ಪಾರ್ಟ್ ಟೈಂ ಜಾಬ್‌ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದರೆ ಅಪಾರ ಕಮಿಷನ್‌ ಬರಲಿದೆ ಎಂದು ವೈದ್ಯೆಯೊಬ್ಬರಿಗೆ ಆಮಿಷವೊಡ್ಡಿ .8.79 ಲಕ್ಷವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಪೂರ್ವ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಜೂ.14) ಪಾರ್ಟ್ ಟೈಂ ಜಾಬ್‌ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದರೆ ಅಪಾರ ಕಮಿಷನ್‌ ಬರಲಿದೆ ಎಂದು ವೈದ್ಯೆಯೊಬ್ಬರಿಗೆ ಆಮಿಷವೊಡ್ಡಿ .8.79 ಲಕ್ಷವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಪೂರ್ವ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊರಮಾವು ಅಗರದ ಬಂಜಾರ ಲೇಔಟ್‌ ನಿವಾಸಿ ಡಾ ಕುಮಾರಿ ವಸುಧಾ(34) ವಂಚನೆಗೆ ಒಳಗಾದವರು. ಇತ್ತೀಚೆಗೆ ಡಾ ಕುಮಾರಿ ಅವರ ಮೊಬೈಲ್‌ನ ವಾಟ್ಸಾಪ್‌ಗೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಆನ್‌ಲೈನ್‌ ಪಾರ್ಟ್ ಜಾಬ್‌ ಬಗ್ಗೆ ಸಂದೇಶ ಬಂದಿದೆ. ಟೆಲಿಗ್ರಾಂ ಐಡಿ()ಗಳ ಮೂಲಕ ಲಿಂಕ್‌ ಕಳುಹಿಸಿ, ಹಣವನ್ನು ಹೂಡಿಕೆ ಮಾಡುವಂತೆ ಸೂಚಿಸಲಾಗಿದೆ. ಇನ್‌ಸ್ಟಾಗ್ರಾಮ್‌ ಪ್ರೊಫೈಲ್‌ಗಳನ್ನು ಲೈಕ್‌ ಮತ್ತು ಸಬ್‌ಸ್ಕೆ್ರೖಬ್‌ ಮಾಡಿದರೆ ಕಮಿಷನ್‌ ರೂಪದಲ್ಲಿ ಖಾತೆಗೆ ಹಣ ಜಮಾ ಆಗಲಿದೆ ಎಂದು ವೈದ್ಯೆಯನ್ನು ನಂಬಿಸಲಾಗಿದೆ. ಬಳಿಕ ಅಪರಿಚಿತರ ಸೂಚನೆ ಮೇರೆಗೆ ಡಾ ಕುಮಾರಿ ಅವರು ವಿವಿಧ ಹಂತಗಳಲ್ಲಿ ಅಪರಿಚಿತರು ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಆನ್‌ಲೈನ್‌ ಮುಖಾಂತರ ಬರೋಬ್ಬರಿ .8.79 ಲಕ್ಷ ವರ್ಗಾಯಿಸಿದ್ದಾರೆ.

ಮಂಗಳೂರು: ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ 4.89 ಲಕ್ಷ ರು. ವಂಚನೆ!

ಹಣ ವರ್ಗಾಯಿಸಿದ ಕೆಲ ದಿನಗಳ ಬಳಿಕ ಡಾ ಕುಮಾರಿ ಹೂಡಿಕೆ ಹಣ ಹಾಗೂ ಕಮಿಷನ್‌ ಬಗ್ಗೆ ವಿಚಾರಿಸಲು ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಸಂದೇಶಗಳಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹತ್ತಾರು ಬಾರಿ ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಿಲ್ಲ. ಬಳಿಕ ತಾನು ಸೈಬರ್‌ ವಂಚಕರ ಬಲೆಗೆ ಬಿದ್ದು ವಂಚನೆಗೆ ಒಳಗಾಗಿರುವುದು ಅರಿವಾಗಿದೆ.

