ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಬಾಯಿಗೆ ಬಟ್ಟೆತುರುಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಬಳಿಕ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಫೆ.11) : ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಬಾಯಿಗೆ ಬಟ್ಟೆತುರುಕಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಬಳಿಕ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಗದೂರು ನಿವಾಸಿ ಸ್ವಪನ್‌ ಬರ್ಮನ್‌(Swapan Burman)(47) ಬಂಧಿತ. ಈತ 9 ವರ್ಷದಿಂದ ಸಹ ಜೀವನದಲ್ಲಿದ್ದ (ಲಿವಿಂಗ್‌ ಟೂಗೆದರ್‌) ಮುಕ್ತಾ ಬರ್ಮನ್‌(Mukta barman)(33) ಎಂಬಾಕೆಯನ್ನು ಫೆ.8ರಂದು ಕೊಲೆ ಮಾಡಿ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಬಿಂಬಿಸಲು ಯತ್ನಿಸಿದ್ದ. ಮೃತದೇಹದ ಕುತ್ತಿಗೆ ಬಳಿ ಗಾಯದ ಗುರುತ್ತು ಪತ್ತೆಯಾದ ಹಿನ್ನೆಲೆಯಲ್ಲಿ ಅನುಮಾನಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ramanagara: ಬ್ಯಾಂಕ್‌ ನೋಟಿಸ್‌ಗೆ ಹೆದರಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಪ್ರಕರಣ ವಿವರ:

ಇಬ್ಬರು ಪಶ್ಚಿಮ ಬಂಗಾಳ(west bengali) ಮೂಲದವರಾಗಿದ್ದಾರೆ. ಮುಕ್ತ ಬರ್ಮನ್‌ ಅವರ ಪತಿ ಬೋದಲ್‌ 15 ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಬಳಿಕ ಮುಕ್ತಾ ಬರ್ಮನ್‌ಗೆ ಆರೋಪಿ ಸ್ವಪನ್‌ ಬರ್ಮನ್‌ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ವಿವಾಹಿತ ಸ್ವಪನ್‌ ಮಡದಿ-ಮಕ್ಕಳನ್ನು ಪಶ್ಚಿಮ ಬಂಗಾಳದಲ್ಲೇ ಬಿಟ್ಟು 9 ವರ್ಷದ ಹಿಂದೆ ಮುಕ್ತ ಬರ್ಮನ್‌ ಜತೆಗೆ ಬೆಂಗಳೂರಿಗೆ ಬಂದು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಆರೋಪಿ ಸ್ವಪನ್‌ ಬರ್ಮನ್‌ ಪ್ಲಂಬರ್‌ ಕೆಲಸ ಮಾಡಿದರೆ, ಮುಕ್ತ ಬರ್ಮನ್‌ ಅಪಾರ್ಚ್‌ಮೆಂಟ್‌ಗಳಲ್ಲಿ ಮನೆಗೆಲಸ ಮಾಡುತ್ತಿದ್ದಳು.

ಈ ನಡುವೆ ಮುಕ್ತ ಬರ್ಮನ್‌ಗೆ ಸಕ್ಕರೆ ಕಾಯಿಲೆ ಶುರುವಾಗಿ ಆಗಾಗ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಆಗ ಆರೋಪಿ ಸ್ವಪನ್‌ ಬರ್ಮನ್‌ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದ. ಇತ್ತೀಚೆಗೆ ಮುಕ್ತ ಬರ್ಮನ್‌ ಅನಾರೋಗ್ಯ ಹೆಚ್ಚಾಗಿ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ಹೀಗಾಗಿ ಆರೋಪಿ ಸ್ವಪನ್‌ ಬರ್ಮನ್‌ ಫೆ.7ರಂದು ಮುಕ್ತ ಬರ್ಮನ್‌ಳನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ವೈದ್ಯರು ರಕ್ತ ಪರೀಕ್ಷೆ ಮಾಡಿಸಿ ಫೆ.16ರಂದು ಎಂಆರ್‌ಐ ಸ್ಕಾ್ಯನಿಂಗ್‌ಗೆ ಬರುವಂತೆ ಸೂಚಿಸಿದ್ದರು. ಬಳಿಕ ಮುಕ್ತಾ ಬರ್ಮನ್‌ಳನ್ನು ಮನೆಗೆ ಕರೆದುಕೊಂಡು ಬಂದಿದ್ದ.

