Asianet Suvarna News Asianet Suvarna News

Bengaluru ATM Scam: ಸಾಕ್ಷಿ ಸಮೇತ ಕಳ್ಳನನ್ನು ಹಿಡಿದುಕೊಟ್ಟರೂ ದೂರು ದಾಖಲಿಸದ ಪೊಲೀಸರು!

ಬೆಂಗಳೂರಿನಲ್ಲಿ ಎಟಿಎಂ ಕಾರ್ಡ್ ಬದಲಿಸಿ ಹಣ ವಂಚಿಸಿದ ಕಳ್ಳನನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟರೂ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ ನಂತರವಷ್ಟೇ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru ATM money withdraw scam Police did not taken complaint sat
Author
First Published Oct 8, 2024, 3:55 PM IST | Last Updated Oct 8, 2024, 3:55 PM IST

ಬೆಂಗಳೂರು (ಅ.08): ಸಿಲಿಕಾನ್ ಸಿಟಿಯಲ್ಲಿ ಎಟಿಎಂ ಕಾರ್ಡ್‌ನಲ್ಲಿ ಹಣ ಬಿಡಿಸಿಕೊಡಲು ಸಹಾಯ ಮಾಡುವುದಾಗಿ ಎಟಿಎಂ ಕಾರ್ಡ್ ಬದಲಿಸಿ, ಹಣ ಬಿಡಿಸಿಕೊಂಡು ವಂಚನೆ ಮಾಡಿದ ಕಳ್ಳನನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟರೂ ಪೊಲೀಸರು ದೂರು ದಾಖಲಿಸುತ್ತಿಲ್ಲ. 

ಸಾಮಾನ್ಯವಾಗಿ ನಾವು ನೇವೇನಾದರೂ ಹಣ, ಆಭರಣ ಸೇರಿ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡರೆ ಪೊಲೀಸರಿಗೆ ಹೋಗಿ ದೂರು ಕೊಡುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ದೂರು ಕೊಡೋಕು ಮುಂಚೆಯೋ ತನಗೆ ವಂಚನೆ ಮಾಡಿ, ಹಣವನ್ನು ಲಪಟಾಯಿಸಿದ್ದ ಕಳ್ಳನನ್ನು ಪತ್ತೆ ಮಾಡಿ, ನಂತರ ಸಾಕ್ಷಿ ಸಮೇತ ದೂರು ಕಜೊಡಲು ಹೋಗಿದ್ದಾರೆ. ಆದರೆ, ಸಾಕ್ಷಿ ಸಮೇತ ದೂರು ಕೊಟ್ಟು ಕಳ್ಳನನ್ನು ಅರೆಸ್ಟ್ ಮಾಡಿ ಎಂದರೆ, ಪೊಲೀಸರು ದೂರನ್ನೇ ದಾಖಲಿಸಿಕೊಳ್ಳದೇ ಉಡಾಫೆ ವರ್ತನೆ ತೋರಿಸಿದ್ದಾರೆ. ಇದೇನಾ ಪೊಲೀಸರ ಕರ್ತವ್ಯ ಎಂದರೆ ಎಂದು ಸಾರ್ವಜನರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹುಲಿ ಕಾರ್ತಿಕ್ ಸ್ಪಷ್ಟನೆ: ನಾನು ಹೇಳಿದ 'ಹೊಂಡ' ಜಾತಿ ನಿಂದನೆ ಪದವಲ್ಲ

ಎಟಿಎಂಗೆ ಹಣ ಬಿಡಿಸಲು ಹೋದ ಗ್ರಾಹಕನೊಬ್ಬ ತನಗೆ ಎಟಿಎಂನಲ್ಲಿ ಹಣ ಬಿಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಇನ್ನೊಬ್ಬ ವ್ಯಕ್ತಿಯ ಸಹಾಯ ಕೇಳಿದ್ದಾನೆ. ಆಗ ಸಹಾಯ ಮಾಡುವ ನೆಪದಲ್ಲಿ ಗ್ರಾಹಕನಿಗೆ ಹಣ ಬಿಡಿಸಿಕೊಡಲು ಪಿನ್ ನಂಬರ್ ಕೇಳಿ ಅದನ್ನು ಒತ್ತಿದ್ದಾರೆ. ಆಗ ಗ್ರಾಹಕರ ಕಣ್ತಪ್ಪಿಸಿ ಅವರ ಎಟಿಎಂ ಕಾರ್ಡ್ ಅನ್ನು ಬದಲಿಸಿ ಬೇರೊಂದು ಕಾರ್ಡ್ ಅನ್ನು ಕೊಟ್ಟು ಹೋಗಿದ್ದಾರೆ. ಆ ನಂತರ ಮನೆಗೆ ಹೋದಾಗ ತಮ್ಮ ಖಾತೆಯಿಂದ ಹಣ ಕಡಿತ ಆಗುತ್ತಿರುವ ಮಸೇಜ್‌ಗಳು ಮೊಬೈಲ್‌ಗೆ ಬಂದಿವೆ. ಹೀಗಾಗಿ, ಎಟಿಎಂ ನೊಡಿಕೊಂಡಾಗ ಬದಲಿ ಆಗಿರುವುದು ಪತ್ತೆಯಾಗಿದೆ. ಕೂಡಲೇ ಬ್ಯಾಂಕಿನ ಎಟಿಎಂ ಸಿಸಿಟಿವಿ ಹಾಗೂ ತಮ್ಮ ಖಾತೆಯಿಂದ ಎಲ್ಲೆಲ್ಲಿ ಹಣ ಕಡಿತವಾಗಿದೆ ಎಂದು ತಿಳಿದು ಅಲ್ಲಿಯ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ.

