Asianet Suvarna News Asianet Suvarna News

ಕರಗ ಹೊತ್ತಿದ್ದ ಜ್ಞಾನೇಂದ್ರನ ಮೇಲೆ ರಾಸಾಯನಿಕ ಸಿಂಪಡಣೆ: ಕುಕೃತ್ಯ ಎಸಗಿದ ಆರೋಪಿ ಬಂಧನ

ಕರಗ ಹೊರುವುದನ್ನು ತಪ್ಪಿಸುವುಸುದಕ್ಕಾಗಿ ಏ.6ರಂದು ನಡೆದ ಮಹೋತ್ಸವದ ವೇಳೆ ಕರಗ ಹೊತ್ತಿದ್ದ ಜ್ಞಾನೇಂದ್ರನ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿದ್ದ ಆರೋಪಿ ನಾರಾಯಣನ್ನು ಪೊಲೀಸರು ಬಂಧಿಸಿದ್ದಾರೆ.

Begaluru Festival Chemical spray on Jnanendra who was Karaga carrying sat
Author
First Published Apr 13, 2023, 1:01 PM IST | Last Updated Apr 13, 2023, 1:07 PM IST

ಬೆಂಗಳೂರು (ಏ.13): ವಿಶ್ವವಿಖ್ಯಾತ ಐತಿಹಾಸಿಕ ಬೆಂಗಳೂರಿನ ಕರಗ ಮಹೋತ್ಸವದ  ಕರಗ ಹೊರುವುದನ್ನು ತಪ್ಪಿಸುವುಸುದು ಹಾಗೂ ಅರ್ಚಕ ಹುದ್ದೆ ಕಸಿಯುವ ನಿಟ್ಟಿನಲ್ಲಿ ಏ.6ರಂದು ನಡೆದ ಮಹೋತ್ಸವದ ವೇಳೆ ಕರಗ ಹೊತ್ತಿದ್ದ ಜ್ಞಾನೇಂದ್ರನ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿದ್ದ ಆರೋಪಿ ನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ನು ಕರಗ ಮಹೋತ್ಸವವನ್ನು ತಿಗಳ ಸಮುದಾಯದ ಧರ್ಮರಾಯಸ್ವಾಮಿ ಹಾಗೂ ದ್ರೌಪದಿ ದೇವರಿ ಪೂಜಾರಿಗಳೇ ಹೊರುವುದು ಸಂಪ್ರದಾಯವಾಗಿದೆ. ಆದರೆ, ಅದರಲ್ಲಿಯೂ ಕರಗ ಹೊರುವುದನ್ನು ಪಡೆಯುವುದಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ಕೆಸರೆರಚಾಟ ಮಾಡುವುದು ನಡೆಯುತ್ತಲೇ ಬಂದಿದೆ. ಇನ್ನು ಕರಗ ಹೊರುವುದರ ಕುರಿತು ನ್ಯಾಯಾಲಯ ಮೆಟ್ಟಿಲು ಏರಿದ್ದೂ ಇದೆ. ಆದರೆ, ಈಗ ದೇವಸ್ಥಾನ ಆಡಳಿತ ಮಂಡಳಿ ಯಾವುದೇ ಜಗಳ ಆಗದಂತೆ ತಡೆಗಟ್ಟುತ್ತಾ ಬಂದಿದ್ದರೂ, ಈ ವರ್ಷ ಏ.6ರಂದು ನಡೆದಿದ್ದ ವಿಶ್ವವಿಖ್ಯಾತ ಕರಗ ಮಹೋತ್ಸವದ ವೇಳೆ, ಕರಗ ಹೊತ್ತಿದ್ದ ಜ್ಞಾನೇಂದ್ರನ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿ ಕುಕೃತ್ಯ ನಡೆಸಿರುವುದು ಬಯಲಾಗಿದೆ. 

ಬೆಂಗಳೂರು ಕರಗ ಮಹೋತ್ಸವಕ್ಕೆ ಕೆಮಿಕಲ್‌ ಮಿಶ್ರಿತ ಹೂವು ಪೂರೈಕೆ: ಕರಗ ಹೊತ್ತ ಜ್ಞಾನೇಂದ್ರ ದೇಹದಲ್ಲಿ ಸುಟ್ಟ ಗಾಯ

ಪೊಲೀಸರಿಂದ ಆರೋಪಿ ಆದಿನಾರಾಯಣ ಬಂಧನ: ಬೆಂಗಳೂರು ಕರಗ ಹೊತ್ತಿದ್ದ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಮತ್ತು ಖಾರದಪುಡಿ ಎರಚಿದ ಆರೋಪದಡಿ ಆದಿನಾರಾಯಣ ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಏ.6ರಂದು ಕರಗ ಹೊತ್ತಿದ್ದಾಗ ಹೂವಿನೊಂದಿಗೆ ಖಾರದ ಪುಡಿ ಮತ್ತು ರಾಸಾಯನಿಕ ವಸ್ತು ಬೆರೆಸಿದ ವಸ್ತುವನ್ನು ಆದಿನಾರಾಯಣ ನನ್ನ ಮೇಲೆ ಎರಚಿ ಕೊಲೆಗೆ ಯತ್ನಿಸಿದ್ದ. ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಸಾಯನಿಕ ದ್ರವ್ಯ ಎಸೆದ ಪರಿಣಾಮ ನನ್ನ ಕುತ್ತಿಗೆ ಮತ್ತು ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ ಎಂದು ದೂರಿನಲ್ಲಿ ಜ್ಞಾನೇಂದ್ರ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಜಯನಗರದ ಆರೋಪಿ ಆದಿನಾರಾಯಣ ಎಂಬಾತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Begaluru Festival Chemical spray on Jnanendra who was Karaga carrying sat

