Asianet Suvarna News Asianet Suvarna News

Bengaluru: ಹೊಸ ವರ್ಷದ ಪಾರ್ಟಿಗಾಗಿ 5 ಲಕ್ಷ ಕೊಟ್ಟವನನ್ನೇ ಕೊಲೆಗೈದು ಕಾಡು ಪ್ರಾಣಿಗೆ ತಿನ್ನಲೆಸೆದ ಕಿರಾತಕರು!

ಹೊಸ ವರ್ಷದ ಪಾರ್ಟಿಗೆಂದು ಉದ್ಯಮಿ ಕಿಡ್ನಾಪ್‌ ಮಾಡಿ 5 ಲಕ್ಷ ರೂ. ಹಣ ಪಡೆದ ಕಿರಾತಕರು, ನಂತರ ಹಣ ಕೊಟ್ಟವನನ್ನೇ ಕೊಲೆಗೈದು ಕಾಡು ಪ್ರಾಣಿಗಳಿಗೆ ಆಹಾರವಾಗಲೆಂದು ಎಸೆದಿದ್ದಾರೆ.

Bengaluru business man murder for new year party and dead body thrown on forest sat
Author
First Published Jan 10, 2024, 1:04 PM IST

ಬೆಂಗಳೂರು (ಜ.10): ಹೊಸ ವರ್ಷದ ಪಾರ್ಟಿಗೆಂದು ವ್ಯಕ್ತಿಯೊಬ್ಬನನ್ನು ಕಿಡ್ನಾಪ್‌ ಮಾಡಿ 5 ಲಕ್ಷ ರೂ. ಹಣವನ್ನು ಪಡೆದ ಕಿರಾತಕರು, ನಂತರ ಹಣ ಕೊಟ್ಟವನನ್ನು ಬಿಟ್ಟು ಕಳಿಸದೇ ಕೊಲೆಗೈದು ಕಾಡು ಪ್ರಾಣಿಗಳಿಗೆ ಆಹಾರವಾಗಲೆಂದು ಎಸೆದು ಬಂದಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುಡಿಯುವ ವರ್ಗ ಒಂದಿದ್ದರೆ, ದುಡಿದು ಸಂಪಾದನೆ ಮಾಡಿದ್ದವರನ್ನು ದರೋಡೆ ಮಾಡಿ ಮಜಾ ಮಾಡುವ ಇನ್ನೊಂದು ವರ್ಗವಿದೆ. ಹೀಗೆ, ನಾಲ್ವರು ಕಿರಾತಕರು ತಮ್ಮ ಹೊಸ ವರ್ಷದ ಪಾರ್ಟಿ ಹಾಗೂ ಶೋಕಿಗಾಗಿ ಅಮಾಯಕರಿಂದ ಹಣ ಪಡೆದಿದ್ದೂ ಅಲ್ಲದೇ, ಅವರನ್ನು ಅನ್ಯಾಯವಾಗಿ ಕೊಲೆಗೈದು ಅವರ ಮೃತ ದೇಹವೂ ಸಿಗದಂತೆ ಕಾಡು ಪ್ರಾಣಿಗಳಿಗೆ ಎಸೆದು ವಿಕೃತಿ ಮೆರೆದಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಕಷ್ಟಪಟ್ಟು ದುಡಿದು ಮನೆ, ಹೆಂಡತಿ-ಮಕ್ಕಳ ಜೊತೆಗೆ ನೆಮ್ಮದಿಯಾಗಿದ್ದ ಕುಟುಂಬಗಳು ಬೀದಿಗೆ ಬರುತ್ತಿವೆ.

ಬೆಂಗಳೂರಿನ ಜ್ಞಾನಭಾರತೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಜಯ್ , ಆನಂದ್, ತಿಮ್ಮ ಮತ್ತು ಹನುಮಂತ ಎಂಬ ನಾಲ್ವರು ಹೊಸ ವರ್ಷದ ಪಾರ್ಟಿಗಾಗಿ ಯಾರನ್ನಾದರೂ ಕಿಡ್ನಾಪ್‌ ಮಾಡಬೇಕು ಎಂದು ಸ್ಕೆಚ್ ಹಾಕಿದ್ದರು. ಅದರಂತೆ ತಮಗೆ ಪರಿಚಿತವಿದ್ದ ಗುರುಸಿದ್ದಪ್ಪ ಎನ್ನುವವರನ್ನು ಡಿ.3ಒರಂದು ತಾವಿದ್ದ ಸ್ಥಳಕ್ಕೆ ಕರೆಸಿಕೊಂಡು ಕಿಡ್ನಾಪ್‌ ಮಾಡಿದ್ದಾರೆ. ನಂತರ, ಆತನ ಪತ್ನಿಗೆ ಕರೆ ಮಾಡಿಸಿ 5 ಲಕ್ಷ ರೂ. ತರಲು ಹೇಳಿದ್ದಾರೆ. ಹಣವನ್ನು ಪಡೆದ ನಂತರ ಆತನನ್ನು ಬಿಟ್ಟು ಕಳುಹಿಸದೇ ಕಾರಿನಲ್ಲಿ ಕೂಡಿಸಿಕೊಂಡು ಮದ್ಯ ಸೇವನೆ ಮಾಡುತ್ತಾ ಮಂಚಿನಬೆಲೆ ಡ್ಯಾಮ್‌ ಬಳಿಗೆ ಹೋಗಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿದೆ ವಿದೇಶಿ ಹುಡುಗಿಯರ ವೇಶ್ಯಾವಾಟಿಕೆ ದಂಧೆ!

ಮಂಚಿನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದ ಗ್ಯಾಂಗ್, ಡಿಸೆಂಬರ್ 30ರ ರಾತ್ರಿ ಪಾರ್ಟಿ ಮಾಡಿ ಗುರು ಸಿದ್ದಪ್ಪನನ್ನು ಬಿಟ್ಟು ಕಳಿಸುವುದಾಗಿ ಹೇಳಿದ್ದರು. ಆದ್ರೆ  ಇವನನ್ನು ಬಿಟ್ರೆ ಪೊಲೀಸರಿಗೆ ಹೇಳುತ್ತಾನೆ ಎಂದು ಕೊಲೆ ಮಾಡಿದ್ದಾರೆ. ಗುರುಸಿದ್ದಪ್ಪನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ, ಮೃತ ದೇಹವನ್ನು ಕಾಡಿನಲ್ಲಿಯೇ ಬೀಸಾಡಿ, ಅಲ್ಲಿಂದ ಹೊಸ ವರ್ಷಕ್ಕಾಗಿ ಗೋವಾಕ್ಕೆ ತೆರಳಿ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಆದರೆ, ಇತ್ತ ಹುಬ್ಬಳ್ಳಿಯಿಂದ ಬಂದು ಜೀವನ ಕಟ್ಟಿಕೊಂಡು, ಬೆಂಗಳೂರಿನ ಕಿರಾತಕ ಹುಡುಗರಿಗೆ ಪಾರ್ಟಿಗಾಗಿ ಹಣವನ್ನು ಕೊಟ್ಟ ಗುರುಸಿದ್ದಪ್ಪ ಅನಾಥ ಹೆಣವಾಗಿ ಕಾಡಿನಲ್ಲಿ ಬಿದ್ದಿದ್ದನು.

ಈ ನಡುವೆ ಗುರುಸಿದ್ದಪ್ಪ ಪತ್ನಿ ತನ್ನ ಗಂಡ ಹಣ ಪಡೆದುಕೊಂಡು ಹೋದವರು ಮನೆಗೆ ವಾಪಸ್ಸು ಬಂದಿಲ್ಲಾ ಎಂದು ಮಿಸ್ಸಿಂಗ್ ಕೇಸ್ ನೀಡಿದ್ದರು. ಮಿಸ್ಸಿಂಗ್ ಕೇಸ್ ವಿಚಾರಣೆ ಮಾಡುವಾಗ ಕೊಲೆ ಆಗಿರುವುದು ಪತ್ತೆಯಾಗಿದೆ. ಸದ್ಯ ಮಂಚಿನ ಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ  ಪೊಲೀಸರು ಮೃತ ದೇಹ ಪತ್ತೆ ಮಾಡಿದ್ದಾರೆ. ಸತತ ಎರಡು ದಿನ ಹುಡುಕಾಟದ ಬಳಿಕ ಮೃತ ದೇಹ ಪತ್ತೆಯಾಗಿದ್ದು, ಕಾಡು ಪ್ರಾಣಿಗಳು ಗುರುಸಿದ್ದಪ್ಪನ ದೇಹವನ್ನು ಏಳೆದುಕೊಂಡು ಹೋಗಿ ತಿಂದಿದ್ದಾವೆ. ಇನ್ನು ದೇಹದಲ್ಲಿ ತಲೆ ಬುರುಡೆ ಮತ್ತು ಬೆನ್ನೆಲುಬಿನ ಮೂಳೆಗಳು ಮಾತ್ರ ಲಭ್ಯವಾಗಿವೆ. ಗುರುಸಿದ್ದಪ್ಪನ ಅಳಿದುಳಿದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗುದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುಸಿದ್ದಪ್ಪ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.

ಬೆಂಗಳೂರು: ಆಟೋ ಚಾಲಕನ ಬರ್ಬರ ಹತ್ಯೆ, 10 ಮಂದಿ ಅರೆಸ್ಟ್‌

ಬೆಂಗಳೂರಲ್ಲಿ ನ್ಯೂ ಇಯರ್ ಪಾರ್ಟಿ ಹಣಕ್ಕೆ  ಕಿಡ್ನಾಪ್ ಮಾಡಿ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಹತ್ಯೆಗೈದ ಸಂಜಯ್ ಹಾಗೂ ಆನಂದ್ ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ, ಉಳಿದ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಈ ಆರೋಪಿಗಳು ಗುರುಸಿದ್ದಪ್ಪನ ಕೊಲೆಗೂ ಮುನ್ನ ಬಿಹಾರದಿಂದ ಬಂದು ಕಾರ್ಪೆಂಟರ್ ಮತ್ತು ಪೇಂಟಿಂಗ್ ಕೆಲಸದ ಮೇಸ್ತ್ರಿಯಾಗಿದ್ದ ಸಂಜಯ್ ಪಂಡಿತ್ ಅವರನ್ನು ಕಿಡ್ನಾಪ್‌ ಮಾಡಲು ಯೋಜಿಸಿದ್ದರು. ಆದರೆ, ಆತ ಬೆಂಗಳೂರು ಬಿಟ್ಟು ಹೊರಗೆ ಹೋಗಿದ್ದು, ತನ್ನ ಬದಲು ಕಾರ್ಮಿಕನೊಬ್ಬನ್ನು ಕಳಿಸಿದ್ದನು. ಆದರೆ, ಹಣ ಕೊಡದೇ ಸಂಜಯ್ ಯಾಮಾರಿಸಿದ್ದಾಗ ತಾನು ಕಳಿಸಿದ್ದ ಕಾರ್ಮಿಕ ಕಿಶನ್‌ಗೆ ಚಾಕು ಬೀಸಿ ಕೊಲೆಗೆ ಯತ್ನಿಸಿದ್ದರು. ಆದರೂ, ಕಿಶನ್ ಓಡಿ ಹೋಗಿದ್ದನು.

Follow Us:
Download App:
  • android
  • ios