BDA Corruption : ಕಾರ್ನರ್ ಸೈಟ್ಗಾಗಿ ಎಂತೆಂಥಾ ಗೋಲ್ ಮಾಲ್.. ನಿಪುಣರೇ ಬೆಚ್ಚಬೇಕು!
* ಬಿಡಿಎ ಕಾರ್ನರ್ ಸೈಟ್ ಅಕ್ರಮ ಪ್ರಕರಣ
* ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಮೂರು ಎಫ್ ಐ ಆರ್
* ಬಿಡಿಎ ಮೂವರು ವಿಜಿಲೆನ್ಸ್ ಇನ್ಸ್ ಪೆಕ್ಟರ್ ಗಳಿಂದ ಶೇಷಾದ್ರಿಪುರಂ ಠಾಣೆಯಲ್ಲಿ ದೂರು
* ಕಾರ್ನರ್ ಸೈಟ್ ಆಕ್ಷನ್ ನಲ್ಲಿ ನಡೆದ ಗೋಲ್ ಮಾಲ್ ಬೆಳಕಿಗೆ
ಬೆಂಗಳೂರು( ಜು. 18) ಬಿಡಿಎ (Bangalore Development Authority) ಅಕ್ರಮ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಮೂರು ಎಫ್ ಐ ಆರ್ (FIR) ದಾಖಲಾಗಿದೆ.
ಬಿಡಿಎ ಮೂವರು ವಿಜಿಲೆನ್ಸ್ ಇನ್ಸ್ ಪೆಕ್ಟರ್ ಗಳಿಂದ ಶೇಷಾದ್ರಿಪುರಂ ಠಾಣೆಯಲ್ಲಿ(Bengaluru Police) ದೂರು ದಾಖಲಾಗಿದೆ. ಕಾರ್ನರ್ ಸೈಟ್ ಆಕ್ಷನ್ ನಲ್ಲಿ ನಡೆದ ಗೋಲ್ ಮಾಲ್ ಬೆಳಕಿಗೆ ಬಂದಿದೆ. ವಿಜಿಲೆನ್ಸ್ ಇನ್ಸ್ ಪೆಕ್ಟರ್ ಗಳಾದ ಶ್ರೀನಿವಾಸ ವಿ.ಟಿ, ಲಕ್ಷ್ಮಯ್ಯ, ಇಂದ್ರಮಣಿಯಿಂದ ದೂರು ದಾಖಲಾಗಿದೆ.
ಆರೋಪಿಗಳಾದ ಮಂಜುನಾಯ್ಕ್, ರಮೇಶ್ ಬಾಬು, ಶ್ರೀನಿವಾಸ್ ಮೇಲೆ ಎಫ್ ಐಆರ್ ದಾಖಲಾಗಿದೆ. ಉಳಿದಂತೆ ಬಿಡಿಎ ಸಿಬ್ಬಂದಿ ಹಾಗೂ ಬ್ರೋಕರ್ ಗಳ ಹೆಸರನ್ನೂ ಕೂಡ ಆರೋಪಿಗಳ ಪಟ್ಟಿಯಲ್ಲಿ ದಾಖಲಿಸಲಾಗಿದೆ.
BDA Scam: ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ ಮೌಲ್ಯದ ನಿವೇಶನ ನೋಂದಣಿ
IPC 120B, 465, 466, 468, 471, 472, 409, 420, 149 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಬ್ಲಾಕ್ ಹಾಗೂ ನಿವೇಶನದ ಸಂಖ್ಯೆಯನ್ನ ಬದಲಿಸಿ ವಂಚಿಸಿರೋದು ಬಟಾಬಯಲಾಗಿದೆ.
ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ ನ 7 ಹಾಗೂ 8 ನೇ ಬ್ಲಾಕ್ ನಲ್ಲಿರೋ ನಿವೇಶನವನ್ನ ಅದಲು ಬದಲು ಮಾಡಿಕೊಂಡು ಶುದ್ಧ ಕ್ರಯ ಪತ್ರ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಕಾರ್ನರ್ ಸೈಟ್ ಗಳಿಗೆ ಇ-ನೋಟಿಫಿಕೇಷನ್ ಕರೆಯದೇನೇ ಸೈಟ್ ಡೀಲ್ ಮಾಡಿಕೊಂಡಿರುವುದು ಪ್ರಮುಖ ಅಂಶ.