ಹೂವು- ಕಲ್ಲುಪ್ಪು ಎರಚುವುದು ಸಾಮಾನ್ಯ: ಇನ್ನು ಬೆಂಗಳೂರಿನ ಕರಗ ಉತ್ಸವದ ವೇಳೆ ಕರಗವನ್ನು ಹೊತ್ತಿರುವ ವ್ಯಕ್ತಿಯ ಮೇಲೆ ಭಕ್ತಿ ಪೂರ್ವಕವಾಗಿ ಹೂವು, ಮೆಣಸಿನಕಾಳು, ಕಲ್ಲುಪ್ಪು ಸೇರಿ ವಿವಿಧ ಪದಾರ್ಥಗಳನ್ನು ಭಕ್ತರು ಎರಚುತ್ತಾರೆ. ಇದನ್ನೇ ದುರುಪಯೋಗ ಮಾಡಿಕೊಂಡ ವೀರಕುಮಾರ ಆದಿನಾರಾಯಣ, ಕರಗ ಹೊತ್ತಿದ್ದ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಮತ್ತು ಖಾರದ ಪುಡಿ ಎರಚಿದ್ದಾರೆ. ಈ ಬಗ್ಗೆ ಜ್ಞಾನೇಂದ್ರನಿಗೆ ಈ ಬಗ್ಗೆ ಮಾಹಿತಿ ತಿಳಿದಿದ್ದರಿಂದ ಕೂಡಲೇ ಇತರೆ ವೀರಕುಮಾರರು ಮಹಿಳೆಯೊಬ್ಬರ ಕೃತ್ಯವೆಂದು ಹಲ್ಲೆ ನಡೆಸಲು ಯತ್ನಿಸಿದ್ದರು. ಆದರೆ, ಈ ತಪ್ಪನ್ನು ನಾನು ಮಾಡಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಸುತ್ತಲೂ ನೋಡಿದಾಗ ಆದಿನಾರಾಯಣ ಹಿಂದೆ ಸರಿಯುವುದನ್ನು ಗಮನಿಸಿ ಹಿಡಿದು ಥಳಿಸಿದ್ದಾರೆ. ಜೊತೆಗೆ ಜ್ಞಾನೇಂದ್ರನ ಮೇಲೆ ಎರಚಿದ್ದ ರಾಸಾಯನಿಕವನ್ನು ಬಟ್ಟೆಯಿಂದ ಒರೆಸಿ ಕರಗ ಸಾಗಲು ಅನುವು ಮಾಡಿಕೊಟ್ಟಿದ್ದರು. ಈ ಎಲ್ಲ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ ವೈರಲ್‌ ಆಗುತ್ತಿದೆ.

ಬೆಂಗಳೂರು: ಕರಗ ಹೊರುವ ಜ್ಞಾನೇಂದ್ರ ಹತ್ಯಗೆ ಯತ್ನ ಅನುಮಾನ..!

ಅರ್ಚಕ ವೃತ್ತಿ ಕಸಿದುಕೊಳ್ಳಲು ಹುನ್ನಾರ: ಇನ್ನು ಕರಗ ಹೊತ್ತಿದ್ದ ಜ್ಞಾನೇಂದ್ರನ ಮೇಲೆ ಸೈನೆಡ್ ಪೆಟಲ್ಸ್ ಎಂಬ ರಾಸಾಯನಿಕವನ್ನು ಎರಚಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನು ಬೆಳ್ಳಿ ಆಭರಣಗಳನ್ನು ಕರಗಿಸಲು ಬಳಸಲಾಗುತ್ತದೆ. ಈ ರಾಸಾಯನಿಕದಿಂದ ಕರಗ ಹೊತ್ತ ಜ್ಞಾನೇಂದ್ರನ ಮೈ ಸುಟ್ಟರೆ ಕರಗ ಹೊರುವುದನ್ನು ನಿಲ್ಲಿಸಿದಾಗ, ಅರ್ಚಕ ವೃತ್ತಿಯಿಂದ ಹೊರದೂಡುವುದು ಈತನ ಉದ್ದೇಶವಾಗಿತ್ತು. ಇದಕ್ಕಾಗಿ ಹಲವು ದಿನಗಳ ಹಿಂದಯೇ ಆರೋಪಿ ಯೋಜನೆ ರೂಪಿಸಿ ರಾಸಾಯನಿಕವನ್ನು ಸಂಗ್ರಹಿಸಿ ಇಟ್ಟುಕೊಂಡು ಕೃತ್ಯ ಎಸಗಿದ್ದಾನೆ. ಹಲಸೂರು ಗೇಟ್ ಪೊಲೀಸರು ಈ ಪ್ರಕರಣದ ಹಿಂದೆ ಬೇರೆ ಯಾರಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ.

Latest Videos
Follow Us:
Download App:
  • android
  • ios