ಸ್ನೇಹಿತರಿಬ್ಬರು ಕಾಮತೃಷೆಯನ್ನು ತೀರಿಸಿಕೊಳ್ಳಲು ಕಾಲ್ ಗರ್ಲ್ ಅನ್ನು ಓಯೋ ರೂಮ್‌ಗೆ ಕರೆಸಿಕೊಂಡಿದ್ದಾರೆ. ನಂತರ ಕಾಲ್ ಗರ್ಲ್‌ಳನ್ನು ಡ್ರಾಪ್ ಮಾಡಲು ಹೋದಾಗ ಯಾರೋ ಅಪರಿಚಿತರು ಬಂದು ಕಾರಿನ ಸಮೇತವಾಗಿ ಕಾಲ್ ಗರ್ಲ್‌ಳನ್ನು ಕಿಡ್ನಾಪ್ ಮಾಡಿದ್ದಾರೆ.
ಬೆಂಗಳೂರು (ಫೆ.21): ಕಾಮತೃಷೆಯನ್ನು ತೀರಿಸಿಕೊಳ್ಳಲು ಇಬ್ಬರು ಯುವಕರು ಸೇರಿ ಕಾಲ್ ಗರ್ಲ್ ಅನ್ನು ಬಕ್ ಮಾಡಿದ್ದಾರೆ. ಓಯೋ ರೂಮ್‌ಗೆ ತೆರಳಿ ಸ್ನೇಹಿತರಿಬ್ಬರು ಸೇರಿ ಕಾರಿನಲ್ಲಿ ಓಯೋ ಗರ್ಲ್‌ಳನ್ನು ತಾನು ಹೇಳಿದ ಸ್ಥಳಕ್ಕೆ ಬಿಡಲು ಹೋದಾಗ ಯಾರೋ ಅಪರಿಚಿತರು ಬಂದು ಗರ್ಲ್‌ಳನ್ನು ಕಿಡ್ನಾಪ್ ಮಾಡಿದ್ದಾರೆ.
ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎನ್ನುವವರು ಪೊಲೀಸರಿಗೆ ತಾನು ಕರೆಸಿಕೊಂಡಿದ್ದ ಕಾಲ್ ಗರ್ಲ್‌ಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ಕೊಟ್ಟ ವ್ಯಕ್ತಿಯಾಗಿದ್ದಾನೆ. ಇನ್ನು ಕ್ಯಾಬ್ ಡ್ರೈವರ್ ಮಂಜುನಾಥ್ ಮತ್ತು ಆತನ ಸ್ನೇಹಿತ ರಜನಿಕಾಂತ್ ಎನ್ನುವವರು ಸೇರಿಕೊಂಡು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಕಾಲ್‌ಗರ್ಲ್‌ಳನ್ನು ಬುಕ್ ಮಾಡಿದ್ದಾರೆ.
ತಮ್ಮ ಯೋಜನೆಯಂತೆ ಕಾಲ್ ಗರ್ಲ್‌ಳನ್ನು ಕರೆತರುವ ಮುನ್ನ ಇಬ್ಬರೂ ಪಬ್ ಒಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ನಂತರ ಕೆಂಗೇರಿಯ ಬಳಿ ಇದ್ದ ಕಾಲ್‌ಗರ್ಲ್‌ಳನ್ನು ಪಿಕಪ್ ಮಾಡಿಕೊಂಡು ಓಯೋ ರೂಮ್‌ಗೆ ತೆರಳಿದ್ದಾರೆ. ಎಲ್ಲ ಕೆಲಸ ಮುಗೀತು ಎನ್ನುವಾಗ ಆಕೆಯನ್ನು ನಿಗದಿತ ಸ್ಥಳಕ್ಕೆ ಬಿಡಲು ಕರೆದುಕೊಂಡು ಹೋಗುವಾಗ ಈ ಕಿಡ್ನಾಪ್ ಘಟನೆ ನಡೆದಿದೆ.
ಬೇರೊಬ್ಬನ ಜೊತೆ ಪತ್ನಿಯ ಸರಸ, ಪ್ರಶ್ನಿಸಿದ ಗಂಡ ಅತ್ತೆಯ ಹೈತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಚಾಲಕಿ ಪತ್ನಿ!
