Asianet Suvarna News Asianet Suvarna News

ಬೆಂಗಳೂರು ಡ್ರಗ್ಸ್ ಕೇಸಿಗೆ ಲಂಕಾ ಸ್ಫೋಟದ ನಂಟು..?

ಬೆಂಗಳೂರು ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಡ್ರಗ್ಸ್ ಜಾಲ ಶ್ರೀಲಂಕಾದವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸುಳಿವೊಂದು ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Bengaluru Drugs case linked with Sri Lanka Blast Case Report kvn
Author
Bengaluru, First Published Sep 18, 2020, 7:15 AM IST

ಕೊಚ್ಚಿ: ಕನ್ನಡ ಚಿತ್ರ​ರಂಗ​ದ​ಲ್ಲಿನ ಡ್ರಗ್ಸ್‌ ಪ್ರಕ​ರ​ಣಕ್ಕೆ ಮತ್ತೊಂದು ‘ಸ್ಫೋಟ’ಕ ತಿರುವು ಸಿಕ್ಕಿದೆ. ಡ್ರಗ್ಸ್‌ ಜಾಲ ಸ್ಯಾಂಡಲ್‌ವುಡ್‌ನಿಂದ ಕೇರಳದವರೆಗೆ ಹಬ್ಬಿದ್ದು ಬೆಳಕಿಗೆ ಬಂದ ಬೆನ್ನಲ್ಲೇ, ಅದು ಅಲ್ಲಿಂದಲೂ ದಾಟಿ ಶ್ರೀಲಂಕಾದವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸುಳಿವೊಂದು ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ. ಹೀಗಾಗಿ 267 ಜನರ ಬಲಿ ಪಡೆದ 2019ರ ಶ್ರೀಲಂಕಾ ಸರಣಿ ಸ್ಫೋಟ ಪ್ರಕರಣದಲ್ಲಿ ಭಾರತೀಯರ ನಂಟಿನ ಬಗ್ಗೆ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎ​ನ್‌​ಐ​ಎ)ದ ತಂಡವು, ಇದೀಗ ಬೆಂಗಳೂರು ಡ್ರಗ್ಸ್‌ ಪ್ರಕರಣದ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಬೆಂಗಳೂರು ಡ್ರಗ್ಸ್‌ ಪ್ರಕರಣ ಸಂಬಂಧ ಇತ್ತೀಚೆಗೆ ಬಂಧಿತ ಆರೋ​ಪಿಯೊಬ್ಬ ಪದೇ ಪದೇ ಶ್ರೀಲಂಕಾಗೆ ಭೇಟಿ ನೀಡುತ್ತಿದ್ದ ವಿವ​ರ​ವನ್ನು ಎನ್‌​ಐಎ ಸಂಗ್ರ​ಹಿ​ಸಿದೆ. ಅಲ್ಲದೆ, ಚಿತ್ರ​ರಂಗ​ದ​ವರೂ ಲಂಕಾದ ಕ್ಯಾಸಿನೋಗಳಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಡ್ರಗ್ಸ್‌ ಕೇಸಲ್ಲಿ ಬಂಧಿತರನ್ನು ವಿಚಾರಣೆಗೆ ಒಳಪಡಿಸಲು ಎನ್‌ಐಎ ತಂಡ ನಿರ್ಧರಿಸಿದೆ ಎಂದು ಕೇರಳದ ಪತ್ರಿಕೆಯೊಂದು ವರದಿ ಮಾಡಿದೆ.

