ಕರೋಡ್ಪತಿಯಾಗಲು ಹೋಗಿ ವಿದ್ಯಾರ್ಥಿಯೊಬ್ಬ 25 ಲಕ್ಷ ಆಸೆಗೆ 84 ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು, (ಫೆ.14): 5 ಲಕ್ಷ ರೂಪಾಯಿ ಹಣದ ಆಸೆಗೆ ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ, ಬರೋಬ್ಬರಿ 84 ಸಾವಿರ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್ ಮೊಬೈಲ್ಗೆ ಜ.29ರಂದು ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಲಕ್ಕಿ ಡ್ರಾ ಹೆಸರಲ್ಲಿ ಕರೆ ಮಾಡಿದ್ದಾರೆ.
ಕಾರ್ತಿಕ್ ಮೊಬೈಲ್ಗೆ ಕರೆ ಮಾಡಿದ ಸೈಬರ್ ಕಳ್ಳರು, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ಮಾತನಾಡುತ್ತಿದ್ದೇವೆ. ನೀವು ಲಕ್ಕಿ ಡ್ರಾದಲ್ಲಿ 25 ಲಕ್ಷ ರೂಪಾಯಿ ವಿಜೇತರಾಗಿದ್ದೀರಿ. ಹಣ ಕ್ಲೇಮ್ ಮಾಡಿಕೊಳ್ಳಲು ಜಿಎಸ್ಟಿ ಕ್ಲಿಯರನ್ಸ್ ಮಾಡಬೇಕು ಎಂದು ನಂಬಿಸಿದ್ದಾರೆ.
ಬೆಂಗಳೂರು: ಕಾಲ್ ಬಾಯ್ ಆಗಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್
ಇದನ್ನು ನಂಬಿದ ಎಂಜಿನಿಯರಿಂಗ್ ವಿದ್ಯಾರ್ಥಿ ತಂದೆ-ತಾಯಿ ಬಳಿ ಪ್ರಾಜೆಕ್ಟ್ ವರ್ಕ್ ಎಂದು ಹೇಳಿ 80 ಸಾವಿರ ಪಡೆದಿದ್ದ. ತಂದೆಯಿಂದ ಹಣ ಪಡೆದು, ನಂತರ ಸೈಬರ್ ಕಳ್ಳರು ಸೂಚಿಸಿದ ಅಕೌಂಟ್ಗೆ ಕಾರ್ತಿಕ್ 84.100 ರೂಪಾಯಿ ವರ್ಗಾವಣೆ ಮಾಡಿದ್ದಾನೆ.
ಬಳಿಕ ಮತ್ತೆ ವರಸೆ ಶುರು ಮಾಡಿದ ಖದೀಮರು, ಲಕ್ಕಿ ಡ್ರಾ ಹಣವನ್ನು ಪಾವತಿಸದೆ ಇನ್ನಷ್ಟು ಹಣಕ್ಕಾಗಿ ಪೀಡಿಸಿದ್ದಾರೆ. ಅನುಮಾನಗೊಂಡು ಪ್ರಶ್ನಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 14, 2021, 9:13 PM IST