ಬೆಂಗಳೂರು: 20 ಸಾವಿರ ಹಣಕ್ಕಾಗಿ ಸ್ನೇಹಿತನನ್ನೇ ಕೊಲೆಗೈದು ಬೀದಿ ಹೆಣ ಮಾಡಿದ!
ಬೆಂಗಳೂರಿನಲ್ಲಿ 20 ಸಾವಿರ ರೂ. ಸಾಲ ಕೊಟ್ಟು ವಾಪಸ್ ಕೇಳಿದ ಸ್ನೇಹಿತನನ್ನೇ ಕೊಲೆಗೈದು ಬೀದಿ ಹೆಣ ಮಾಡಿದ ದುರ್ಘಟನೆ ಶ್ರೀರಾಮ್‌ಪುರದಲ್ಲಿ ನಡೆದಿದೆ.
ಬೆಂಗಳೂರು (ಮೇ 11): ಸಿಲಿಕಾನ್ ಸಿಟಿ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಅನತಿ ದೂರದಲ್ಲಿರುವ ಓಕಳಿಪರಂ ರೈಲ್ವೆ ಮೇಲ್ಸೇತುವೆ ಬಳಿ ಸಿಕ್ಕಿದ್ದ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೇವಲ 20 ಸಾವಿರ ರೂ. ಸಾಲ ಕೊಟ್ಟಿರುವುದನ್ನು ವಾಪಸ್ ಕೇಳಿದ್ದಕ್ಕೆ ಕೋಪಗೊಂಡ ಸ್ನೇಹಿತ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಕೊಲೆ ಮಾಡಿ, ಬೀದಿ ಹೆಣವಾಗಿ ಬೀಸಾಡಿ ಹೋಗಿದ್ದಾನೆ.
ಹೌದು, ಓಕಳಿಪುರಂ ರೈಲ್ವೆ ಸೇತುವೆ ಬಳಿ ಕೊಳೆತ ಮೃತದೇಹ ಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೃತನ ಗುರುತು ಪತ್ತೆ ಜೊತೆಗೆ ಕೊಲೆ ಮಾಡಿದ್ದ ಹಂತಕನ ಬಂಧನವಾಗಿದೆ. ಕೊಲೆಯಾದ ವ್ಯಕ್ತಿಯನ್ನು ಎಲ್.ಎನ್. ಪುರದ ದಿಲೀಪ್ (34) ಎಂದು ಗುರುತಿಸಲಾಗುದೆ. ಬೈಕ್ ಮೆಕಾನಿಕ್ ಆಗಿದ್ದ ಮೃತ ದಿಲೀಪನ ಮೃತದೇಹ ಏಪ್ರಿಲ್ 1ರಂದು ಕೊಳೆತ ಸ್ಥಿತಿಯಲ್ಲಿ ಓಕಳಿಪುರ ರೈಲ್ವೆ ಮೇಲ್ಸೇತುವೆ ಬಳಿ ಪತ್ತೆಯಾಗಿತ್ತು. ಶ್ರೀರಾಮ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಮೃತ ದೇಹ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಹಿಂದಿನ ಅಸಲಿ ಕಹಾನಿ ಬಯಲಾಗಿದೆ.
ಅರ್ಜುನನ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದ ಇಮ್ರಾನ್ ಮತ್ತು ಮತೀನ್!
