ಬೆಳಗಾವಿ ಜನರನ್ನೇ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ಕಿಡ್ನಾಪ್ ಗ್ಯಾಂಗ್ ಕೊನೆಗೂ ಅರೆಸ್ಟ್!

ಬೆಳಗಾವಿ ಜಿಲ್ಲೆಯ ಜನರ ನಿದ್ದೆಗೆಡಸಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಬೆಳಗಾವಿ ಜಿಲ್ಲೆಯ ಹಾರುಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

belagavi murder mystery Kidnappers gang arrested gow

ವರದಿ: ಮುಷ್ತಾಕ್ ಪೀರ್ಜಾದೆ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಫೆ.23): ಇದು ಬೆಳಗಾವಿ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ಗ್ಯಾಂಗ್. ಇವರಿಗೆ ಪೊಲೀಸರ ಭಯವಿಲ್ಲ ಹೇಳುವವರಿಲ್ಲ ಕೇಳುವವರೂ ಇಲ್ಲ. ಹಣ ಬೇಕು ಅಂದ್ರೇ ಬೇಕಾದವರ ಮನೆಗೆ ನುಗ್ಗುವುದು, ಕಿಡ್ಯಾಪ್ ಮಾಡುವುದು. ನಂತರ ಬ್ಲ್ಯಾಕ್ ಮೇಲೆ ಮಾಡುವುದು. ಹೀಗೆ ಕಳ್ಳತನ, ದರೋಡೆ, ಕೊಲೆ ಸುಲಿಗೆ ಮಾಡ್ತಾ ಓಡಾಡ್ತಿದ್ದ ಗ್ಯಾಂಗ್ ಕಡೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದೆ. ಈ ಗ್ಯಾಂಗ್ ಬಂಧಿಸಿದ ಪೊಲೀಸರಿಗೆ ಗೊತ್ತಾಗಿದ್ದು ಮಾತ್ರ ಶಾಕಿಂಗ್ ವಿಚಾರ, ಹೊರ ಬಂದಿದ್ದು ಅದೊಂದು ಮರ್ಡರ್ ಮಿಸ್ಟ್ರಿ? ಅಷ್ಟಕ್ಕೂ ಯಾವುದಿದು ಕಿಡ್ನಾಪ್ ಮರ್ಡರ್ ಗ್ಯಾಂಗ್? ಪೊಲೀಸರ ಖೆಡ್ಡಾಗೆ ಈ ಗ್ಯಾಂಗ್ ಬಿದ್ದಿದ್ದೇ ರೋಚಕ ಕಥೆ.

ಬೆಳಗಾವಿ ಜಿಲ್ಲೆಯ ಜನರ ನಿದ್ದೆಗೆಡಸಿದ್ದ ಖತರ್ನಾಕ್ ಗ್ಯಾಂಗ್ ಇದೀಗ ಬೆಳಗಾವಿ ಜಿಲ್ಲೆಯ ಹಾರುಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೋಟೋದಲ್ಲಿರುವ ವೃದ್ಧನ ಹೆಸರು ಭೂಪಾಲ್ ಆಜೂರೆ(70) ಅಂತಾ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ನಿವಾಸಿ. ತನ್ನಷ್ಟಕ್ಕೆ ತಾನಿದ್ದ ಈ ವೃದ್ದನನ್ನ ಕಳೆದ 11 ನೇ ತಾರೀಕಿನಂದು  ಖಣದಾಳ ಗ್ರಾಮದಲ್ಲಿರುವ ಆತನ ಮನೆಯಿಂದ ಬೆಳಗಿನ ಜಾವ ಕಿಡ್ನಾಪ್ ಮಾಡಿಕೊಂಡು ಹೋಗಿರುತ್ತಾರೆ. ಹೀಗೆ ಕಿಡ್ನಾಪ್ ಮಾಡಿದ ಬಳಿಕ ಕುಟುಂಬಸ್ಥರಿಗೆ ಮೊದಲು ಹದಿನೈದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ ಪಡೆಯುತ್ತಾರೆ.

