Bengaluru Crime News: ಜುಲೈ 9 ರಂದು ದ್ವಿಚಕ್ರ ವಾಹನದಲ್ಲಿ ಪತ್ನಿ ವಿಜಕಲಾ ಜೊತೆ ಪತಿ ಯೋಗೇಂದ್ರ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು

ಬೆಂಗಳೂರು (ಜು. 14): ಬೆಂಗಳೂರಿನಲ್ಲಿ ಬಿಬಿಎಂಪಿ (BBMP) ಟಿಪ್ಪರ್ ಲಾರಿಗೆ ದಂಪತಿ ಬಲಿಯಾಗಿದ್ದಾರೆ. ಜುಲೈ 9 ರಂದು ದ್ವಿಚಕ್ರ ವಾಹನದಲ್ಲಿ ಪತ್ನಿ ವಿಜಕಲಾ ಜೊತೆ ಪತಿ ಯೋಗೇಂದ್ರ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಬೈಕ್ ಹಿಂಬದಿ ಕುಳಿತಿದ್ದ ವಿಜಯಕಲಾಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜುಲೈ 9ರಂದ ಮಧ್ಯಾಹ್ನ‌12.30ರ ಸುಮಾರಿಗೆ ಮಹಿಳೆ ಸಾವನಪ್ಪಿದ್ದರು. 

ಬೈಕ್ ಸವಾರ ಯೋಗೆಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಯೋಗೇಂದ್ರ ಸಾವನ್ನಪಿದ್ದಾರೆ. ನಾಗರಭಾವಿ ರಸ್ತೆಯಲಿ (Nagarabavi) ದ್ವಿಚಕ್ರ ವಾಹನದಲ್ಲಿ ಪತ್ನಿ ವಿಜಕಲಾ ಜೊತೆ ಪತಿ ಯೋಗೇಂದ್ರ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬೈಕ್‌ಗೆ ಬಿಬಿಎಂಪಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದತ್ತು. 

ಬಿಬಿಎಂಪಿ ಕಸದ ಲಾರಿಗೆ ಫುಡ್‌ ಡೆಲಿವರಿ ಬಾಯ್‌ ಬಲಿ: ಇನ್ನು ಇತ್ತೀಚೆಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗವಾರ-ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆದಿತ್ತು. ಕೊತ್ತನೂರು ನಿವಾಸಿ ದೇವಣ್ಣ (25) ಮೃತ ಸವಾರ. ಗ್ರಾಹಕರಿಗೆ ಫುಡ್‌ ಡೆಲಿವರಿ(Food Delivery) ನೀಡಲು ದ್ವಿಚಕ್ರ ವಾಹನದಲ್ಲಿ ಸಂಜೆ 4.30ರ ಸುಮಾರಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿತ್ತು. 

ಇದನ್ನೂ ಓದಿ:ಬೊಲೆರೊ ವಾಹನ ಡಿಕ್ಕಿ: ಬೈಕ್ ಮೇಲೆ ತೆರಳುತ್ತಿದ್ದ ಸರ್ಕಾರಿ ನೌಕರರಿಬ್ಬರ ಸಾವು!

ದಾವಣಗೆರೆ ಮೂಲದ ದಿನೇಶ್‌ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಫುಡ್‌ ಡೆಲಿವರಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು. ಶನಿವಾರ ಸಂಜೆ ಫುಡ್‌ ಡೆಲಿವರಿ ನೀಡಲು ಹೋಗುವಾಗ ಹಿಂದಿನಿಂದ ವೇಗವಾಗಿ ಬಂದಿರುವ ಬಿಬಿಎಂಪಿ ಕಸದ ಲಾರಿ, ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ದಿನೇಶ್‌ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಕಸದ ಲಾರಿ ಚಕ್ರ ತಲೆಯ ಮೇಲೆಯೇ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ಕೆಲವು ತಿಂಗಳುಗಳಲ್ಲಿ ಬಿಬಿಎಂಪಿ ಕಸದ ಲಾರಿಗೆ ಹಲವು ಜೀವಗಳು ಬಲಿಯಾಗಿವೆ. 

  • ಏ.18ರಂದು ನಾಯಂಡಹಳ್ಳಿ ರಿಂಗ್‌ ರಸ್ತೆಯಲ್ಲಿ ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಎಸ್‌ಬಿಐ ಬ್ಯಾಂಕ್‌ ಅಧಿಕಾರಿ ಪದ್ಮಿನಿ(40) ಸ್ಥಳದಲ್ಲೇ ಮೃತಪಟ್ಟಿದ್ದರು.
  • ಮಾ.31ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಯಲಹಂಕ ನಿವಾಸಿ ರಾಮಯ್ಯ(60) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.
  • ಮಾ.21ರಂದು ಹೆಬ್ಬಾಳ ಬಳಿ ರಸ್ತೆ ದಾಟುವಾಗ 15 ವರ್ಷದ ಅಕ್ಷಯಾಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಸೊಂಟದ ಮೇಲೆ ಲಾರಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.