ಬೆಂಗಳೂರಿನ ಎಲ್.ಎನ್. ಪುರದ ನಿವಾಸಿಗಳಾದ ದಿಲೀಪ್ ಮತ್ತು ವಿಠ್ಠಲ್ ಅಲಿಯಾಸ್ ಪಾಂಡು ಇಬ್ಬರೂ ಸ್ನೇಹಿತರು. ಹಲವು ವರ್ಷದಿಂದ ಸ್ನೇಹಿತರಾಗಿದ್ದ ಹಿನ್ನೆಲೆಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದ ದಿಲೀಪ್‌ನಿಂದ ವಿಠ್ಠಲ್ 20 ಸಾವಿರ ರೂ. ಬಡ್ಡಿ ಸಾಲ ಪಡೆದಿದ್ದನು. ಸಾಲ ಕೊಟ್ಟು 4 ತಿಂಗಳಾದರೂ ಅಸಲು, ಬಡ್ಡಿ ಯಾವುದನ್ನೂ ಕೊಡದ ಹಿನ್ನೆಲೆಯಲ್ಲಿ ಕೋಪಗೊಂಡ ದಿಲೀಪ್ ಆತನ ಸ್ನೇಹಿತ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಣ ವಸೂಲಿಗೆ ಮುಂದಾಗಿದ್ದನು. ಜೊತೆಗೆ, ತನಗೆ ಹಣದ ತೀವ್ರ ಅಗತ್ಯವಿದ್ದು ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದನು. ಆಗ ವಿಠ್ಠಲ ನಿನ್ನ ಸಾಲ ಮತ್ತು ಬಡ್ಡಿಯ ಹಣಎಷ್ಟಾಗಿದೆ ಎಂದು ಕೇಳಿದಾಗ 30 ಸಾವಿರ ರೂ. ಆಗಿದೆ ಎಂದು ಹೇಳಿದ್ದಾನೆ.
ಹಣ ಕೊಡುವುದಾಗಿ ಏಪ್ರಿಲ್ 28ರ ರಾತ್ರಿ ವೇಳೆ ಸಾಲ ಕೊಟ್ಟ ದಿಲೀಪನನ್ನು ಓಕಳಿಪುರಂನ ನಿರ್ಜನ ಪ್ರದೇಶವಾದ ರೈಲ್ವೇ ಸೇತುವೆ ಬಳಿ ಕರೆಸಿಕೊಂಡಿದ್ದಾನೆ. ಆಗ ಪದೇ ಪದೇ ಹಣ ಕೇಳ್ತಿಯಾ? ನನಗೆ ಮನೆಯವರನ್ನೆಲ್ಲಾ ಸೇರಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತೀಯಾ ಎಂದು ಕೋಪಗೊಂಡು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ನಂತರ, ಆತನ ಮೃತ ದೇಹವನ್ನು ಬೀದಿ ಹೆಣವಾಗಿಸಿ ಪರಾರಿಯಾಗಿದ್ದನು.
KAS ಅಧಿಕಾರಿ ಪತ್ನಿ ಅನುಮಾನಸ್ಪದ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಹೈಕೋರ್ಟ್ ವಕೀಲೆ ಪತ್ತೆ
ನಂತರ ಮೂರು ದಿನ ಅಲ್ಲೇ ಕೊಳೆತಿದ್ದ ದಿಲೀಪ್ ಮೃತ ದೇಹ, ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಏ.1ರಂದು ಬಂದು ಸ್ಥಳ ಪರಿಶೀಲನೆ ಮಾಡಿದ ಶ್ರೀರಾಮ್‌ಪುರ ಪೊಲೀಸರಿಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದ್ದು, ಗುರುತು ಪತ್ತೆಗಾಗಿ ಪೊಲೀಸ್ ಪ್ರಕಟಣೆ ಹೊರಡಿಸಿದ್ದರು. ಇದನ್ನು ನೋಡಿದ ಮೃತ ವ್ಯಕ್ತಿಯ ಸಹೋದರನ ಸ್ನೇಹಿತ ನಿಮ್ಮ ಅಣ್ಣನ ಡೆಡ್‌ಬಾಡಿ ಸಿಕ್ಕಿದೆ ಎಂದು ಹೇಳಿದ್ದಾನೆ. ಆಗ ಪೊಲೀಸ್ ಠಾಣೆಗೆ ಬಂದು ಮೃತನ ಸಹೋದರ ದೂರು ನೀಡಿದ್ದಾರೆ. ಆಗ ತನಿಖೆ ಚುರುಕುಗೊಳಿಸಿದ ಪೊಲೀಸರು ಮೃತ ದಿಲೀಪನ ಸಹಚರ ವಿಠ್ಠಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಸತ್ಯ ಬಾಯಿ ಬಿಟ್ಟಿದ್ದಾನೆ. ಶ್ರೀರಾಮ್‌ಪುರ ಪೊಲೀಸರಿಂದ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮಾಡುತ್ತಿದ್ದಾರೆ.