ್ಲ್ಯಾಕ್‌ಮೇಲ್ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಂತೋಷ್ ಕುಮಾರ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾರ್ಟಿ ನೆಪದಲ್ಲಿ ಕರೆಸಿ ಹುಡುಗಿಯೊಂದಿಗೆ ಬೆತ್ತಲೆ ವಿಡಿಯೋ ಮಾಡಿಕೊಂಡ್ರು!
ಮೀರತ್ (Meerut) ನಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಉತ್ತರ ಪ್ರದೇಶದ (Uttar Pradesh) ಮೀರತ್ ನಲ್ಲಿ ಇಬ್ಬರು ಯುವಕರನ್ನು ಬೆತ್ತಲೆಗೊಳಿಸಿ ಹುಡುಗಿಯೊಂದಿಗೆ ಅಶ್ಲೀಲ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಡಿಯೋ ಇಟ್ಟುಕೊಂಡು ಮೂರು ಲಕ್ಷ ರು. ಗೆ ( Money) ಆರೋಪಿಗಳು ಬೇಡಿಕೆ ಇಡಲು ಮುಂದಾಗಿದ್ದರು. ಜಿಲ್ಲೆಯ ಖರ್ಖೌಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರು ಮಂದಿ ಯುವಕರು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
ಗನ್ ತೋರಿಸಿ ಭಯ ಹುಟ್ಟಿಸಿದ ತಂಡ ಯುವಕರಿಂದ ಮೊಬೈಲ್ ಫೋನ್ ಮತ್ತು 32,000 ರೂ ನಗದು ದೋಚಿದೆ. ಸಂತ್ರಸ್ತರು ಖರ್ಖೌಡಾ ಪೊಲೀಸರಿಗೆ ದೂರು ನೀಡಿದ್ದು ಭಾನುವಾರ ರಾತ್ರಿ ಲೋಹಿಯಾನಗರ ಮಂಡಿಯಲ್ಲಿ ಪಾರ್ಟಿ ಕೊಡಿಸುವ ನೆಪದಲ್ಲಿ ಆರು ಮಂದಿ ನಮ್ಮನ್ನು ಕರೆದುಕೊಂಡು ಹೋಗಿದ್ದರು ಎಂದು ಜುಬೇರ್ ಮತ್ತು ಆತನ ಸ್ನೇಹಿತ ಶಹಬಾಜ್ ದೂರಿನಲ್ಲಿ ಆರೋಪಿಸಿದ್ದಾರೆ.
ಪಾರ್ಟಿ ವೇಳೆ ಎರಗಿದ ತಂಡ ಬಲವಂತವಾಗಿ ಬಟ್ಟೆ ಬಿಚ್ಚಿಸಿದೆ. ಹುಡುಗಿಯೊಂದಿಗೆ ಯುವಕರ ಪೋಟೋ ಮತ್ತು ವಿಡಿಯೋಈ ರೇಕಾರ್ಡ್ ಮಾಡಿಕೊಂಡಿದೆ. ನಂತರ ಅದನ್ನು ತೋರಿಸಿ ಹಣಕ್ಕೆ ಬೇಡಿಕೆ (Blackmail) ಇಟ್ಟಿದೆ.