ಆಕೆ ಬದುಕ್ಕಲ್ಲ ಎಂದು ನಾಟಕ

ಮುಕ್ತಾ ಬರ್ಮನ್‌ ಮತ್ತು ಸ್ವಪನ್‌ ಬರ್ಮನ್‌ಗೆ ಹಗದೂರಿನಲ್ಲೇ ನೆಲೆಸಿರುವ ಪಶ್ಚಿಮ ಬಂಗಾಳ ಮೂಲದ ಶಿಭಾನಿ ಮಂಡಲ್‌ ಕುಟುಂಬಕ್ಕೆ ಪರಿಚಯವಿತ್ತು. ಫೆ.8ರಂದು ಬೆಳಗ್ಗೆ ಶಿಭಾನಿ ಮಂಡಲ್‌ ಮನೆಗೆ ಬಂದಿರುವ ಆರೋಪಿ ಸ್ವಪನ್‌ ಬರ್ಮನ್‌, ಮುಕ್ತಾ ಬರ್ಮನ್‌ ಆರೋಗ್ಯ ತುಂಬಾ ಹದಗೆಟ್ಟಿದೆ. ಆಕೆ ಬದುಕುವುದಿಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ಶಿಭಾನಿ ಮಂಡಲ್‌ ಹೇಳಿದ್ದಾರೆ. ಅಂದೇ ಸಂಜೆ ಶಿಭಾನಿ ಮುಕ್ತಾ ಬರ್ಮನ್‌ ಅವರ ಮನೆಗೆ ತೆರಳಿದಾಗ, ಆರೋಪಿ ಸ್ವಪನ್‌ ಬರ್ಮನ್‌ ಅಳುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಚಿಕಿತ್ಸೆ ಫಲಿಸದೆ ಮುಕ್ತ ಬರ್ಮನ್‌ ಮೃತಪಟ್ಟಳು. ಮೃತದೇಹವನ್ನು ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವುದಾಗಿ ಹೇಳಿದ್ದಾನೆ.

Bengaluru: ಪೊಲೀಸರ ಕಿರುಕುಳ ಆರೋಪ: ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಯತ್ನ

ಕುತ್ತಿಗೆ ಬಳಿಯ ಗಾಯ ನೀಡಿದ ಕೊಲೆ ಸುಳಿವು

ಫೆ.9ರಂದು ಶಿಭಾನಿ ಮಂಡಲ್‌ ಹಾಗೂ ಆಕೆಯ ಪತಿ ಸೌರವ್‌ ಘೋಷ್‌ ಖಾಸಗಿ ಆಸ್ಪತ್ರೆ ಬಳಿ ಬಂದಿದ್ದಾರೆ. ಈ ವೇಳೆ ಆರೋಪಿ ಮುಕ್ತಾ ಬರ್ಮನ್‌ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾನೆ. ಈ ವೇಳೆ ಶಿಭಾನಿ ಮಂಡಲ್‌ ದಂಪತಿ ಶವಾಗಾರಕ್ಕೆ ತೆರಳಿ ಮುಕ್ತಾ ಬರ್ಮನ್‌ ಅವರ ಮೃತದೇಹವನ್ನು ನೋಡಿದಾಗ, ಮೃತದೇಹದ ಕುತ್ತಿಗೆ ಬಳಿ ಗಾಯವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಸ್ವಪನ್‌ ಬರ್ಮನ್‌ನನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿಲ್ಲ. ಅನುಮಾನಗೊಂಡು ಶಿಭಾನಿ ಮಂಡಲ್‌ ಆರೋಪಿಯ ಬಗ್ಗೆ ವೈಟ್‌ಫೀಲ್ಡ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ವಪನ್‌ ಬರ್ಮನ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮುಕ್ತ್ತಾ ಬರ್ಮನ್‌ಳನ್ನು ಆರೈಕೆ ಮಾಡಲಾಗದೆ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.