ಕಾರವಾರ, (ಜ.21): ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.

ಸುಮ(21), ತಿಪ್ಪೇಶ(20) ಹಾಗೂ ರವಿ(25) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಬೆಂಗಳೂರಿನ ಹೆಬ್ಬಗೋಡಿಯ ತಿರುಪಾಲ್ಯ ಮೂಲದವರಾಗಿದ್ದು, ಒಟ್ಟಾರೆ 16 ಜನರ ತಂಡ ದೇವರ ದರ್ಶನಕ್ಕೆಂದು ಗೋಕರ್ಣಕ್ಕೆ ತೆರಳಿದ್ದರು.

ಬಸ್‌ನಲ್ಲಿ ಕಿತಾಪತಿ ಮಾಡ್ತಿದ್ದ ಕಾಮಿಗೆ ಪೊಲೀಸರೆದುರೆ ಯುವತಿ ಗೂಸಾ ಕೊಟ್ಟಿದ್ದು ಹೀಗೆ!

ಆದ್ರೆ, ದುರದೃಷ್ಟವಶಾತ್ ದೇವರ ದರ್ಶನದ ನಂತರ ಕಡಲ ತೀರದಲ್ಲಿ ಈಜಲು ತೆರಳಿದಾಗ ಈ ಅವಘಡ ಸಂಭವಿಸಿದೆ. ಇದೇ ಸಮಯದಲ್ಲಿ ಮುಳುಗುತ್ತಿದ್ದ ಇಬ್ಬರನ್ನ ಪ್ರವಾಸಿ ಬೋಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.