* ಕೊರೊನಾ ನಡುವೆಯೂ ಸೈಬರ್ ಖದೀಮರ ಕಳ್ಳಾಟ ಬಟಾಬಯಲು* ರೆಮಿಡಿಸಿವಿಯರ್ ಇಂಜೆಕ್ಷನ್ ಕೊರತೆಯನ್ನೇ ತಮ್ಮ ಬಂಡವಾಳ ಮಾಡಿಕೊಂಡರು*  ರೆಮಿಡಿಸಿವಿಯರ್ ಅವಶ್ಯಕತೆ ಇರುವವರ ನಂಬರ್ ಗಳಿಗೆ ಇಂಜೆಕ್ಷನ್ ಇರುವುದಾಗಿ ಮೇಸೆಜ್* ಇದನ್ನೇ ನಂಬಿ ಹಣ ವರ್ಗಾವಣೆ ಮಾಡಿದವರಿಗೆ ವಂಚನೆ

ಬೆಂಗಳೂರು(ಮೇ 16) ಕೊರೊನಾ ನಡುವೆಯೂ ಸೈಬರ್ ಖದೀಮರು ಕಳ್ಳಾಟ ಮುಂದುವರಿಸಿದ್ದಾರೆ. ರೆಮಿಡಿಸಿವಿಯರ್ ಇಂಜೆಕ್ಷನ್ ಕೊರತೆಯನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.

ವಾಟ್ಸ್ ಅಪ್ ಮೂಲಕ ರೆಮಿಡಿಸಿವಿಯರ್ ಅವಶ್ಯಕತೆ ಇರುವವರ ನಂಬರ್ ಗಳಿಗೆ ಇಂಜೆಕ್ಷನ್ ಇರುವುದಾಗಿ ಮೇಸೆಜ್ ಕಳಿಸುತ್ತಾರೆ. ಅಡ್ವಾನ್ಸ್ ಹಣ ನೀಡಿದ್ರೆ ಇಂಜೆಕ್ಷನ್ ಕೊಡುವುದಾಗಿ ಮೇಸೆಜ್ ಮಾಡಿ ನಂತರ ಹಣ ಪಡೆದುಕೊಂಡು ವಂಚನೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರೆಮಿಡಿಸಿವಿಯರ್ ದಂಧೆಯಲ್ಲಿ ಸಿಕ್ಕಿಬಿದ್ದ ಶಾಸಕರ ಸಂಬಂಧಿ

ಹಣ ಹಾಕಿ ವಂಚನೆಗೊಳಗಾದರು ಬೆಂಗಳೂರು ನಗರ ಪೊಲೀಸರಿಗೆ‌ ದೂರು ನೀಡಿದ್ದಾರೆ. ಸೈಬರ್ ಖದೀಮರ ಬಲೆಗೆ ಬಿದ್ದು ಹಣ ಕಳೆದುಕೊಂಡವರು ದೂರು ನೀಡಿದ್ದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಇಂಥ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. 

Scroll to load tweet…