ಹಾಸನ(ಆ. 12) ಪೊಲೀಸ್ ಸಿಬ್ಬಂದಿಯೊಬ್ಬರು ಚನ್ನರಾಯಪಟ್ಟಣದಲ್ಲಿ  ಆತ್ಮಹತ್ಯೆಗೆ ಶರಣಾಗಿದ್ದಾರೆ.  ಚನ್ನರಾಯಪಟ್ಟಣದ  ಖಾಸಗಿ ಲಾಡ್ಜ್ ನಲ್ಲಿ ಘಟನೆ ನಡೆದಿದೆ.

ಬಂಟ್ವಾಳ ತಾಲೂಕು ಮಂಕಡೆ ಗ್ರಾಮದ ಲೋಕೇಶ್ ಆಚಾರ್ಯ (36) ಆತ್ಮಹತ್ಯೆ ಮಾಡಿಕೊಂಡಿರುವ ಕಾನ್ ಸ್ಟೇಬಲ್.

ಸುಶಾಂತ್ ಸಾವಿಗೆ ಬಹುಮುಖ್ಯ ಟ್ವಿಸ್ಟ್ ಕೊಟ್ಟ ದಾಖಲೆ

ಮಂಗಳೂರು ಲೋಕಾಯುಕ್ತ ಇನ್ಸ್ ಪೆಕ್ಟರ್ ಕಾರು ಚಾಲಕರಾಗಿ ಲೋಕೇಶ್ ಕೆಲಸ ಮಾಡುತ್ತಿದ್ದರು.  ಕಳೆದ 6 ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದಿದ್ದವರು  ಮದ್ಯದ ಜೊತೆ ಇಲಿ ಪಾಷಾಣ ಕುಡಿದು ನಂತರ ನೇಣಿಗೆ ಶರಣಾಗಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.