ಏನೀ ಸುಳಿವು?:

ಬೆಂಗಳೂರಿನಲ್ಲಿ ಬಂಧಿತ ಡ್ರಗ್ಸ್‌ ಪ್ರಕರಣದ ಆರೋಪಿಯೊಬ್ಬನ ಮೊಬೈಲ್‌ ಸೇರಿದಂತೆ ಕೆಲ ಉಪಕರಣಗಳನ್ನು ಜಾಲಾಡಿದಾಗ, ಅದರಲ್ಲಿ ಶ್ರೀಲಂಕಾ ಸ್ಫೋಟಕ್ಕೆ ಸಂಬಂಧಿಸಿದ್ದು ಎನ್ನಲಾದ ಕೆಲ ಸಂದೇಹಾಸ್ಪದ ಸಂದೇಶಗಳು ಲಭ್ಯವಾಗಿವೆ. ಇದಕ್ಕೆ ಪೂರಕವೆಂಬಂತೆ, ಶ್ರೀಲಂಕಾ ಸ್ಫೋಟದ ರೂವಾರಿ ಎನ್ನ​ಲಾದ ಜಹ್ರಾನ್‌ ಹಷೀಂ ಎಂಬಾತ ಬೆಂಗ​ಳೂ​ರಿಗೆ 3 ವರ್ಷದ ಹಿಂದೆ ಭೇಟಿ ನೀಡಿದ್ದ ಎಂಬ ಮಾಹಿತಿ ಗುಪ್ತ​ಚರ ದಳಕ್ಕೆ ಲಭಿ​ಸಿದೆ. ಈ ಕಾರ​ಣಕ್ಕೇ ಡ್ರಗ್ಸ್‌ ಕೇಸ್‌ ಆರೋ​ಪಿಗೂ ಹಷೀಂಗೂ ನಂಟು ಇರ​ಬ​ಹುದು ಎಂಬ ಅನು​ಮಾನ ಎನ್‌​ಐ​ಎ​ನದ್ದು.

ಡ್ರಗ್ಸ್ ಪ್ರಕರಣ; ಸ್ಫೋಟಕ 'ಮತ್ತಿನ' ನ್ಯೂಸ್ ಕೊಟ್ಟ ಕುಮಾರಸ್ವಾಮಿ

ಜಹ್ರಾನ್‌ ಹಷೀಂನನ್ನು ಸೋಷಿ​ಯಲ್‌ ಮೀಡಿ​ಯಾ​ಗ​ಳಲ್ಲಿ ಫಾಲೋ ಮಾಡು​ತ್ತಿದ್ದ ಯುವ​ಕ​ರನ್ನು ಈಗಾ​ಗಲೇ ಕೇರ​ಳ​ದಲ್ಲಿ ಎನ್‌​ಐಎ ವಿಚಾ​ರ​ಣೆಗೆ ಒಳ​ಪ​ಡಿ​ಸಿ​ದೆ. ಭಾರ​ತಕ್ಕೆ ಶ್ರೀಲಂಕಾ​ದಿಂದ ಭಾರೀ ಪ್ರಮಾ​ಣದ ಮಾದಕ ವಸ್ತು​ಗಳ ಕಳ್ಳ​ಸಾ​ಗಣೆ ನಡೆ​ಯು​ತ್ತಿ​ತ್ತು ಹಾಗೂ ಕೇರ​ಳದ ಯುವ​ಕರು ಶ್ರೀಲಂಕಾ ಕ್ಯಾಸಿ​ನೋ​ಗ​ಳಿಗೆ ಭೇಟಿ ನೀಡಿ ರೇವ್‌ ಮಾರ್ಟಿ ಮಾಡು​ತ್ತಿ​ದ್ದ​ರು ಎಂದು ಈ ಹಿಂದೆಯೇ ಗುಪ್ತ​ಚರ ದಳ ಪತ್ತೆ ಮಾಡಿ​ತ್ತು ಎಂದೂ ಮಾಧ್ಯಮ ವರ​ದಿ ಹೇಳಿ​ದೆ.

ಇದ​ಲ್ಲದೆ, ಇದೇ ಡ್ರಗ್ಸ್‌ ಕೇಸ್‌ ಆರೋ​ಪಿಗೂ, ಕೇರ​ಳದ ರಾಜ​ತಾಂತ್ರಿಕ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕ​ರ​ಣದ ಆರೋ​ಪಿಗೂ ನಂಟು ಇರ​ಬ​ಹುದು ಎಂದು ಎನ್‌​ಐಎ ಶಂಕಿ​ಸಿ​ದೆ.
 

Follow Us:
Download App:
  • android
  • ios