* ಹಸು ಸಾಕಾಣೆ ಆಸೆಗೆ ಬಿದ್ದ ವ್ಯಕ್ತಿಗೆ ಮಹಾ ಮೋಸ* ಹಾಲು ಮಾರಿ ಬದುಕುವ ದನಗಾಹಿಗೆ 40 ಲಕ್ಷ ಜಿಎಸ್ಟಿ ತೆರಿಗೆ * ಈತನ ತಿಂಗಳ ಸಂಪಾದನೇ ಕೇವಲ 10 ಸಾವಿರ ರೂಪಾಯಿ...!* ಆದರೆ ಈತ ಬ್ಯಾಂಕ್ ಅಕೌಂಟ್ ನೋಡಿ ದಂಗಾದ ಖಾಕಿ ಪಡೆ

ಬೆಂಗಳೂರು (ನ. 13) ಹಸು ಸಾಕಾಣೆ ಆಸೆಗೆ ಬಿದ್ದ ವ್ಯಕ್ತಿಗೆ 40 ಲಕ್ಷ ರೂ. ಜಿಎಸ್ಟಿ (GST) ಪಾವತಿಸಲು ನೋಟಿಸ್ ಬಂದಿದೆ! ಆದರೆ ಈತನ ತಿಂಗಳ ಸಂಪಾದನೇ ಕೇವಲ 10 ಸಾವಿರ ರೂಪಾಯಿ...! ಆದರೆ ಕತೆ ಇಲ್ಲಿಗೆ ನಿಲ್ಲುವುದಿಲ್ಲ. ಈತನ ಬ್ಯಾಂಕ್ ಅಕೌಂಟ್ ನೋಡಿದ ಖಾಕಿ ಪಡೆಯೇ(Bengakuru Police) ದಂಗಾಗಿದೆ.

ದನಗಾಹಿ ಅಕೌಂಟ್​ನಲ್ಲಿ ಬರೋಬ್ಬರಿ ಎರಡು ಕೋಟಿ ರೂ. ವಹಿವಾಟು ನಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ಈತನಿಗೆ ನೋಟೀಸ್ ಜಾರಿಯಾಗಿದೆ. 40 ಲಕ್ಷ ರೂಪಾಯಿ ಜಿಎಸ್​ಟಿ ಹಣ ಪಾವತಿಸಲು ಈತನಿಗೆ ನೋಟಿಸ್ ನೀಡಲಾಗಿದೆ. 

ಬೆಂಗಳೂರು ಹೊರವಲಯದ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜುಗೆ ನೋಟಿಸ್ ಜಾರಿಯಾಗಿದೆ. ದನ ಮೇಯಿಸಿ, ಹಾಲು ಮಾರಾಟ ಮಾಡಿ ಜೀವನ ಸಾಗಿಸ್ತಿದ್ದ ರೈತ ನೋಟಿಸ್ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. ಸರ್ಕಾರದಿಂದ ಹಸುಸಾಲ ಪಡೆಯುವ ನೆಪದಲ್ಲಿ ಸ್ನೇಹಿತರೆ ವಂಚಿಸಿದ್ದಾರೆ. ತನಗೆ ಗೊತ್ತಿಲ್ಲದಂತೆ ಮುನಿರಾಜು ಸ್ನೇಹಿತರೇ ಆತನಿಗೆ ವಂಚಿಸಿದ್ದಾರೆ.

ಮನೆ ಮಾಲೀಕರೆ ಎಚ್ಚರ, ಹೀಗೂ ವಂಚೆನೆ ಮಾಡ್ತಾರೆ ಹುಷಾರ್!

ಮುನಿರಾಜು ಅವರ ಆಧಾರ್ ಕಾರ್ಡ್​, (Aadhar card) ಪಾನ್​ಕಾರ್ಡ್​ (PAN card) ಜೊತೆಗೆ ಬ್ಯಾಂಕ್ ಖಾತೆ ಪಡೆದು ವಂಚನೆ ಮಾಡಿದ್ದಾರೆ ಕಿಲಾಡಿ ಗಂಡ- ಹೆಂಡತಿ. ಎರಡು ತಿಂಗಳ ಹಿಂದೆಯೆ ಮುನಿರಾಜು ಹೆಸರಿನಲ್ಲಿ ಎರಡು ಕೋಟಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ ಮುನಿರಾಜುವಿಗೆ ತಿಳಿಯದಂತೆ ಎರಡು ಕೋಟಿ ಹಣ ಝಾನ್ಸಿ ಎಂಬ ಮಹಿಳೆ ಪಾಲಾಗಿದೆ..