ಇದಕ್ಕಿಂತ ಪೂರ್ವದಲ್ಲಿ ಸೆ.23ರಂದು ಕಿಡ್ನಾಪ್ ಮಾಡಿ 30ಲಕ್ಷಕ್ಕೆ ಡಿಮ್ಯಾಂಡ್ ಮಾಡ್ತಾರೆ ಒಂದು ವೇಳೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಧಮಕಿ ಹಾಕಿರುತ್ತಾರೆ. ಈ ವೇಳೆ ಹಣ ಕೊಟ್ಟು ಬಿಡಿಸಿಕೊಂಡು ಬಂದಿದ್ದ ಕುಟುಂಬಸ್ಥರು ಮತ್ತೆ ಮೊನ್ನೆ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಡ್ತಾರೆ. ಈ ಎಲ್ಲ ಬೆಳವಣಿಗೆ ನಡುವೆ ಸೆ.8ರಂದು ಇದೇ ಗ್ರಾಮದಲ್ಲಿ ಒಬ್ಬರ ಮನೆಗೆ ನುಗ್ಗಿ ಜೆಸಿಬಿ, ಎರಡು ಮೊಬೈಲ್, ಬೈಕ್ ನ್ನ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿರುತ್ತಾರೆ. ಈ ಕುರಿತು ಆರೋಪಿಗಳ ಮೇಲೆ ಕೇಸ್ ದಾಖಲಾಗುತ್ತೆ ಆಗ ಪೊಲೀಸರು ಆರೋಪಿ ಬೆನ್ನು ಬಿದ್ದಾಗ ಆತನ ಹಿನ್ನೆಲೆ ಎನೂ ಅಂತಾ ತೆಗೆದು ನೋಡಿದಾಗ ಆತನ ಮೇಲೆ ಈಗಾಗಲೇ ಇಪ್ಪತ್ತು ಪ್ರಕರಣಗಳು ದಾಖಲಾಗಿದ್ದನ್ನ ಗಮನಿಸಿ ಆತನೇ ಈ ಕಳ್ಳತನ ಮಾಡಿದ್ದಾನೆ ಅಂತಾ ಶೋಧ ಕಾರ್ಯ ನಡೆಸಿ ಬಂಧಿಸಿ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬೆಳಕಿಗೆ ಬಂದಿದ್ದೇ ಈ ವೃದ್ದ ಭೂಪಾಲ್ ಕಿಡ್ನಾಪ್ ಮಿಸ್ಟ್ರಿ.

ಅಷ್ಟಕ್ಕೂ ಖಣದಾಳ ಗ್ರಾಮದ ವಾಸುದೇವ ನಾಯಕ್ ಎಂಬಾತನನ್ನ ಬಂಧಿಸಿ ವರ್ಕೌಟ್ ಮಾಡಿದ ಪೊಲೀಸರಿಗೆ ಗೊತ್ತಾಗಿದ್ದು ಭೂಪಾಲ್ ಎಂತಾನನ್ನ ಕಿಡ್ನಾಪ್ ಮಾಡಿ ಹಣ ವಸೂಲಿ ಮಾಡಿ ಬಿಟ್ಟು ಕಳುಹಿಸಿದ ವಿಚಾರ. ಅಷ್ಟೊತ್ತಿಗಾಗಲೇ ಭೂಪಾಲ್ ಕುಟುಂಬಸ್ಥರು ಕೂಡ ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಿಸಿದ್ದರು. ಎರಡು ಕೇಸ್ ಗಳನ್ನ ಬೆನ್ನಟ್ಟಿ ವಿಚಾರಣೆ ನಡೆಸಿದಾಗ ಹೊರ ಬಂದಿದ್ದು ಮತ್ತೊಂದು ಕಿಡ್ನಾಪ್ ಆ್ಯಂಡ್ ಮರ್ಡರ್ ಕೇಸ್.

ಹೌದು ಇಲ್ಲಿ ಅಪರಣಕ್ಕೊಳಗಾದ ಭೂಪಾಲ್ ಮಗ ಬಾಳಪ್ಪ(45) ಎಂತಾನನ್ನ ಆಗಷ್ಟ್ 18ರಂದು ಅಪಹರಣ ಮಾಡಿ ಐವತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುತ್ತಾರೆ, ಈ ವೇಳೆ ಒಂದು ಎಕರೆ ಜಮೀನು ಮಾರಾಟ ಮಾಡಿ ಅರ್ಧದಷ್ಟು ಹಣಕೊಟ್ಟು ಬಾಳಪ್ಪನನ್ನ ಬಿಡುವಂತೆ ಹೇಳಿರುತ್ತಾರೆ. ಇದಾದ ಬಳಿಕ ಆತ ಮನೆಗೂ ಬರುವುದಿಲ್ಲ ಈ ವೇಳೆ ಆರೋಪಿ ವಾಸುದೇವ್ ನನ್ನ ಕೇಳಿದ್ರೇ ನನಗೆ ಹೆದರಿ ಊರು ಬಿಟ್ಟಿದ್ದಾನೆ ಅಂತಾ ಆರು ತಿಂಗಳಿಂದ ಕಥೆ ಹೇಳಿಕೊಂಡು ಬರ್ತಿರುತ್ತಾನೆ. ಪೊಲೀಸರ ವಿಚಾರಣೆಯಲ್ಲಿ ಹಣಕ್ಕಾಗಿ ಆತನನ್ನ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಅಲ್ಲಿ ಕೊಲೆ ಮಾಡಿ ವಿಶಾಲಘಡದಲ್ಲಿರುವ ಘಾಟ್ ನಲ್ಲಿ ಎಸೆದಿದ್ದೇವೆ ಅಂತಾ ಬಾಯಿ ಬಿಟ್ಟಿದ್ದಾರೆ.

