*  25 ಲಕ್ಷ ಸರ್ಕಾರಿ ಹಣ ಸ್ವಂತಕ್ಕೆ ಬಳಕೆ: ಸಹಾಯಕ ಆಯುಕ್ತ ಸೆರೆ*  ಕರಗ ಮಹೋತ್ಸವದ ಲೆಕ್ಕ ಪರಿಶೋಧನೆ ವೇಳೆ ಅಕ್ರಮ ಬೆಳಕಿಗೆ*  ದತ್ತಿ ಇಲಾಖೆ ತಹಸೀಲ್ದಾರ್‌ರಿಂದ ನೋಟಿಸ್‌ ಜಾರಿ 

ಬೆಂಗಳೂರು(ಏ.14):  ಬಿಬಿಎಂಪಿ(BBMP) ವ್ಯಾಪ್ತಿಯ ಮುಜರಾಯಿ ದೇವಾಲಯಗಳಿಗೆ ಸೇರಿದ 25.50 ಲಕ್ಷ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಧಾರ್ಮಿಕ ದತ್ತಿ ಇಲಾಖೆಯ ಬೆಂಗಳೂರು ವಲಯದ ಸಹಾಯಕ ಆಯುಕ್ತ ಕೆ.ವಿ.ವೆಂಕಟರಮಣ ಗುರುಪ್ರಸಾದ್‌ ಅವರನ್ನು ವಿಧಾನಸೌಧ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕಳೆದ ವರ್ಷದ ಬೆಂಗಳೂರು ಕರಗ ಮಹೋತ್ಸವದ ಲೆಕ್ಕ ಪರಿಶೋಧನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದ್ದು, ಬೆಂಗಳೂರು ನಗರ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ತಹಸೀಲ್ದಾರ್‌ ಎಸ್‌.ಆರ್‌.ಅರವಿಂದ ಬಾಬು ನೀಡಿದ ದೂರಿನ ಮೇರೆಗೆ ಬುಧವಾರ ಆರೋಪಿ(Accused) ಬಂಧನವಾಗಿದೆ(Arrest) ಎಂದು ಅಧಿಕಾರಿಗಳು ಹೇಳಿದ್ದಾರೆ.

Chitradurga: ಹೆಂಡತಿ ಶೀಲವನ್ನೇ ಶಂಕಿಸಿ ಬರ್ಬರವಾಗಿ ಕೊಚ್ಚಿ ಹತ್ಯೆಗೈದ ಗಂಡ

ಧಾರ್ಮಿಕ ದತ್ತಿ ಇಲಾಖೆಯ ಬೆಂಗಳೂರು ವಲಯ ಎಸಿ ಆಗಿದ್ದ ವೆಂಕರಮಣ ಅವರು, ಬಿಬಿಎಂಪಿ ವ್ಯಾಪ್ತಿಯ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಆಡಳಿತ ಉಸ್ತುವಾರಿ ನಿರ್ವಹಿಸುತ್ತಿದ್ದರು. ಇಲಾಖೆಯ ಕೆ.ಜಿ. ರಸ್ತೆಯ ಕರ್ನಾಟಕ ಬ್ಯಾಂಕ್‌ನಲ್ಲಿರುವ ಉಳಿತಾಯ ಖಾತೆಯಲ್ಲಿದ್ದ .25.5 ಲಕ್ಷವನ್ನು ಡ್ರಾ ಮಾಡಿದ ವೆಂಕರಮಣ, ಸರ್ಕಾರದ ಲೆಕ್ಕ ತೋರಿಸಿ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ವಿಚಾರ ಇಲಾಖೆಯ ಲೆಕ್ಕ ಪರಿಶೋಧನೆ ವೇಳೆ ಮಾಹಿತಿ ಗೊತ್ತಾಗಿ ತಹಸೀಲ್ದಾರ್‌, ಉಳಿತಾಯ ಖಾತೆಯಲ್ಲಿದ್ದ ಹಣ ಖರ್ಚಿನ ಬಗ್ಗೆ ವಿವರಣೆ ನೀಡುವಂತೆ ಆರೋಪಿಗೆ ನೋಟಿಸ್‌ ಜಾರಿಗೊಳಿಸಿದ್ದರು.

Bengaluru Crime: ಗೂಗಲ್‌ ನೋಡಿ ಡ್ರಗ್ಸ್‌ ದಂಧೆ ಶುರು ಮಾಡಿದ ಸೆಕ್ಯೂರಿಟಿ

ಆಗ ವೆಂಕಟರಮಣ 2021ರ ಏ.19ರಿಂದ 29 ರವರೆಗೆ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ(Temple) ಕರಗ ಶಕ್ತೋ್ಯತ್ಸವ ಕಾರ್ಯಕ್ರಮಕ್ಕೆ .15.97 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಉತ್ತರಿಸಿದ್ದರು. ಆದರೆ ಇನ್ನುಳಿದ .9.53 ಲಕ್ಷ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. ಅಲ್ಲದೆ ಕಚೇರಿ ನಿರ್ವಾಹಕಿ ಎಸ್‌.ಭವ್ಯಾ ಅವರಿಂದ 10 ಗ್ರಾಂ ಚಿನ್ನದ ನಾಣ್ಯ ಮತ್ತು ಮುರಿದ ಚಿನ್ನದ ತುಂಡನ್ನು ಸಹ ವೆಂಕರಮಣ ಪಡೆದಿದ್ದರು. ಇದಕ್ಕೂ ಅವರು ಯಾವುದೇ ಕಾರಣ ತಿಳಿಸದೆ ಗೌಪ್ಯವಾಗಿರಿಸಿದ್ದರು. ಕೊನೆಗೆ ಹಣ ದುರ್ಬಳಕೆ ಆರೋಪದ ಮೇರೆಗೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ವೆಂಕರಮಣ ವಿರುದ್ಧ ವಿಧಾನಸೌಧ ಠಾಣೆಗೆ ಧಾರ್ಮಿಕ ದತ್ತಿ ಇಲಾಖೆ ತಹಸೀಲ್ದಾರ್‌ ದೂರು ನೀಡಿದ್ದರು. ಅಂತೆಯೇ ಆರೋಪ ಬಂಧನವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.