ನಟೋರಿಯಸ್ ಪಾತಕಿಗಳ ಮೇಲೆ ಬೆಂಗಳೂರು ಸಿಸಿಬಿ ಹದ್ದಿನಕಣ್ಣು

ಐಪಿಎಸ್ ಅಧಿಕಾರಿಗಳ ಟ್ರಾನ್ಸ್‌ಫರ್ ಬೆನ್ನಲ್ಲೆ ಜೈಲು ಸೇರಿದ್ದ ನಟೋರಿಯಸ್ ಗಳು ಒಬ್ಬೊಬ್ಬರಾಗೆ ಸಿಲಿಕಾನ್ ಸಿಟಿಗೆ ಎಂಟ್ರಿಯಾಗುತ್ತಿದ್ದಾರೆ.. ಇನ್ನೂ ಬೆಂಗಳೂರಿನ ಪಾತಕಿಗಳ ಕೈಗೆ ರಕ್ತದ ಕಲೆ ಅಂಟುವ ಮುನ್ನ ಸಿಸಿಬಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. 

Bengaluru CCB has an eagle eye on rowdies gvd

ವರದಿ: ಮಂಜುನಾಥ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು 

ಬೆಂಗಳೂರು (ನ.02): ಐಪಿಎಸ್ ಅಧಿಕಾರಿಗಳ ಟ್ರಾನ್ಸ್‌ಫರ್ ಬೆನ್ನಲ್ಲೆ ಜೈಲು ಸೇರಿದ್ದ ನಟೋರಿಯಸ್ ಗಳು ಒಬ್ಬೊಬ್ಬರಾಗೆ ಸಿಲಿಕಾನ್ ಸಿಟಿಗೆ ಎಂಟ್ರಿಯಾಗುತ್ತಿದ್ದಾರೆ.. ಇನ್ನೂ ಬೆಂಗಳೂರಿನ ಪಾತಕಿಗಳ ಕೈಗೆ ರಕ್ತದ ಕಲೆ ಅಂಟುವ ಮುನ್ನ ಸಿಸಿಬಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಕೆಲವು ಪಾತಕಿಗಳ ಐಪಿಎಸ್ ಅಧಿಕಾರಿಗಳಿಗೆ ಹೆದರಿ ಜೈಲಿ ಸೇರಿದ್ದು ನಾವು ನೋಡಿದ್ದೇವೆ. 

ಅದರಲ್ಲಿ ಸೈಕಲ್ ರವಿ, ಬೇಕರಿ ರಘು, ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ  ಕ್ಯಾಟ್ ರಾಜ, ಸೇರಿದಂತೆ ಆಕ್ಟಿವ್ ಇದ್ದ ರೌಡಿಗಳ ಮೇಲೆ ಸಿಸಿಬಿ ಹದ್ದಿನ ಕಣ್ಣಿಟ್ಟಿದ್ದಾರೆ. ಲಕ್ಷ್ಮಣನನ್ನ ಭೀಕರವಾಗಿ ಕೊಲೆ ಮಾಡಿ ಜೈಲು ಸೇರಿದ್ದ ಕ್ಯಾಟ್ ರಾಜ ವರ್ಷದ ನಂತರ ಬೇಲ್ ಮೇಲೆ ಹೊರ ಬಂದಿದ್ದ ಸಿಸಿಬಿ ಕಣ್ತಪ್ಪಿಸಿ ತುಮಕೂರು ಸೇರಿದ್ದ ಕ್ಯಾಟ್ ರಾಜ, ತುಮಕೂರಿನಲ್ಲಿ ಕುರಿ ಮೂರ್ತಿಯನ್ನ ಹತ್ಯೆ ಮಾಡಿ ಮತ್ತೆ ಜೈಲುಸೇರಿದ್ದ. ಸೈಕಲ್ ರವಿ, ಬೇಕರಿ ರಘು, ಇಬ್ಬರೂ ಪ್ರಕರಣಗಳಲ್ಲಿ ಕೋರ್ಟ್‌ಗೆ ದಾಖಲಾಗದೇ ತಲೆ ಮರೆಸಿಕೊಂಡಿದ್ದರು. 

ನ.8ರಂದು ಬೃಹತ್ ಜನಸಂಕಲ್ಪ ಸಮಾವೇಶಕ್ಕೆ ಬಿಜೆಪಿ ಸಜ್ಜು: ತವರು ಜಿಲ್ಲೆಯಲ್ಲಿ ರಣಕಹಳೆ ಮೊಳಗಿಸಲು ಸಜ್ಜಾದ ಸಿಎಂ

ಈ ಹಿಂದೆ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಹರೀಶ್ ಪಾಂಡೆ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಪತ್ತೆ ಮಾಡಿ ಗೂಂಡಾ ಆಕ್ಟ್ ಅಡಿ ಜೈಲಿಗಟ್ಟಿ ಒಂದು ವರ್ಷ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ರೂ ಒಂದು ವರ್ಷದ ನಂತರ ಮತ್ತೆ ಬೇಲ್ ಪಡೆದು ಒಬ್ಬೊಬ್ಬರಾಗೆ ಜೈಲಿನಿಂದ ಹೊರ ಬರ್ತಿದ್ದಾರೆ. ಅದ್ರಲ್ಲೂ ಕೆಲ ತಿಂಗಳ ಹಿಂದೆ ವಿಲ್ಸನ್ ಗಾರ್ಡನ್ ನಾಗ ಹೊರ ಬಂದಿದ್ದ ಅಜ್ಞಾತ ಸ್ಥಳಕ್ಕೆ ತೆಳಿದ್ದ ಆದರೆ ಆತನ ಮೇಲಿದ್ದ ಎಲ್ಲಾ ಪ್ರಕರಣಗಳಲ್ಲಿ ಬೇಲ್ ಪಡೆದಿರುವ ನಾಗ ಕತ್ತಲ ಕೂಪದಲ್ಲಿ ಅದೇನು ಪ್ಲಾನ್ ಹಾಕಿದ್ದಾನೋ ಗೊತ್ತಿಲ್ಲ. 

Udupi: ಹೂಳು ತುಂಬಿ ಹಾಳಾಯ್ತು ಸರ್ವ ಋತು ಮೀನುಗಾರಿಕಾ ಬಂದರು

ಇನ್ನೂ ಸೈಕಲ್ ರವಿ, ಹಾಗೂ ಬೇಕರಿ ರಘು ಇಬ್ಬರು ಬೇಲ್ ಮೇಲೆ ಹೊರ ಬಂದಿದ್ದ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಮೂವರನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಸೈಕಲ್ ರವಿ ಹಾಗೂ ಬೇಕರಿ ರಘು ಅಸೋಸಿಯೇಟ್ ಸತೀಶ ಬಂಧನವಾಗಿದ್ದು ಲೈಸೆನ್ಸ್ ಇಲ್ಲದ ಗನ್ ಇಟ್ಟುಕೊಂಡಿರುವ ಆರೋಪದಲ್ಲಿ ಬಂಧನವಾಗಿದ್ದು, ಬಂಧಿತ ಸತೀಶ ನನಗೆ ಗನ್ ನೀಡಿದ್ದು ಸೈಕಲ್ ರವಿ ಹಾಗೂ ಬೇಕರಿ ರಘು ಎಂದಿದ್ದಾನೆ ಈ ಹಿನ್ನೆಲೆ ಸಿಸಿಬಿ ಎಸಿಪಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದ ಮೂವರನ್ನ ಮತ್ತೆ ಜೈಲಿಗಟ್ಟು ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios