ಬೆಂಗಳೂರು ನಜ್ಮಾ ಕೌಸರ್: ಮಿಸ್ಡ್ ಕಾಲ್ ಕೊಟ್ಟು ಪಟಾಯಿಸ್ತಾಳೆ, ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡ್ತಾಳೆ
ಬೆಂಗಳೂರಿನಲ್ಲಿ ಮಿಸ್ಡ್ ಕಾಲ್ ಮೂಲಕ ಪುರುಷರನ್ನು ಸೆಳೆದು ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿ ಮೂವರ ಬಂಧನ. ಹೆಚ್ಚಿನ ಮಾಹಿತಿಗಾಗಿ ಈಗಲೇ ಓದಿ!
ಬೆಂಗಳೂರು (ಆ.15): ಸಿಲಿಕಾನ್ ಸಿಟಿ ಬೆಂಗಳೂರು ಪುರುಷರೇ ಈಕೆಯಿಂದ ಎಚ್ಚರದಿಂದಿರಿ. ಸಿಕ್ಕ ಸಿಕ್ಕ ಫೋನ್ ನಂಬರ್‌ಗೆ ಮಿಸ್ ಕಾಲ್ ಮಾಡ್ತಾಳೆ. ಒಂದು ವೇಳೆ ಯಾವುದೋ ಮಿಸ್ಡ್ ಕಾಲ್ ಇದೆ ಎಂದು ಕಾಲ್ ಮಾಡಿದರೆ ನಿಮ್ಮೊಂದಿಗೆ ಸಲುಗೆಯಿಂದ ಮಾತನಾಡಿ, ಲವ್ವಲ್ಲಿ ಬೀಳಿಸಿಕೊಳ್ತಾಳೆ. ನಂತರ, ತಾನೇ ಮಂಚಕ್ಕೆ ಆಹ್ವಾನಿಸಿ ಹನಿಟ್ರ್ಯಾಪ್ ಮಾಡಿ ದಿವಾಳಿ ಮಾಡ್ತಾಳೆ.
ಹೌದು, ಬೆಂಗಳೂರಿನಲ್ಲಿ ಮೂವರು ಸ್ನೇಹಿತರು ಸೇರಿಕೊಂಡು ಹನಿಟ್ರ್ಯಾಪ್ ಮಾಡುತ್ತಾ ಹಣವನ್ನು ಗಳಿಸುವ ಹಾದಿಯನ್ನು ಹಿಡಿದಿದ್ದಾರೆ. ಅಷ್ಟಕ್ಕೂ ಇವರೇನು ಮದುವೆಯಾಗದೇ ಯಾವುದೇ ಜವಾಬ್ದಾರಿ ಇಲ್ಲದವರಲ್ಲ. ಮದುವೆಯಾಗಿ ಮಕ್ಕಳೂ ಇದ್ದಾರೆ. ದುಡಿದು ತಿನ್ನದೇ, ವಾಮ ಮಾರ್ಗದಲ್ಲಿ ಜನರನ್ನು ವಂಚಿಸಿ ಹಣ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲಿಸರು ಹನಿಟ್ರ್ಯಾಪ್ ಮಾಡುತ್ತಿದ್ದ ಹ್ಯಾಂಗ್‌ನ ಮೂವರು ಸದಸ್ಯರನ್ನು ಬಂಧಿಸಿದ್ದಾರೆ. ನಜ್ಮಾ ಕೌಸರ್, ಮಹಮ್ಮದ್ ಆಶೀಕ್ ಮತ್ತು ಖಲೀಲ್ ಬಂಧಿತ ಆರೋಪಿಗಳು ಆಗಿದ್ದಾರೆ.
ಫಸ್ಟ್‌ನೈಟ್‌ನಲ್ಲಿ ಸರ್ಪ್ರೈಸ್ ಕೊಡಲು ಹೋಗಿ ಕೈ, ಕಣ್ಣು ಕಿವಿ ಕಳ್ಕೊಂಡ ಗಂಡ… ಖಾಸಗಿ ಅಂಗ ಚೆಕ್ ಮಾಡ್ಕೊಂಡ !
ಮನೆಯನ್ನೇ ಹನಿಟ್ರ್ಯಾಪ್ ಅಡ್ಡ ಮಾಡಿಕೊಂಡದ್ದಮ ಐನಾತಿ:
ಸಂಪಿಗೆಹಳ್ಳಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿರುವ ನಜ್ಮಾ ಕೌಸರ್ ತನ್ನ ಮನೆಯನ್ನೆ ಹನಿಟ್ರ್ಯಾಪ್ ಅಡ್ಡೆ ಮಾಡಿಕೊಂಡಿದ್ದಾಳೆ. ಮೊದಲಿಗೆ ಅಪರಿಚಿತ ಮೊಬೈಲ್ ಸಂಖ್ಯೆಗೆ (Unknown Mobile Number) ಕರೆ ಮಾಡುವ ನಜ್ಮಾ ಕೌಸರ್ ಮಿಸ್ ಕಾಲ್ ಕೊಟ್ಟು ಕರೆ ಕಟ್ ಮಾಡುತ್ತಾಳೆ. ನಂತರ ಮಿಸ್ಡ್ ಕಾಲ್ ನೋಡಿಕೊಂಡು ವಾಪಸ್ ಕರೆ ಮಾಡಿದವರಿಗೆ ಯಾವುದೋ ಒಂದು ಹೆಸರೇಳಿ ಯಾವ ಊರು ಎಂದು ಕೇಳುತ್ತಾಳೆ. ಆಗ ಬೆಂಗಳೂರಿನವರು ಎಂದು ಗೊತ್ತಾಗುತ್ತಿದ್ದಂತೆ ತಮ್ಮ ಅಸಲಿ ಐನಾತಿ ಆಟವನ್ನು ಆರಂಭಿಸುತ್ತಾರೆ.