ಎರಡು ತಿಂಗಳ ನಂತರ ಜಿಎಸ್ ಟಿ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿದೆ. 40 ಲಕ್ಷ ಹಣ ತೆರಿಗೆ ಕಟ್ಟುವಂತೆ ನೋಟಿಸ್ ನೋಟಿ ನೋಡಿ ಶಾಕ್ ಆದ ಮುನಿರಾಜು ಕೂಡಲೆ ಝಾನ್ಸಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಹಸು ಫಾರ್ಮ್ ಹೌಸ್ ಮಾಡಲು ನಿರ್ಧರಿಸಿದ್ದ ಮುನಿರಾಜುಗೆ ಸರ್ಕಾರದಿಂದ ಸಾಲ ಪಡೆದು ಹಸು ಖರೀದಿಸಲು ಝಾನ್ಸಿ ಹಾಗೂ ಆಕೆಯ ಪತಿ ಸೂಚನೆ ನೀಡಿದ್ದರು. ಹೀಗಾಗಿ ದಾಖಲೆಗಳನ್ನ ಝಾನ್ಸಿ ಬಳಿ ನೀಡಿದ್ದ. ಒಟಿಪಿ ನಂಬರ್ ಪಡೆದ ನಂತರ ನಿಮಗೆ ಸಾಲ ಮಂಜೂರಾಗಿಲ್ಲ ಎಂದು ಕಥೆ ಕಟ್ಟಿದ್ದಾರೆ. ಮುನಿರಾಜು ಕೂಡ ಅದನ್ನೇ ನಂಬಿಕೊಂಡಿದ್ದ.

ಆದ್ರೆ ಮುನಿರಾಜು ಬ್ಯಾಂಕ್ ಖಾತೆಯಲ್ಲಿ 2 ಕೋಟಿ ವಹಿವಾಟು ನಡೆದಿರುವುದು ಗೊತ್ತಾಗಿದೆ. ಝಾನ್ಸಿ, ಆಕೆಯ ಪತಿ ಮತ್ತು ಇತರರು ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಮುನಿರಾಜು ಬಾಗಲೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಡಿಮೆ ದರದಲ್ಲಿ ಬಾಡಿಗೆ ಮನೆ ಮಾಡಿಸಿ ಕೊಡುತ್ತೇವೆ. ನಿಮ್ಮ ಖಾತೆಯ ಕೆವೈಸಿ ಅಪ್ ಡೇಟ್ ಮಾಡಬೇಕಿದೆ, ನಿಮ್ಮ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದ್ದು ಸರಿ ಮಾಡಬೇಕಿದೆ, ನೀವು ಲಾಟರಿಯಲ್ಲಿ ಹಣ ಗೆದ್ದಿರುವಿರಿ ಹೀಗೆ ಹತ್ತು ಹಲವಾರು ನೆಪ ಹೇಳಿ ಕರೆ ಮಾಡುವ ವಂಚಕರು ಓಟಿಪಿ ಕೇಳುತ್ತಾರೆ. ಓಟಿಪಿ ಕೊಟ್ಟರೆ ನೀವು ವಂಚನೆಗೆ ಬಲಿಯಾದಂತೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅವರಿಗೂ ಇದೇ ರೀತಿ ವಂಚನೆ ಮಾಡಿದ್ದ ಪ್ರಕರಣವೂ ನಡೆದಿತ್ತು. ನಿಮ್ಮ ಬ್ಯಾಂಕ್ ಯಾವ ಕಾರಣಕ್ಕೂ ಪರ್ಸನಲ್ ಮಾಹಿತಿಯನ್ನು ಕೇಳುವುದಿಲ್ಲ. ಆನ್ ಲೈನ್ ಲೋಕದಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು ಮತ್ತು ಜಾಗೃತಿ ಸೂತ್ರಗಳನ್ನು ಪಾಲಿಸಬೇಕು . ಇದು ಅಲ್ಲದೇ ಟೆಕ್ಸ್ಟ್ ಮೆಸೇಜ್ ಗಳನ್ನು ಕಳಿಸಿ ಕ್ಲಿಕ್ ಮಾಡುವ ಆಸೆ ಹುಟ್ಟಿಸುತ್ತಾರೆ. ಬಾರ್ ಕೋಡ್ ಸ್ಕಾನ್ ಮಾಡಲು ಕೇಳುತ್ತಾರೆ.