ಘಟನೆಯ ವಿವರ ಇಲ್ಲಿದೆ ನೋಡಿ: ಮಂಜುನಾಥ್ ಎಂಬ ಕ್ಯಾಬ್ ಡ್ರೈವರ್ ತನ್ನ ಸ್ನೇಹಿತ ರಜನಿಕಾಂತನ ಜೊತೆ ಸೇರಿ ಕಾಲ್ ಗರ್ಲ್‌ಳನ್ನು ಕೆಂಗೇರಿ ಸಮೀಪದಿಂದ ಪಿಕಪ್ ಮಾಡಲಾಗಿದೆ. ಇಬ್ಬರೂ ತಾವು ಬುಕ್ ಮಾಡಿದ್ದ ಒಯೋ ರೂಂಗೆ ಹೋಗಿ ಕಾಮತೃಷೆ ತೀರಿಸಿಕೊಂಡು ಯುವತಿಯನ್ನು ರಾತ್ರಿ 1-30 ಕ್ಕೆ ವಾಪಾಸ್ ಬಿಡಲು ಕಾರಿನಲ್ಲಿ ಹೋಗುತ್ತಿದ್ದಾರೆ. ಈ ವೇಳೆ ದೇವರಚಿಕ್ಕನಹಳ್ಳಿ ಬಳಿ ಫಾಲೋ ಮಾಡಿಕೊಂಡು ಬಂದಿದ್ದ ನಾಲ್ಕೈದು ಜನರು, ನಮ್ಮ ಗಾಡಿಗೆ ಡಿಕ್ಕಿ ಹೊಡಿತೀಯಾ ಎಂದು ಮಂಜುನಾಥನ ಕಾರನ್ನು ಅಡ್ಡ ಹಾಕಿದ್ದಾರೆ. ನಂತರ ಆತನನ್ನು ಮನಸೋ ಇಚ್ಛೆ ಥಳಿಸಿದ್ದಾರೆ.
ಕಾರಿನೊಳಗೆ ಕುಳಿತುಕೊಂಡು ಚಾಲನೆ: ನಾಲ್ವರು ಅಪರಿಚಿತರಲ್ಲಿ ಇಬ್ಬರು ಬಂದು ಕಾರಿನೊಳಗೆ ಕುಳಿತುಕೊಂಡಿದ್ದಾರೆ. ಅದರಲ್ಲಿ ಒಬ್ಬ ಮಂಜುನಾಥನನ್ನು ಪಕ್ಕಕ್ಕೆ ಸರಿಸಿ ಕಾರು ಡ್ರೈವರ್ ಸೀಟಿನಲ್ಲಿ ಕುಳಿತುಕೊಂಡು ದೇವರ ಚಿಕ್ಕನಹಳ್ಳಿ ಕಡೆಯಿಂದ ಕೋಳಿಫಾರಂ ಗೇಟ್ ಕಡೆಗೆ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ಡ್ರೈವರ್ ಮಂಜುನಾಥ್ ಕಾರಿನೊಳಗಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಇನ್ನೊಂದು ಕಾರಿನಲ್ಲಿದ್ದವರು ತಪ್ಪಿಸಿಕೊಂಡ ಡ್ರೈವರ್‌ಗಾಗಿ ಶೋಧನೆ ಮಾಡಿದ್ದಾರೆ. ಆದರೆ, ಸಿಗದ ಹಿನ್ನೆಲೆಯಲ್ಲಿ ಕಾರಿನ ಸಮೇತವಾಗಿ ಕಾಲ್‌ಗರ್ಲ್ ಹಾಗೂ ಸ್ನೇಹಿತನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ.
IAS vs IPS: ರೋಹಿಣಿ ಸಿಂಧೂರಿ- ಡಿ. ರೂಪಾಗೆ ಶಿಸ್ತುಕ್ರಮವಿಲ್ಲದ ನೋಟಿಸ್ ಜಾರಿ: ಹಲ್ಲಿಲ್ಲದ ಹಾವಿನಂತೆ ಸರ್ಕಾರದ ನಡೆ
ಕಾರಿನಿಂದ ತಪ್ಪಿಸಿಕೊಂಡ ಮಂಜುನಾಥ್: ನಂತರ ಕೋಳಿಫಾರಂ ಗೇಟ್ ಬಳಿ ಅಪರಿಚಿತರಿಂದ ತಪ್ಪಿಸಿಕೊಂಡ ಮಂಜುನಾಥ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದನು. ಇನ್ನು ದೂರು ನೀಡಿದ ತಕ್ಷಣ ಪೊಲೀಸರ ವಾಹನ ಸ್ಥಳಕ್ಕೆ ಧಾವಿಸುತ್ತಿದೆ. ಇನ್ನು ಈ ವಾಹನವನ್ನು ನೋಡಿದ ಅಪರಿಚಿತರು ಮಂಜುನಾಥ್‌ನನ್ನು ಹುಡುಕುವುದು ಬಿಟ್ಟು ಕಾಲ್ ಗರ್ಲ್ ಹಾಗೂ ರಜನಿಕಾಂತ್ ಅವರ ಸಮೇತವಾಗಿ ಕಾರನ್ನು ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