ಪೊಲೀಸರಿಗೆ ನಾವು ಏನಾದರೂ ಕಳ್ಳತನ ಆಗಿದೆ ಎಂದು ದೂರು ಕೊಟ್ಟರೆ, ಕೂಡಲೇ ಕಾರ್ಯ ಪ್ರವೃತ್ತರಾಗಿ ಕಳ್ಳನನ್ನು ಅಂತೂ ಹುಡುಕಿ ಕೊಡುವುದಿಲ್ಲ. ಹೀಗಾಗಿ, ನಾವೇ ಕಳ್ಳನನ್ನು ಸಾಕ್ಷಿ ಸಮೇತ ಯಾರೆಂದು ಗುರುತು ಹಿಡಿದು, ಅದಕ್ಕೆ ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸಿ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ. ಆದರೆ, ನಾವು ಸಾಕ್ಷಿ ಸಮೇತ ದೂರು ಕೊಟ್ಟರೂ ದೂರು ದಾಖಲಿಸಿಕೊಂಡಿಲ್ಲ. ಒಟ್ಟು ಮೂರು ವಾರಗಳ ‌ಕಾಲ ದೂರು ದಾಖಲಿಸದೇ ಅಲೆದಾಡಿಸಿದ್ದಾರೆ. ಕೊನೆಗೆ ನಾನು ಹಿರಿಯ ಪೊಲೀಸರಿಗೆ ದೂರು ನೀಡೋದಾಗಿ ವಂಚನೆಗೊಳಗಾದ ವ್ಯಕ್ತಿ ಹೇಳಿದಾಗ, ಬ್ಯಾಡರಹಳ್ಳಿ ಠಾಣೆಯಲ್ಲಿ ಪೊಲೀಸರು ‌ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜಯಶ್ರೀ ಬಾರ್‌ನಲ್ಲಿ ಕೇವಲ 20 ರೂ.ಗೆ ಆಫ್ ಮರ್ಡರ್!

ಇಷ್ಟಕ್ಕು ಏನಿದು ಪ್ರಕರಣ ಗೊತ್ತಾ?
ಕೆಂಪಣ್ಣ ಎಂಬಾತ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಆ ವೇಳೆ ಹಣ ಬರದೇ ಇದ್ದಿದ್ದರಿಂದ ಪಕ್ಕದಲ್ಲೇ ಇದ್ದ ವ್ಯಕ್ತು ಸಹಾಯ ಮಾಡಲು ಬಂದಿದ್ದಾನೆ. ಬಳಿಕ 3 ಸಾವಿರ ಹಣ ತೆಗೆದುಕೊಟ್ಟಿದ್ದಾನೆ. ಇತ್ತ ಕೆಂಪಣ್ಣ ಹಣ ಎಣಿಸಿಕೊಳ್ಳುತ್ತಿರುವಾಗ ವಂಚಕ ಎಟಿಎಂ ಕಾರ್ಡ್ ಬದಲಾಯಿಸಿದ್ದಾನೆ. ಅದರ ಅರಿವಿಲ್ಲದೇ ಹಣ ತೆಗೆದುಕೊಂಡು ಮನೆಗೆ ಬಂದಿದ್ದ ಕೆಂಪಣ್ಣನ ಮೊಬೈಲ್‌ಗೆ ವಿವಿಧ ಎಟಿಎಂಗಳಲ್ಲಿ ಹಣ ಡ್ರಾ ಮಾಡುತ್ತಿರುವುದಾಗಿ ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ಶಾಪಿಂಗ್ ಮಾಡುತ್ತಿರುವ ಮೆಸೇಜ್‌ಗಳು ಬಂದಿವೆ. ಆಗ ಬ್ಯಾಂಕ್ ಡಿಟೇಲ್ಸ್ ತೆಗೆಸಿದ್ದ ಕೆಂಪಣ್ಣನಿಗೆ ಎಲ್ಲೆಲ್ಲಿ ಹಣ ಡ್ರಾ ಆಗಿದೆ ಎಂಬ ಮಾಹಿತಿ ಸಂಗ್ರಹಿಸಿ ಅಲ್ಲೆಲ್ಲಾ ಹೋಗಿ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದರು. ಬಳಿಕ ಎಲ್ಲ ಸಿಸಿಟಿವಿ ಕ್ಲಿಪ್ ಗಳೊಂದಿಗೆ ದೂರು ನೀಡಲು ಹೋದರೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕೇಸ್ ದಾಖಲಿಸಲು‌ ಸಬೂಬು ಹೇಳಿದ್ದರು.

Latest Videos
Follow Us:
Download App:
  • android
  • ios