ಮೇಘಾ ಶೆಟ್ಟಿ ತೀರ್ಥಹಳ್ಳಿಯ ಸುದೀಪ್ ಶೆಟ್ಟಿಯನ್ನು ಮದುವೆಯಾಗಿದ್ದರು. ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಮೇಘಾ ಶೆಟ್ಟಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಮೇಘಾ ಶೆಟ್ಟಿ ಪತಿ ಸುದೀಪ್ ಶೆಟ್ಟಿ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ವಿವೇಕನಗರ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. 

ಬೆಂಗಳೂರು(ಅ.05): ಅನುಮಾನಾಸ್ಪದವಾಗಿ ಗೃಹಿಣಿ ಸಾವನ್ನಪ್ಪಿದ ಘಟನೆ ಇಂದು(ಶನಿವಾರ) ನಗರದಲ್ಲಿ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಮೇಘಾ ಶೆಟ್ಟಿ ಮೃತ ದುರ್ದೈವಿ. 

ಮೇಘಾ ಶೆಟ್ಟಿ ತೀರ್ಥಹಳ್ಳಿಯ ಸುದೀಪ್ ಶೆಟ್ಟಿಯನ್ನು ಮದುವೆಯಾಗಿದ್ದರು. ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನ ಕೊಲೆ ಮಾಡಿದ್ದಾರೆ ಎಂದು ಮೃತ ಮೇಘಾ ಶೆಟ್ಟಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಮೇಘಾ ಶೆಟ್ಟಿ ಪತಿ ಸುದೀಪ್ ಶೆಟ್ಟಿ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ವಿವೇಕನಗರ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. 

ಬೆಂಗಳೂರು: ಮಲಗುವ ವಿಚಾರಕ್ಕೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕಾರ್ಮಿಕನ ಹತ್ಯೆ

ಪತಿಯ ಪೊಷಕರೂ ಕೂಡ ಮೇಘಾ ಶೆಟ್ಟಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಪತಿಯ ಪೊಷಕರ ಹಿಂಸೆಯನ್ನ ಮೇಘಾ ಶೆಟ್ಟಿ ತನ್ನ ತಂದೆ ತಾಯಿ ಬಳಿ ಹೇಳಿಕೊಂಡಿದ್ದಳು. 

ಮೃತ ಗೃಹಿಣಿಯ ದೇಹದ ಮೇಲೆ ಹಲ್ಲೆ ಮಾಡಿರೋ ಗುರುತು ಪತ್ತೆಯಾಗಿದೆ. ಪತಿ ಸುದೀಪ್ ಶೆಟ್ಟಿ ವಿರುದ್ಧ ಮೃತ ಯುವತಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.