ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 14 ಅಪಘಾತ: ನಾಲ್ವರ ಸಾವು, 15 ಮಂದಿಗೆ ಗಾಯ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 14 ಅಪಘಾತಗಳು ಸಂಭವಿಸಿವೆ. ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದು, 15 ಮಂದಿಗೆ ಗಾಯಗಳಾಗಿವೆ.

Bengaluru 14 accidents in one day four dead and fifteen injury sat

ಬೆಂಗಳೂರು (ಆ.22): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೋಮವಾರದಿಂದ ಬೆಳಗ್ಗೆ 10 ಗಂಟೆಯಿಂದ ಮಂಗಳವಾರ ಬೆಳಗ್ಗೆ 10 ಗಂಟೆವರೆಗೆ ಬರೋಬ್ಬರಿ 14 ಅಪಘಾತಗಳು ಸಂಭವಿಸಿವೆ. ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದು, 15 ಮಂದಿಗೆ ಗಾಯಗಳಾಗಿವೆ.

ಹೌದು, ಟ್ರಾಫಿಕ್‌ ಸಿಟಿ ಬೆಂಗಳೂರಿನಲ್ಲಿ 1 ಕೋಟಿಗೂ ಅಧಿಕ ವಾಹನಗಳಿಗೆ. ಪ್ರತಿನಿತ್ಯ 80 ಲಕ್ಷಕ್ಕೂ ಅಧಿಕ ವಾಹನಗಳು ರಸ್ತೆಗಳಲ್ಲಿ ಸಂಚಾರ ಮಾಡುತ್ತವೆ ಎನ್ನುವ ಮಾಹಿತಿಯಿದೆ. ಅದರಲ್ಲಿಯೂ 15 ಲಕ್ಷಕ್ಕೂ ಅಧಿಕ ವಾಹನಗಳು ಹೊರಗಿನಿಂದ ಬಂದು ಹೋಗುತ್ತವೆ. ಇಷ್ಟು ದೊಡ್ಡ ಪ್ರಮಾಣದ ವಾಹನಗಳ ಸಂಚಾರಕ್ಕೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಸೋಮವಾರ ಬೆಳಗ್ಗೆಯಿಂದ ಮಂಗಳವಾರದ ಬೆಳಗ್ಗೆವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ 14 ದೊಡ್ಡ ಮಟ್ಟದ ಅಪಘಾಗಳು ಸಂಭವಿಸಿವೆ. ಈ ಪೈಕಿ ಬೈಕ್‌, ಕಾರು, ಕ್ಯಾಂಟರ್‌, ಟಾಟಾ ಏಸ್‌, ಆಟೋಗಳು ಸೇರಿದಂತೆ ವಿವಿಧ ವಾಹನಗಳ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ 15ಕ್ಕೂ ಅಧಿಕ ಜನರು ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದಾರೆ.

ಶಾಸಕ ಎಸ್‌.ಟಿ. ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆ ಚರ್ಚೆ: ಯಶವಂತಪುರಕ್ಕೆ 7.63 ಕೋಟಿ ರೂ. ಅನುದಾನ ಮಂಜೂರು

ಎಲ್ಲೆಲ್ಲಿ ಅಪಘಾತಗಳು
ಹೆಬ್ಬಾಳ - 1 ( ಒಂದು ಸಾವು‌) (ಸೆಲ್ಫ್ ಆಕ್ಸಿಡೆಂಟ್ ) 
ರಾಜಾಜಿನಗರ - 2 (ಒಂದು ಸಾವು‌ ) (ಸೆಲ್ಫ್ ಆಕ್ಸಿಡೆಂಟ್)
ಹೆಣ್ಣೂರು - 2 ( ಒಂದು ಸಾವು) (ಪಾದಚಾರಿ ಸಾವು)
ಹುಳಿಮಾವು- 2 (ಒಂದು ಸಾವು) (ಸೆಲ್ಫ್ ಆಕ್ಸಿಡೆಂಟ್)
ಬಸವನಗುಡಿ - 2
ಕೆ.ಆರ್ ಪುರಂ - 1
ವೈಟ್ ಫೀಲ್ಡ್ - 2
ಸದಾಶಿವನಗರ - 1
ಮೈಕೋ ಲೇ ಔಟ್ - 1

ಇಬ್ಬರು ಪಾದಾಚಾರಿಗಳ ಮೃತ: ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ಸೆಲ್ಪ್ ಆಕ್ಸಿಡೆಂಟ್ ಗೆ 32 ವರ್ಷದ ಯುವಕ ಬಲಿಯಾಗಿದ್ದಾನೆ. ಪಶ್ಚಿಮ ಬಂಗಾಳ‌ ಮೂಲದ ಯುವಕ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಆರ್‌ಎಕ್ಸ್ ಬೈಕ್‌ ಡಿಕ್ಕಿಯಾಗಿ ಸ್ಥಳದಲ್ಲಿಯೇ ಪೂನಂದಾಸ್ ( 32) ಮಹಿಳೆ ಮೃತಪಟ್ಟಿದ್ದಾಳೆ. ಇನ್ನು ರಾಜಾಜಿನಗರ ಸೆಲ್ಫ್ ಆಕ್ಸಿಡೆಂಟ್ ರಾಹುಲ್ (19) ಸಾವಿಗೀಡಾಗಿದ್ದಾನೆ. ಈತ ಅತಿ ವೇಗದಿಂದ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದನು.

Bengaluru ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಮನಸೋತ ಮೈಕ್ರೋಸಾಫ್ಟ್‌ ಸಿಇಒ ಬಿಲ್‌ಗೇಟ್ಸ್

ಹುಳಿಮಾವು ಬಳಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೈಕರ್‌ ಸಾವು: ಇನ್ನು ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ 2 ಅಪಘಾತ ಸಂಭವಿಸಿದ್ದು, ಮೋಹನ್ ( 32) ಎಂಬಾತ ಸಾವಿಗೀಡಾಗಿದ್ದನು. ಇನ್ನು ಮೃತ ಮೋಹನ್‌ ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದ ಮೋಹನ್ ಕೂಡ್ಲು ಗೇಟ್ ಸಮೀಪ ವಾಟರ್‌ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದ್ದನು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಉಳಿದಂತೆ ನಡೆದ ಅಪಘಾತಗಳಲ್ಲಿ ಸವಾರರಿಗೆ ಗಂಭೀರ ಮತ್ತು ಸಣ್ಣಪುಟ್ಟ ಗಾಯಗಳು ಆಗಿವೆ. ಮತ್ತೊಂದೆಡೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ರಸ್ತೆಗೆ ಮುಗುಚಿದ ಲಾರಿ. ಇದರಲ್ಲಿ ಒಂದು ಲಾರಿಯ ಚಾಲಕನ ಕಾಲು ಮುರಿತ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Latest Videos
Follow Us:
Download App:
  • android
  • ios