ಸುಖೇಶ್ ಚಂದ್ರಶೇಖರ್ ಇದ್ದ ಜೈಲ್ ಸೆಲ್ ಮೇಲೆ ದಾಳಿ: ಐಷಾರಾಮಿ ವಸ್ತುಗಳ ಜಪ್ತಿ

ಸದ್ಯ ಕೊಲೆ ಕೇಸ್ ಕೂಡ ದಾಖಲಿಸಿಕೊಂಡ ಪೊಲೀಸರು ಆತನ ಶವ ಶೋಧ ಕಾರ್ಯ ಆರಂಭಿಸಿದ್ದಾರೆ. ಇನ್ನೂ ಪ್ರಕರಣದಲ್ಲಿ ಒಟ್ಟು 13ಜನರ ಮೇಲೆ ಕೇಸ್ ದಾಖಲಾಗಿದ್ದು ಈ ವರೆಗೂ ಆರೋಪಿಗಳಾದ ವಾಸುದೇವ ನಾಯಕ್, ಭುಜಂಗ ಜಾಧವ್, ಈರಯ್ಯಾ ಹಿರೇಮಠ, ಶಿವಾನಂದ ಸಲಖಾನ್ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನೂ ಬಂಧಿತರಿಂದ ಎರಡು ಕಾರ್, ತಲ್ವಾರ್, ನಾಲ್ಕು ಲಕ್ಷ ಕ್ಯಾಶ್, ಚಾಕು, ಒಂದು ಕಪ್ಪು ಕನ್ನಡ ಜಪ್ತಿ ಮಾಡಿಕೊಂಡಿದ್ದಾರೆ.

ಮಹಿಳೆ ಕೊಂದು ಶವದ ಜೊತೆ ಫೇಸ್‌ಬುಕ್‌ ಲೈವ್‌ ಬಳಿಕ ಆತ್ಮಹತ್ಯೆಗೆ ವ್ಯಕ್ತಿ ಶರಣು

ಸದ್ಯ ಕೇಸ್ ನಲ್ಲಿ ಭಾಗಿಯಾದ ಇನ್ನಷ್ಟು ಆರೋಪಿಗಳ ಪತ್ತೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕಿಡ್ನಾಪ್ ಆಗಿ ಕೊಲೆಯಾದ್ರೂ ಕೂಡ ಆ ಕುಟುಂಬಸ್ಥರು ರೌಡಿಗಳ ಭಯಕ್ಕೆ ಕೇಸ್ ನೀಡದೇ ಸುಮ್ಮನಿದ್ರೇ ಇನ್ನೂ ಅನೇಕರು ಕೇಸ್ ಉಸಾಬರಿ ಯಾಕೆ ಅಂತಾ ಸುಮ್ಮನಿದ್ದಾರೆ. ಆದ್ರೇ ಒಂದು ಜೆಸಿಬಿ ಕಳ್ಳತನದಿಂದಾಗಿ ಆರು ತಿಂಗಳ ಹಿಂದೆ ನಡೆದು ಮುಚ್ಚಿ ಹೋಗಿದ್ದ ಕೇಸ್ ಇದೀಗ ಬಯಲಿಗೆ ಬಂದಿದ್ದು. ಹಣ ಕೊಟ್ಟು ಮನೆಯ ಮಗನನ್ನ ಕಳೆದುಕೊಂಡ ಕುಟುಂಬ ಈಗಲೂ ಭಯದಲ್ಲಿ ಬದುಕುತ್ತಿದ್ದು ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮತ್ತು ಅವರು ಕಳೆದುಕೊಂಡು ಹಣ ವಾಪಾಸ್ ಕೊಡಿಸುವ ಕೆಲಸ ಪೊಲೀಸರು ಮಾಡಲಿ.

Latest Videos
Follow Us:
Download App:
  • android
  • ios