ಬೆಂಗಳೂರಿನ ಹೊಂಗಸಂದ್ರದಲ್ಲಿ ಪ್ರಮೋದಾ ಎಂಬ ಗೃಹಿಣಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ. ದಾಂಪತ್ಯ ಕಲಹದಿಂದ ಪತಿಯಿಂದ ದೂರವಿದ್ದ ಆಕೆಯ ಕೊಲೆಗೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಬೊಮ್ಮನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ನ.16): ಮನೆಯಲ್ಲಿದ್ದ ಗೃಹಿಣಿ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಹೊಂಗಸಂದ್ರದಲ್ಲಿ ನಡಿದಿದೆ.

ಪ್ರಮೋದಾ(35), ಹತ್ಯೆಯಾದ ಗೃಹಿಣಿ, ಮೃತಳು ಉತ್ತರ ಕನ್ನಡ ಜಿಲ್ಲೆಯ ಶಿರಿಸಿ ಮೂಲದವರು ಎಂದು ಗುರುತಿಸಲಾಗಿದೆ. ಮೃತಳ ಪತಿ ಸುರೇಶ‌, ಅಕ್ಕ ತಂಗಿಯರ ಇಬ್ಬರನ್ನು ಮದುವೆಯಾಗಿದ್ದ. ಈಗ ಕೊಲೆಯಾಗಿರುವ ಪ್ರಮೋದಾ ಎರಡನೇ ಹೆಂಡತಿಯಾಗಿರುವವಳು. ಪ್ರಮೋದಾಳಿಗೆ ಇಬ್ಬರು ಮಕ್ಕಳಿದ್ದು, ದಾಂಪತ್ಯ ಕಲಹದಿಂದ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸವಿದ್ದಳು.

ಅನೈತಿಕ ಸಂಬಂಧ ಶಂಕೆ:

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಪೂರ್ವಪರ ಮಾಹಿತಿ ಕಲೆಹಾಕುತ್ತಿದ್ದಾರೆ. ಮಹಿಳೆ ಅನೈತಿಕ ಸಂಬಂಧಕ್ಕೆ ಬಲಿಯಾದಳ, ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಏಕೆ, ಹತ್ಯೆಗೈದು ಎಸ್ಕೇಪ್ ಆಗಿರುವ ಆರೋಪಿಗಳು ಯಾರು ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮನೆಯಲ್ಲಿದ್ದ ಗೃಹಿಣಿ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಹೊಂಗಸಂದ್ರದಲ್ಲಿ ನಡಿದಿದೆ.