ಬೆಂಗಳೂರು [ಫೆ. 09] ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಅಕ್ರಮ ಲೇಡಿಸ್ ಬಾರ್ ಗಳ ಮೇಲೆ ದಾಳಿ ನಡೆಸಿದ್ದಾರೆ.  ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಮೂರು ಬಾರ್‌ ಆಂಡ್ ರೆಸ್ಟೋರೆಂಟ್‌ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿ ವೇಳೆಯಲ್ಲಿ  15 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು,  75 ಯುವತಿಯರನ್ನು ರಕ್ಷಿಸಲಾಗಿದೆ.  ಅಶೋಕನಗರದ ಟಾಪೋಜ್ ಬಾರ್,  ಕಲಾಸಿಪಾಳ್ಯದ ಕೋಸ್ಟರಿಕಾ ಪಬ್, ಕಾಟನ್ ಪೇಟೆಯ ಸಿಟಿ ಸೆಂಟ್ರಲ್ ಬಾರ್ ಮೇಲೆ ದಾಳಿ ನಡೆಸಲಾಗಿದೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೆ ಬಿಟ್ಟ ಪಾಪಿ

ಬಂಧಿತರಿಂದ 1ಲಕ್ಷದ 24 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.  ಕಲಾಸಿಪಾಳ್ಯದ ಲಾಲ್‌ಬಾಗ್ ಪೋರ್ಟ್‌ ರಸ್ತೆಯ ಕೋಸ್ಟರಿಕಾ ಬಾರ್ ಆಂಡ್ ರೆಸ್ಟೋರೆಂಟ್ 1 ಮತ್ತು 2ನೇ ಮಹಡಿಯಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ನಿಯಮ ಉಲ್ಲಂಘಿಸಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸಲಾಗುತ್ತಿದೆ ಎಂಬ ಆರೋಪದ ಮೇಲೆ ದಾಳಿ ಮಾಡಲಾಗಿತ್ತು.