ಬಳ್ಳಾರಿ: ಹುಟ್ಟು ಹಬ್ಬದಂದು ತಲವಾರು ಝಳಪಿಸಿ ಮಾಜಿ ಮೇಯರ್ ಮಗನ ಹುಚ್ಚಾಟ! ಬರ್ತಡೇ ದಿನವೇ ಜೈಲುಪಾಲು

ಮಾಜಿ ಮೇಯರ್ ಮಗನ ಹುಟ್ಟುಹಬ್ಬದಂದು ರಸ್ತೆ ಮೇಲೆಯೇ ಡಿಜೆ ಹಾಕಿಕೊಂಡು ತಲವಾರ್ ಝಳಪಿಸಿ ಹುಚ್ಚಾಟ ಮೆರೆದ ಘಟನೆ ಬಳ್ಳಾರಿ ಜಿಲ್ಲೆಯ ಹುಸೇನ್ ನಗರದಲ್ಲಿ ನಡೆದಿದೆ.

Ballari former Mayors son rowdyism on his birthday gandhinagar police arrested him rav

ಬಳ್ಳಾರಿ (ಮಾ.5): ಮಾಜಿ ಮೇಯರ್ ಮಗನ ಹುಟ್ಟುಹಬ್ಬದಂದು ರಸ್ತೆ ಮೇಲೆಯೇ ಡಿಜೆ ಹಾಕಿಕೊಂಡು ತಲವಾರ್ ಝಳಪಿಸಿ ಹುಚ್ಚಾಟ ಮೆರೆದ ಘಟನೆ ಬಳ್ಳಾರಿ ಜಿಲ್ಲೆಯ ಹುಸೇನ್ ನಗರದಲ್ಲಿ ನಡೆದಿದೆ.

ಮಾಜಿ ಮೇಯರ್ ನಾಗಮ್ಮ ಎಂಬುವವರ ಮಗ ರಘು ಹುಟ್ಟು ಹಬ್ಬದ ಆಚರಣೆ ವೇಳೆ ರೌಡಿಸಂ ಯಾವುದೇ ಅನುಮತಿ ಇಲ್ಲದೆ ರಸ್ತೆ ಮೇಲೆಯೇ ಡಿಜೆ ಹಾಕಿಕೊಂಡು ತಲವಾರು ಹಿಡಿದು ಕುಣಿದಾಡಿರುವ ರಘು, ಸಹಚರರು. ದಾರಿಗೆ ಅಡ್ಡಲಾಗಿದ್ದಾರೆಂಬ ವಿಚಾರಕ್ಕೆ ಪ್ರಶ್ನಿಸಿದ್ದ ತಿಪ್ಪೇಸ್ವಾಮಿ. ಮಾತಿಗೆ ಮಾತು ಬೆಳೆದು ರಘು ಸಹಚರರು ತಿಪ್ಪೇಸ್ವಾಮಿ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಡಿಗೆ ಮತ್ತಿತರರ ಆಯುಧಗಳಿಂದ ಹಲ್ಲೆ ನಡೆಸಿರುವ ಪುಂಡರು. ತಿಪ್ಪೇಸ್ವಾಮಿ ಜೊತೆಗಿರುವ ಗಿರೀಶ್ ಎಂಬಾತನಿಗೂ ಥಳಿಸಿರುವ ಪುಂಡರು. 

ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ; ರಸ್ತೆಗೆ ಅಡ್ಡಾದಿಡ್ಡಿ ನಿಂತ ವಾಹನಗಳ ತೆರವು

ಪುಂಡರ ದಾಳಿಯಿಂದಾಗಿ ತಲೆ ಮತ್ತು ಇತರೆ ಭಾಗಗಳಿಗೆ ಗಾಯಗೊಂಡು ತಿಪ್ಪೇಸ್ವಾಮಿ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ರಘು ಮತ್ತವನ ಸಹಚರರು ಸೇರಿ ಹತ್ತು ಜನರ ವಿರುದ್ಧ ದೂರು ದಾಖಲಾಗಿದ್ದು, ರಘು ಸೇರಿ ಏಳು ಜನರನ್ನು ಬಂಧಿಸಿದ ಪೊಲೀಸರು.

ಆಂಧ್ರಾದಲ್ಲಿ ಅಪಘಾತ ಬಳ್ಳಾರಿಯ ಐವರು ದುರ್ಮರಣ!

ಬಳ್ಳಾರಿ: ಆಂಧ್ರಪ್ರದೇಶದ ಮೆಹಬೂಬ್‌ ನಗರ ಜಿಲ್ಲೆಯ ಕೊತಕೋಟ ಬೈಪಾಸ್‌ನ ತೆಕ್ಕಲಯ್ಯ ದರ್ಗಾ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇವಿನಗರದ ಬಸವನಕುಂಟೆ ಪ್ರದೇಶದ ಐದು ಜನರು ಸಾವಿಗೀಡಾಗಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ವಾಸಿಂ (8 ತಿಂಗಳು), ಬುಸ್ರಾ (2), ಮಾರಿಯಾ (13), ಫಾತಿಮಾ (77) ಹಾಗೂ ಅಬ್ದುಲ್ ರಹಮಾನ್ (30) ಎಂದು ಗುರುತಿಸಲಾಗಿದೆ.ದೇವಿನಗರದ ಬಸವನ ಕುಂಟೆ ನಿವಾಸಿಗಳಾದ ಅಬ್ದುಲ್ ರೆಹಮಾನ್ ಅವರ ಕುಟುಂಬ ಸದಸ್ಯರ ಬಳ್ಳಾರಿಯಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮತ್ತೊಬ್ಬರು ಮೃತಪಟ್ಟಿದ್ದಾರೆ.

Ballari former Mayors son rowdyism on his birthday gandhinagar police arrested him rav

ಮಗುವಿನ ಮೇಲೆ ಕಾರು ಹತ್ತಿಸಿದ, ಕೈ ಮುಗಿದು ಬೇಡಿಕೊಂಡರು ಆಸ್ಪತ್ರೆ ಸೇರಿಸಲು ನಿರಾಕರಿಸಿದ : ಮಗು ಸಾವು

ಗಂಭೀರವಾಗಿ ಗಾಯಗೊಂಡಿರುವವರನ್ನು ಮೆಹಬೂಬ್ ನಗರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಾದ ಶಫಿ, ಅಸ್ಸಾನ್, ಖಾದೀರ್, ಅಲಿ, ಅಬೀಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಸ್ಥಿತಿ ಗಂಭೀರವಾಗಿ ಎಂದು ತಿಳಿದುಬಂದಿದೆ.ಖಾದೀರ್ ಎಂಬಾತನಿಗೆ ಹೈದ್ರಾಬಾದ್‌ನಲ್ಲಿ ಮದುವೆ ನಿಶ್ಚಯವಾಗಿದ್ದು, ರೆಹಮಾನ್ ಅವರ ಕುಟುಂಬದ ಸಂಬಂಧಿಕರು ಹಾಗೂ ಸ್ನೇಹಿತರು ಮದುವೆ ದಿನ ನಿಗದಿಗೊಳಿಸಲು ತೆರಳುತ್ತಿದ್ದರು. ಅತಿಯಾದ ವೇಗದಿಂದಾಗಿ ಕಾರು ನಿಯಂತ್ರಣ ತಪ್ಪಿದ್ದು, ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾಗಿದ್ದಾರೆ.

Latest Videos
Follow Us:
Download App:
  • android
  • ios