ಆಕಡೆಯಿಂದ ಕರೆ ಮಾಡಿದವರು ಬೆಂಗಳೂರಿನವರು ಅಂತ ಗೊತ್ತಾಗುತ್ತಿದ್ದಂತೆ, ಸಲುಗೆಯಿಂದ ಒಂದೆರೆಡು ಮಾತನಾಡಿ ಕರೆ ಕಟ್ ಮಾಡುತ್ತಾರೆ. ನಂತರ, ಮೆಸೇಜ್ ಮಾಡಿತ್ತಾ ಪುನಃ ಕರೆ ಮಾಡುತ್ತಾ ಸಲುಗೆ ಬೆಳೆಸಿಕೊಳ್ಳುತ್ತಾರೆ. ನಂತರ, ಕೆಲವೇ ದಿನಗಳಲ್ಲಿ ತೀರಾ ಪರಿಚಿತರು ಎನ್ನುವಂತೆ ನಟಿಸುತ್ತಾ ಅವರಿಂದ ಸಣ್ಣ ಮೊತ್ತದ ಹಣವನ್ನು ಪಡೆದು ಅದನ್ನು ವಾಪಸ್ ಕೊಡುತ್ತಾಳೆ. ನಂತರ ಪ್ರೀತಿಯ ನಾಟಕವಾಡಿ, ಲೈಂಗಿಕವಾಗಿ ಪ್ರಚೋದನೆಯನ್ನೂ ಮಾಡುತ್ತಾಳೆ. ಇದಾದ ಮೇಲೆ ನಮ್ಮ ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ, ಕಾಮದಾಟಕ್ಕೆ ಮಂಚಕ್ಕೆ ಬರುವಂತೆ ಆಹ್ವಾನಿಸುತ್ತಾಳೆ.
ಅತ್ತೆ, ಇಬ್ಬರು ಮಕ್ಕಳ ಕೊಂದ ಪೊಲೀಸ್ ಪತ್ನಿ: ಹೆಂಡ್ತಿ ಕೊಂದು ನೇಣಿಗೆ ಶರಣಾದ ಪತಿ
ಫೋನಿನಲ್ಲಿ ಪರಿಚಯವಾದ ಮಹಿಳೆ ಮನೆಯಲ್ಲಿ ಯಾರೂ ಇಲ್ಲ ಮನೆಗೆ ಬಾ ಎಂದು ಕರೆದಿದ್ದನ್ನು ನಂಬಿಕೊಂಡು ಹೋದವರನ್ನು ಸೀದಾ ಮಂಚಕ್ಕೆ ಕರೆದೊಯ್ಯುತ್ತಾಳೆ. ಇನ್ನೇನು ಬೆಡ್ ರೂಮಿನಲ್ಲಿ ಬಾಗಿಲು ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಆಕೆಯ ಗ್ಯಾಂಗ್‌ನ ಇತರೆ ಸದಸ್ಯರು ಎಂಟ್ರಿ ಕೊಡುತ್ತಾರೆ. ಬಂದವರೇ ಯಾರೋ ನೀನು? ಇಲ್ಲಿಗೆ ಏಕೆ ಬಂದಿದ್ದೀಯಾ? ಎಂದು ಹಲ್ಲೆ ಮಾಡುತ್ತಾರೆ. ನಂತರ, ನೀನು ಹಣವನ್ನು ಕೊಟ್ಟರೆ ಇಲ್ಲಿಂದ ಬಿಡುತ್ತೇವೆ. ಇಲ್ಲವೆಂದರೆ ನಿನ್ನ ಮೇಲೆ ರೇಪ್ ಕೇಸ್ ಹಾಕಿ ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕುತ್ತಾರೆ.
ಜೈಲು ಶಿಕ್ಷೆ ಭಯದಿಂದ ಮಹಿಳೆಯ ಬಳಿ ಬಂದವರು ಸಾವಿರಾರು ರೂ. ಹಣವನ್ನು ಕೊಟ್ಟು ಹೋಗುತ್ತಾರೆ. ಹೀಗೆ, ಕಳೆದ ವಾರ ಕೊರಿಯರ್ ಬಾಯ್ ಒಬ್ಬನನ್ನು ಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಹಣ ಕಿತ್ತುಕೊಂಡು ಕಳಿಸಿತ್ತು. ಸಂತ್ರಸ್ಥ ಯುವಕ ಕೊಟ್ಟ ದೂರಿನನ್ವಯ ನಜ್ಮಾ ನೇತೃತ್ವದ ಹನಿಟ್ರ್ಯಾಪ್ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.