KAS ಅಧಿಕಾರಿ ಪತ್ನಿ ಹೈಕೋರ್ಟ್ ವಕೀಲೆ ಅನುಮಾನಸ್ಪದ ಸಾವು, ಡೆತ್‌ ನೋಟ್‌ ಪತ್ತೆ

ರಾಜ್ಯದ KAS  ಅಧಿಕಾರಿಯೊಬ್ಬರ  ಪತ್ನಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

KAS officer  wife Karnataka high Court lawyer found dead inside house at bengaluru gow

ಬೆಂಗಳೂರು (ಮೇ.11): ರಾಜ್ಯದ KAS (ಕರ್ನಾಟಕ ಆಡಳಿತ ಸೇವೆ) ಅಧಿಕಾರಿ ಪತ್ನಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. KIDB (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ) ಅಧಿಕಾರಿ ಶಿವಕುಮಾರ್ ಪತ್ನಿ ಚೈತ್ರಾ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿರುವ  ಗಂಡ ಶಿವಕುಮಾರ್ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.  ಶಿವಕುಮಾರ್ ಕುಟುಂಬ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿತ್ತು. 2016 ರಲ್ಲಿ ಚೈತ್ರಾಳನ್ನು ಶಿವಕುಮಾರ್ ಮದ್ವೆಯಾಗಿದ್ದು,  5 ವರ್ಷದ ಒಂದು ಹೆಣ್ಣು ಮಗು ಇದೆ. ಮೃತ ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರು.  ‌ಘಟನೆಗೆ ಕಾರಣ ತಿಳಿದುಬಂದಿಲ್ಲ. ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

ಬೆಂಗಳೂರಿಗೆ ಗುಳೆ ಹೋದ 8 ನೇ ತರಗತಿ ಬಾಲಕಿ ಕಿಡ್ನಾಪ್!

ಘಟನಾ ಸ್ಥಳದಲ್ಲಿ  ಚೈತ್ರಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಪ್ಲಾಟ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಅಂದರೆ ಮಾರ್ಚ್ 11ರಂದು ಡೆತ್ ನೋಟ್ ಬರೆದಿರುವುದಾಗಿದೆ. ನನ್ನ ಗಂಡ  ತುಂಬಾ ಒಳೆಯವರು. ನೀವು ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚನ್ನಾಗಿ ನೋಡಿಕೊಳ್ಳಿ. ತಾನು ಡಿಪ್ರೆಶನ್ ನಿಂದ ಬಳಲುತಿದ್ದೇನೆ. ಡಿಪೆರೆಶನ್ ನಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟೆ  ಆದ್ರೆ  ಆಗ್ತಿಲ್ಲಾ. ನಾನು ತನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ಸೂಸೈಡ್ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ ಆದ್ರೂ ಸಹ ಆತ್ಮಹತ್ಯೆ ಮಾಡಿಕೊಂಡು ಜೀವನ ಎಂಡ್ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಕೊಡಗು ಅಪ್ತಾಪ್ತೆಯ ಭೀಕರ ಹತ್ಯೆ ಪ್ರಕರಣ, ಮೃತ ವಿದ್ಯಾರ್ಥಿನಿಯ ರುಂಡ ಪತ್ತೆ 

ಅಪಾರ್ಟ್ಮೆಂಟ್ ನ ಮೂರು ಪ್ಲಾಟ್ ನಲ್ಲಿ ಒಂದೆ ಕುಟುಂಬ ವಾಸ ಮಾಡ್ತಿದ್ರು. ಎರಡು ಫ್ಲಾಟ್ ನಲ್ಲಿ ಮೃತಳ ಕುಟುಂಬದ ವಾಸವಿತ್ತು. ಇನ್ನೊಂದು ಫ್ಲಾಟ್ ನಲ್ಲಿ ಮೃತಳ ತಮ್ಮ ವಾಸ ಮಾಡುತ್ತಿದ್ದರು. ಬೆಳಗ್ಗೆ ಹತ್ತು ಘಂಟೆ ಸುಮಾರಿಗೆ ಪತಿ ಶಿವ ಕುಮಾರ್ ಜೊತೆಗೆ ಮಾತನಾಡಿದ್ದಾರೆ. ನಂತ್ರ ತಮ್ಮನ ಜೊತೆಗೆ ಮಾತನಾಡಿದ್ದಾರೆ. ಹನ್ನೊಂದು ಘಂಟೆ ಸುಮಾರಿಗೆ  ಮೃತಳ ತಮ್ಮ ಕರೆದಾಗ ಸ್ಪಂದಿಸಿಲ್ಲ. ಈ ವೇಳೆ ಕಿಟಕಿಯಿಂದ ನೋಡಿದಾಗ ಫ್ಯಾನ್ ಗೆ ನೇಣು ಹಾಕಿಕೊಂಡು ಸಾವನಪ್ಪಿರುವುದು  ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಉತ್ತರ ವಿಭಾಗ ಡಿಸಿಪಿ ಸೈದುಲು ಅದಾವತ್ ಹೇಳಿಕೆ ನೀಡಿ, ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದೆ. ಸೀರೆಯಿಂದ ಪ್ಯಾನ್ ಗೆ ಹ್ಯಾಂಗ್ ಮಾಡ್ಕೊಂಡು ಆತ್ಮಹತ್ಯೆ ಆಗಿದೆ. ಇದರ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೀತಾ ಇದೆ‌. ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಅಂತಾ ಬರೆದಿರುವುದು ಗೊತ್ತಾಗಿದೆ. ಅದನ್ನ ಅವರೇ ಬರೆದಿದ್ದಾರಾ ಅಂತಾ ಪರಿಶೀಲನೆ ನಡೆದಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ತನಿಖೆ ಬಳಿಕ ವಿಚಾರ ಗೊತ್ತಾಗಲಿದೆ. ಎಂದು ಆತ್ಮಹತ್ಯೆ ಬಗ್ಗೆ  ಪ್ರತಿಕ್ರಿಯೆ ನೀಡಿದ್ದಾರೆ.

Latest Videos
Follow Us:
Download App:
  • android
  • ios