ಕಡಿಮೆ ಬೆಲೆಗೆ ಬಂಗಾರ ವಂಚನೆ

ದಾವಣಗೆರೆ: ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ, ವೃದ್ಧೆಯಿಂದ 80 ಸಾವಿರ ರು. ಮೌಲ್ಯದ ಚಿನ್ನಾಭರಣ ಹಾಗೂ 10,000 ನಗದು ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೈಗಾರಿಕಾ ಪ್ರದೇಶದ ನಿವಾಸಿ ಸುಮಾ(62) ವಂಚನೆಗೊಳಗಾದ ವೃದ್ಧೆ. ಕಳೆದ ಜೂನ್‌ 8ರಂದು ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆಯನ್ನು ಮಾತನಾಡಿಸಿದ ಅಪರಿಚಿತ ಮಹಿಳೆಯು, ತನ್ನ ಬಳಿ ಇರುವ 3.50 ಲಕ್ಷ ರು. ಮೌಲ್ಯದ 12 ಬಂಗಾರದ ಕಾಸು, 12 ಬಂಗಾರದ ಕೋವಿ, 2 ಕಿವಿ ಓಲೆಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿದ್ದಾಳೆ. ಇದನ್ನು ನಂಬಿದ ವೃದ್ಧೆ, ತನ್ನ ಬಳಿ ಇದ್ದ ಬಂಗಾರದ ಕಿವಿಯೋಲೆ, ಬಂಗಾರದ ಸರದ ಜೊತೆಗೆ 10,000 ರು. ನಗದು ನೀಡಿದ್ದಾರೆ. ಪ್ರತಿಯಾಗಿ ಮಹಿಳೆಯಿಂದ ಪಡೆದಿದ್ದ ಚಿನ್ನ ನಕಲಿ ಎಂಬುದು ಮರುದಿನ ಗೊತ್ತಾಗಿದೆ. ಈ ಬಗ್ಗೆ ಬಸವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ: ಮರಳಿಸಿದ ಶಿಕ್ಷಕ

ದಾವಣಗೆರೆ: ರಸ್ತೆಯಲ್ಲಿ ಸಿಕ್ಕ 3 ಲಕ್ಷ ರು. ಮೌಲ್ಯದ ಚಿನ್ನದ ಸರವನ್ನು ಶಿಕ್ಷಕ ದಂಪತಿ ಪೊಲೀಸರ ಮೂಲಕ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Bengaluru crime: ವ್ಯಾಪಾರಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದ ನಾಲ್ವರ ಬಂಧನ

ಜಿಲ್ಲೆಯ ಚನ್ನಗಿರಿ ತಾಲೂಕು ಸಂತೆಬೆನ್ನೂರಿನ ಶ್ರೀನಿವಾಸ ರಸ್ತೆಯಲ್ಲಿ ಹಿರೇಕೊಗಲೂರಿನ ಶಿಕ್ಷಕ ದಂಪತಿ ಪೂರ್ಣಿಮಾ, ಶ್ರೀನಿವಾಸ ಶಾಲೆ ಮುಗಿಸಿ ದಿನಸಿ ತೆಗೆದುಕೊಳ್ಳಲು ಹೋದಾಗ ರಸ್ತೆಯಲ್ಲಿ ಮಾಂಗಲ್ಯ ಸರ ಸಿಕ್ಕಿದೆ. ಸುಮಾರು 3 ಲಕ್ಷ ರು. ಮೌಲ್ಯದ ಬಂಗಾರದ ಮಾಂಗಲ್ಯ ಸರವನ್ನು ತಕ್ಷಣವೇ ಶಿಕ್ಷಕ ದಂಪತಿ ಸ್ಥಳೀಯ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಚಿನ್ನದ ಸರವು ಗೊಲ್ಲರಹಳ್ಳಿ ಗ್ರಾಮದ ಪ್ರಾಧ್ಯಾಪಕ ಕುಮಾರ್‌ ಪತ್ನಿ ಲತಾ ಎಂಬುವರಿಗೆ ಸೇರಿದ್ದು, ಮಾಂಗಲ್ಯ ಸರವನ್ನು ಕಳೆದುಕೊಂಡ ಬಗ್ಗೆ ಲತಾ ಸಂತೆಬೆನ್ನೂರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಚಿನ್ನದ ಸರವನ್ನು ವಾರಸುದಾರರು ತಲುಪಿಸಿದ್ದಾರೆ.