ಚುಂಚಿಫಾಲ್ಸ್‌ನಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ ಯುವಕ

ಸೆಲ್ಪಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವು.  ಕನಕಪುರ ತಾಲ್ಲೂಕಿನಲ್ಲಿರುವ ಚುಂಚಿಫಾಲ್ಸ್ ನಲ್ಲಿ ನಡೆದ ಘಟನೆ. ಬೆಂಗಳೂರು ಮೂಲದ ಯುವಕ ಸಾವು.

bengaluru man died while taking a selfie in kanakapura Chunchi Falls gow

ರಾಮನಗರ (ಆ.16):  ಸೆಲ್ಪಿ ತೆಗೆದುಕೊಳ್ಳಲು ಹೋಗಿ  ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ   ಕನಕಪುರ ತಾಲ್ಲೂಕಿನಲ್ಲಿರುವ ಚುಂಚಿಫಾಲ್ಸ್ ನಲ್ಲಿ ಈ ದುರ್ಘಟನೆ ನಡೆದಿದ್ದು,  ಮೃತ ಯುವಕನನ್ನು ಪ್ರವೀಣ್ ಚಂದ್ರ (26) ಎಂದು ಗುರುತಿಸಲಾಗಿದೆ.  ಮೃತ ಯುವಕ ಬೆಂಗಳೂರಿನ ಶಂಕರ ಮಠದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ.  ಭಾನುವಾರ ತನ್ನ ಸ್ನೇಹಿತರ ಜೊತೆ ಚುಂಚಿಫಾಲ್ಸ್ ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದ್ದು,  ಅಪಾಯದ ಸ್ಥಳದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಈ ಸಾವು ಸಂಭವಿಸಿದೆ. ಇಂದು ಶವ ಪತ್ತೆ ಹಿನ್ನಲೆ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸಾತನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಲ್ಫಿ ದುರಂತ ಇದೇ ಮೊದಲೇನಲ್ಲ. ಈ ಹಿಂದೆಯೂ ಸೆಲ್ಫಿ ಗೀಳಿನಿಂದ ಪ್ರಾಣ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಆದರೂ ಜನ ಮಾತ್ರ ಅಪಾಯದ ಪ್ರದೇಶದಲ್ಲಿ ಸೆಲ್ಪಿ ತೆಗೆಯುವುದು, ಓಡಾಡುವುದು ನಿಲ್ಲಿಸಿಲ್ಲ. ಮುಖ್ಯವಾಗಿ ಎಚ್ಚರಿಕೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಇಂತಹ ದುರಂತಗಳು ನಡೆಯುತ್ತವೆ.

ರಾಷ್ಟ್ರ ಧ್ವಜ ಹಾರಿಸಲು ಹೋದ ಟೆಕ್ಕಿ ಮಹಡಿಯಿಂದ ಬಿದ್ದು ಸಾವು!
ಬೆಂಗಳೂರು: ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಹಿನ್ನೆಲೆಯಲ್ಲಿ ತಮ್ಮ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಲು ತೆರಳಿದ್ದಾಗ ಆಯ ತಪ್ಪಿ ಬಿದ್ದು ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಚ್‌ಬಿಆರ್‌ ಲೇಔಟ್‌ ನಿವಾಸಿ ವಿಶುಕುಮಾರ್‌ (33) ಮೃತ ದುರ್ದೈವಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಮ್ಮ ಮನೆಯ ಎರಡನೇ ಮಹಡಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಭಾನುವಾರ ಮಧ್ಯಾಹ್ನ ವಿಶು ಕುಮಾರ್‌ ತೆರಳಿದ್ದರು. ಆಗ ಧ್ವಜ ಕಟ್ಟಿಕೆಳಗೆ ಇಳಿಯುವಾಗ ಆಯತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ.

Shivamogga Assault Case: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಫೈರಿಂಗ್‌, ಇಬ್ಬರ ಬಂಧನ

ಕೂಡಲೇ ಮನೆ ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ದು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ರಾತ್ರಿ ವಿಶುಕುಮಾರ್‌ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ವಿಶುಕುಮಾರ್‌ ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಮಗುವಿದೆ.

ಖಾಸಗಿ ಫೋಟೋ ಇದೆ ಎಂದು ಬ್ಲ್ಯಾಕ್‌ಮೇಲ್‌: ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್‌ ಯುವತಿಯರ ಸೆರೆ

ನಗರದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು, ತಮ್ಮ ಕುಟುಂಬದ ಜತೆ ಎಚ್‌ಬಿಆರ್‌ ಲೇಔಟ್‌ನಲ್ಲಿ ವಾಸವಾಗಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದರು. ಅಂತೆಯೇ ಭಾನುವಾರ ಮಧ್ಯಾಹ್ನ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲು ವಿಶುಕುಮಾರ್‌ ತೆರಳಿದ್ದರು. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios