ಬೀಫ್ ಸ್ಟಾಲ್ ವ್ಯಾಪಾರ ನಷ್ಟ, 20,000 ಹಣಕ್ಕೆ ಗಲಾಟೆ, ಕೋಳಿ ಕತ್ತರಿಸುವ ಮಚ್ಚಿನಿಂದ ಬ್ಯುಸಿನೆಸ್ ಪಾರ್ಟನರ್ ಜೀವ ತೆಗೆದ ಪಾತಕಿ!

ಬೆಂಗಳೂರಿನ ಬೇಗೂರಿನಲ್ಲಿ ವ್ಯಾಪಾರ ಪಾಲುದಾರನನ್ನು ಕೇವಲ ₹20,000ಕ್ಕಾಗಿ ಮಾಂಸ ಕತ್ತರಿಸುವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವ್ಯಾಪಾರದಲ್ಲಿ ನಷ್ಟ ಮತ್ತು ಹಣಕಾಸಿನ ವಿವಾದ ಕೊಲೆಗೆ ಕಾರಣ ಎನ್ನಲಾಗಿದೆ.

Begur AA Beef Stall businessman Murder Case Bangalore rav

ಬೆಂಗಳೂರು (ಡಿ.24): ಕೇವಲ 20 ಸಾವಿರ ರೂಪಾಯಿ ಹಣಕ್ಕಾಗಿ ಬ್ಯುಸಿನೆಸ್ ಪಾರ್ಟನರ್ ಸ್ನೇಹಿತನಾಗಿದ್ದವನನ್ನೇ ಮಾಂಸ ಕತ್ತರಿಸುವ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿಹಾಕಿದ ಘಟನೆ ಬೆಂಗಳೂರಿನ ಬೇಗೂರು ಎಎ ಬೀಫ್ ಸ್ಟಾಲ್‌ನಲ್ಲಿ ರಾತ್ರಿ 10.30ರ ಸುಮಾರಿಗೆ ನಡೆದಿದೆ.

ಅಫ್ಸರ್(45),ಹತ್ಯೆಯಾದ ವ್ಯಕ್ತಿ.ಅಕ್ಬರ್(47) ಕೊಲೆ ಆರೋಪಿ. ಬೆಂಗಳೂರಿನ ಶಿವಾಜಿನಗರ ನಿವಾಸಿಯಾಗಿದ್ದ ಅಪ್ಸರ್, ಕೆಲವು ತಿಂಗಳಿಂದ ಅಕ್ಬರ್ ಬಳಿ ಕೆಲಸ ಮಾಡಿದ್ದ. ಇದೇ ಪರಿಚಯ ಸ್ನೇಹದಿಂದ ಇಬ್ಬರು ಬ್ಯುಸಿನೆಸ್‌ ಪಾರ್ಟನರ್ ಆಗಿ ಕಳೆದ 8 ತಿಂಗಳ ಹಿಂದೆಯಷ್ಟೇ ಮಾಂಸದಂಗಡಿ ವ್ಯಾಪಾರ ಶುರುಮಾಡಿದ್ದರು. ಆದ್ರೆ ಅಂಗಡಿಯಲ್ಲಿ ವ್ಯಾಪಾರ ಸರಿಯಾಗಿ ಆಗುತ್ತಿರಲಿಲ್ಲ. ವ್ಯಾಪಾರ ಸರಿಯಾಗಿ ಆಗದಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಯ್ತು. 

ಫೇಸ್ಬುಕ್‌ ಗೆಳತಿಯಿಂದ ವರ್ತೂರು ಪ್ರಕಾಶ್‌ಗೆ ಬಂಧನ ಭೀತಿ; ಕೋಲಾರ ಬಿಜೆಪಿ ನಾಯಕನಿಗೂ ತಲೆಬಿಸಿ!

ಇದರಿಂದ ಪ್ರತ್ಯೇಕ ಅಂಗಡಿ ತೆರೆಯಲು ನಿರ್ಧರಿಸಿದ್ದ ಅಕ್ಬರ್. ಇದೇ ಕಾರಣಕ್ಕೆ ಬಂಡವಾಳದ ಹಣ ನೀಡುವಂಟೆ ಕೇಳಿದ್ದ. ಸುಮಾರು 3 ಲಕ್ಷ ರೂ. ಹಣ ವಾಪಸ್ ನೀಡಿದ್ದ ಅಫ್ಸರ್. ಆದ್ರೆ ಬಾಕಿ 20 ಸಾವಿರ ಹಣಕ್ಕೂ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ನೂಕಾಟ, ತಳ್ಳಾಟ ನಡೆದು ಗಲಾಟೆಯಾಗಿದೆ. ಈ ವೇಳೆ ಕೋಪಗೊಂಡ ಅಕ್ಬರ್ ಮಾಂಸ ಕಡಿಯಲು ಅಂಗಡಿಯಲ್ಲಿಟ್ಟಿದ್ದ ಮಚ್ಚಿನಿಂದಲೇ ಆಫ್ಸರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಮಚ್ಚಿನೇಟಿನಿಂದ ತೀವ್ರ ರಕ್ತಸ್ರಾವವಾಗಿ ಅಂಗಡಿಯಲ್ಲೇ ಮೃತಪಟ್ಟಿರುವ ಅಫ್ಸರ್. ಘಟನೆ ಬಳಿಕ ಸ್ಥಳಕ್ಕೆ ಸ್ಥಳಕ್ಕೆ ಬೇಗೂರು ಪೊಲೀಸರು, ಸೋಕೋ ಟೀಂ  ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಅಕ್ಬರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

Latest Videos
Follow Us:
Download App:
  • android
  • ios