ನಕಲಿ ದಾಖಲೆಗಳನ್ನ ನೀಡಿ ಶುದ್ಧ ಕ್ರಯಪತ್ರ ಮಾಡಿಕೊಳ್ಳಲಾಗಿದೆ. ಇದೀಗ ಕೇವಲ 3 ಕಾರ್ನರ್ ಸೈಟ್ ಗಳ ಅಕ್ರಮ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ 120 ಕಾರ್ನರ್ ಸೈಟ್ ನಲ್ಲಿ ನಡೆದ ಅಕ್ರಮದ ಬಗೆಗೆ ತನಿಖೆ ನಡೆಯೋದ್ಯಾವಾಗ ಎನ್ನುವ ಪ್ರಶ್ನೆ ಸಹ ಇದರೊಂದಿಗೆ ಎದ್ದಿದೆ.
ಇನ್ನೊಂದು ಮುಖ:
ಐಪಿಸಿ ಸೆಕ್ಷನ್ ಗಳಲ್ಲಿ ಆರೋಪಿಗಳು ಅಪರಾಧಿಗಳೆಂದು ಕರೆಸಿಕೊಳ್ಳೋಕೆ ಹತ್ತಾರು ವರ್ಷವೇ ಬೇಕು ಎನ್ನುವ ಮಾತಿದೆ. ಪಿಸಿ ಆಕ್ಟ್ ಅಡಿ ಕೇಸು ದಾಖಲಿಸಿಕೊಂಡಿದ್ರೆ ಆರೋಪಿಗಳಿಗೆ ಸಜಾ ಕಟ್ಟಿಟ್ಟಬುತ್ತಿಯಾಗ್ತಿತ್ತು. ಪ್ರಿವೆನ್ಷನ್ ಆಫ್ ಕರಪ್ಷನ್ ಆಕ್ಟ್ ನಡಿ ಕೇಸ್ ದಾಖಲಿಸಿಕೊಂಡಿದ್ರೆ ಕೇಸಿಗೆ ಬೇಗ ರಿಸಲ್ಟ್ ಸಿಗ್ತಿತ್ತು. ಅದನ್ನ ಬಿಟ್ಟು ಲೋಕಲ್ ಠಾಣೆಯಲ್ಲಿ FIR ದಾಖಲಿಸಿಕೊಳ್ಳಲಾಗಿದೆ.
ಲೋಕಲ್ ಠಾಣೆಯ ದೂರು ಇದು ಕೂಡ ಬಿಡಿಎನ ಗೇಮ್ ಪ್ಲ್ಯಾನಾ? ಈಗಾಗ್ಲೇ ಎಸಿಬಿ ಅಧಿಕಾರಿಗಳು ಸರ್ಕಾರಕ್ಕೆ ಬಿಡಿಎ ಗೋಲ್ಮಾಲ್ ನ 52 ಫೈಲ್ ಗಳ ವರದಿಯನ್ನ ಕಳುಹಿಸಕೊಟ್ಟಿದೆ. ಸರ್ಕಾರ ಬಿಡಿಎ ಗೆ ಗೋಲ್ಮಾನ್ ನಡೆದ ಸಂಬಂಧ ತನಿಖೆಗೆ ಆದೇಶ ನೀಡ್ಬಹುದಾ ಎಂಬ ಪತ್ರವನ್ನ ಬರೆದಿತ್ತು ಈ ಸಂಬಂಧ ಇದೀಗ ಬಿಡಿಎ ಅಕ್ರಮ ನಡೆದಿರುವ 30 ಫೈಲ್ ಗಳನ್ನ ಅರ್ಬನ್ ಡೆವಲಪ್ಮೆಂಟ್ ಗೆ ಮರಳಿಸಿದೆ. ಅಕ್ರಮ ನಡೆದಿದೆ ತನಿಖೆ ನಡೆಸಬಹುದು ಅಂತ ಕೂಡ ಹಿಂಬರಹವನ್ನ ನೀಡಿದೆ ಉಳಿದ 22 ಫೈಲ್ ಗಳನ್ನ ಬಿಡಿಎ ತನ್ನ ಬಳಿಯೇ ಇಟ್ಟುಕೊಂಡಿದೆ. ಯಾವಾಗ ಅರ್ಬನ್ ಡೆವಲಪ್ಮೆಂಟ್ ನ ಪ್ರಿನ್ಸಿಪಲ್ ಸೆಕ್ರೆಟರಿ ತನಿಖೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ದೊಡ್ಡ ತಿಮಿಂಗಿಲಗಳನ್ನು ಹಿಡಿಯುವ ಬದಲು ಚಿಕ್ಕ ಮೀನಿಗೆ ಗಾಳ ಹಾಕಿದಂತೆ ಆಗಿದೆ ಪರಿಸ್ಥಿತಿ.