ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ; ರಸ್ತೆಗೆ ಅಡ್ಡಾದಿಡ್ಡಿ ನಿಂತ ವಾಹನಗಳ ತೆರವು

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅವೈಜ್ಞಾನಿಕ ಪಾರ್ಕಿಂಗ್, ಸರ್ಕಾರಿ ಕಚೇರಿಗಳ ವಾಹನ ಎಲ್ಲೆಂದರಲ್ಲೆ ಪಾರ್ಕಿಂಗ್ ನಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಳ ಕುರಿತು ಸುವರ್ಣ ನ್ಯೂಸ್ ವರದಿಗೆ ಎಚ್ಚೆತ್ತ ಜಿಲ್ಲಾಡಳಿತ ವಾಹನಗಳು ತೆರವುಗೊಳಿಸಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿದ ಸಿಬ್ಬಂದಿ

Suvarna News big Impact Dharwad district administration responded to the report rav

ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

 ಧಾರವಾಡ (ಮಾ.5) : ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸರ್ಕಾರಿ ಅಧಿಕಾರಿಗಳು ತಮ್ಮ ವಾಹನಗಳು ಎಲ್ಲೆಂದರೆ ಮಾಡುವ ಪಾರ್ಕಿಂಗ್ ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತ ಸಂಭವಿಸಿದ ಘಟನೆಗಳು ನಡೆದಿವೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಇತರೆ ಕೆಲಸಗಳಿಗೆ ಬರುವ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿ ಬಳಿಕ ಇದೀಗ ವಾಹನಗಳನ್ನು ತೆರವುಗಳಿಸಿ ನೋ ಪಾರ್ಕಿಂಗ್ ಬೋರ್ಡ್ ಹಾಕುವ ಮೂಲಕ ವರದಿಗೆ ಸ್ಪಂದಿಸಿದ್ದಾರೆ.

Suvarna News big Impact Dharwad district administration responded to the report rav

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅವ್ಯವಸ್ಥೆ ಪಾರ್ಕಿಂಗ್ ