Asianet Suvarna News Asianet Suvarna News

Bengaluru: ಪತ್ನಿ ನಿದ್ರೆಯಲ್ಲಿದ್ದಾಗಲೇ ಡೂಪ್ಲಿಕೇಟ್‌ ಕೀ ಬಳಸಿ ಕತ್ತು ಕುಯ್ದು ಹೋದ ಪತಿ!

ಸಿನಿಮಾ ಕೊರಿಯೋಗ್ರಾಫರ್‌ ನವ್ಯಶ್ರೀ ಕೊಲೆ ಪ್ರಕರಣದಲ್ಲಿ ಹೊಸ ತಿರುವುಗಳು ಬೆಳಕಿಗೆ ಬಂದಿವೆ. ಮೃತಳ ಸ್ನೇಹಿತೆಯ ಹೇಳಿಕೆ ಆಧರಿಸಿ, ಪೊಲೀಸರು ನವ್ಯಶ್ರೀ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನೆರೆಹೊರೆಯವರು ನೀಡಿದ ಮಾಹಿತಿಯಂತೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

Bengaluru Navyashri Murder by her Husband Kiran in Kengeri Updates san
Author
First Published Aug 28, 2024, 9:58 PM IST | Last Updated Aug 28, 2024, 9:58 PM IST

ಬೆಂಗಳೂರು (ಆ.28): ಸಿನಿಮಾದಲ್ಲಿ ಕೊರಿಯೋಗ್ರಾಫರ್‌ ಆಗಿದ್ದ ನವ್ಯಶ್ರಿ ಕೊಲೆ ಪ್ರಕರಣದ ಮತ್ತಷ್ಟು ಅಪ್‌ಡೇಟ್‌ಗಳು ಗೊತ್ತಾಗಿವೆ. ನವ್ಯಶ್ರಿ ಹಾಗೂ ಕಿರಣ್‌ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆ ಬಳಿಕ ಕೆಂಗೇರಿ ಉಪನಗರದ 1ನೇ ಬ್ಲಾಕ್‌ನ ಎಸ್.ಎಂ.ವಿ.ಲೇಔಟ್‌ನಲ್ಲಿ ವಾಸವಾಗಿದ್ದರು. ಮಂಗಳವಾರ ಬೆಳಿಗ್ಗೆ ಸ್ನೇಹಿತೆಗೆ ಕರೆ ಮಾಡಿದ್ದ ನವ್ಯಾ ಮನೆಗೆ ಬರುವಂತೆ ತಿಳಿಸಿದ್ದಳು. ಈ ವೇಳೆ ಆಕೆಯೊಂದಿಗೆ ಮಾತನಾಡುವ ವೇಳೆ, ತನಗೆ ಮನೆಯಲ್ಲೂ ನೆಮ್ಮದಿಯಿಲ್ಲ. ಹೊರಗಡೆಯೂ ನೆಮ್ಮದಿ ಇಲ್ಲ ಎಂದು ಹೇಳಿದ್ದರು. ಸ್ನೇಹಿತೆ ಮನೆಗೆ ಬಂದ ಬಳಿಕ ನವ್ಯಾ, ತನ್ನ ಇನ್ನೊಬ್ಬ ಗೆಳೆಯನಿಗೆ ಕರೆ ಮಾಡಿದ್ದಳು. ಆತನೊಂದಿಗೆ ಮಾತನಾಡುವ ವೇಳೆ ನನಗೆ ಮನೆಯಲ್ಲಿ ಸೇಫ್‌ ಫೀಲ್‌ ಆಗುತ್ತಿಲ್ಲ. ತಕ್ಷಣವೇ ಭೇಟಿಯಾಗಬಹುದಾ ಎಂದು ಕೇಳಿದ್ದಳು. ಬಳಿಕ ಮೂವರು ಕಾರ್‌ನಲ್ಲಿಯೇ ಆರ್‌ಆರ್‌ ನಗರದವರೆಗೂ ಹೋಗಿ ಮೋಮೋಸ್‌ ತಿಂದಿದ್ದರು. ಈ ಹಂತದಲ್ಲಿ ಗಂಡನ ಮೇಲೆ ದೂರು ನೀಡುವಂತೆ ನವ್ಯಾಶ್ರಿಯ ಗೆಳೆಯ ಹೇಳಿದ್ದ. ಬಳಿಕ ಗೆಳೆಯನನ್ನು ಆತನ ಮನೆಗೆ ನವ್ಯಾಶ್ರೀ ಡ್ರಾಪ್‌ ಮಾಡಿದ್ದರು. ಆಕೆಯ ಗೆಳತಿಯ ಜೊತೆ ರಾತ್ರಿ 11.30ಕ್ಕೆ ಮನೆಗೆ ಬಂದಿದ್ದರು.

ನವ್ಯಾಶ್ರೀ ಅವರ ಮನೆಯಲ್ಲಿಯೇ ಆಕೆಯ ಗೆಳತಿ ಉಳಿದುಕೊಂಡಿದ್ದರು. ರಾತ್ರಿ ಗಾಢನಿದ್ರೆಗೆ ಹೋಗಿದ್ದ ಗೆಳತಿಗೆ ಬೆಳಗ್ಗೆ ಎಚ್ಚರವಾಗಿದೆ. ಬೆಳಗ್ಗೆ 6 ಗಂಟೆಯ ವೇಳೆಗೆ ಪಕ್ಕದಲ್ಲಿದ್ದ ಬಟ್ಟೆ ತೇವವಾಗಿರುವ ರೀತಿಯಲ್ಲಿ ಫೀಲ್‌ ಆಗಿದೆ. ಎಚ್ಚರವಾಗಿ ನೋಡಿದಾಗ ನವ್ಯಾಶ್ರೀ ಕತ್ತು ಕುಯ್ದು ಕೊಲೆ ಮಾಡಿರುವುದು ಕಂಡುಬಂದಿದೆ. ಈ ವೇಳೆ, ನವ್ಯಾಶ್ರಿ ಗೆಳತಿ ಭಯದಿಂದ ಕಿರುಚಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಪೊಲೀಸರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ನವ್ಯಾಶ್ರೀಯ ಗಂಡ ಕಿರಣ ಕೊಲೆ ಮಾಡಿರುತ್ತಾನೆಂದು ಗೆಳತಿಯಿಂದ ದೂರು ನೀಡಲಾಗಿದೆ. ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆ  ಪ್ರಕರಣ ದಾಖಲು ಮಾಡಿದ್ದು,  ಆರೋಪಿ ಕಿರಣ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬರೀ ಜಗಳ ಮಾಡೋದು ಬಿಟ್ಟು ಏನೂ ಮಾಡ್ತಿರಲಿಲ್ಲ: ಅವರು ಇಲ್ಲಿಗೆ ಬಂದು 6 ತಿಂಗಳಾಗಿತ್ತು. ಬರಿ ಜಗಳ ಮಾಡ್ತಾ ಇದ್ರು. ಗಂಡ ಹೆಂಡತಿ ಜಗಳ ಅಂತ ನಾವು ಸುಮ್ಮನಾಗಿದ್ದೆವು. ಅವರದ್ದು ಪಾರ್ಟಿ ಕಲ್ಚರ್. ಮಿಡ್ ನೈಟ್ ಬರ್ತಾ ಇದ್ರು, ಹೋಗ್ತಾ ಇದ್ರು. ಬೀದಿಯಲ್ಲಿ ಜಗಳ ಆಡ್ತಿದ್ರು. 3 ದಿನಗಳ ಹಿಂದೆ ರೋಡ್ ನಲ್ಲಿ ಜಗಳ ಆಡಿದ್ದರು. ಹುಡುಗಿ ತಾಯಿ ಮುಂಚೆ ಬರುತ್ತಿದ್ದರು. ಆಮೇಲೆ ಅವರು ಬರೋದು ಕಮ್ಮಿ ಆಯ್ತು. ನಮ್ಮ ಜತೆ ಮಾತಾಡುತ್ತಿರಲಿಲ್ಲ. ಮನೆಗೆ ಅವರ ತುಂಬಾ ಜನ ಫ್ರೆಂಡ್ಸ್ ಬರ್ತಿದ್ರು. ನಿನ್ನೆ ಸಂಜೆ ಚೆನ್ನಾಗೇ ಇದ್ರು. ನೋಡಿದ್ರೆ ಇವತ್ತು ಬೆಳಗ್ಗೆ ಹೀಗಾಗಿದೆ. ಹುಡುಗಿ ಸ್ನೇಹಿತೆ ಕೂಗಿಕೊಂಡ ಬಳಿಕ ಕೊಲೆಯಾದ ಮಾಹಿತಿ ಸಿಕ್ಕಿದೆ ಎಂದು ಕೆಳಮನೆಯಲ್ಲಿರುವ ಪ್ರವೀಣ್‌ ಎನ್ನುವವರು ತಿಳಿಸಿದ್ದಾರೆ.

ಪ್ರೀತಿಸಿ ಮದುವೆಯಾದ ಸುಂದರಾಂಗಿ ಹೆಂಡ್ತಿಯ ಶೀಲ ಶಂಕಿಸಿ, ಕೊಂದೇಬಿಟ್ಟ ಗಂಡ!

ಹುಡುಗ ಬಂದು ಹೋಗ್ತಿದ್ದ. ಹುಡುಗಿ ಬರುತ್ತಲೇ ಇರಲಿಲ್ಲ. ನಮಗೆ ಪೊಲೀಸ್ ಬಂದಾಗಲೇ ವಿಚಾರ ಗೊತ್ತಾಗಿದ್ದು. ಲವ್ ಮ್ಯಾರೇಜ್ ಅಂತ ಗೊತ್ತಿಲ್ಲ. ಅವರು ಗಂಡ ಹೆಂಡತಿ ಅಂತ ಗೊತ್ತಿತ್ತು. ಇಬ್ಬರು ಫ್ರೆಂಡ್ಸ್ ಇದ್ದರು ಅವಳ ಸ್ನೇಹಿತೆ ನಿನ್ನೆ ಆ ಹುಡುಗಿ ಪಕ್ಕದಲ್ಲೇ ಮಲಗಿದ್ದಳು, ಅವಳಿಗೆ ಬೆಳಗ್ಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳು!

Latest Videos
Follow Us:
Download App:
  • android
  • ios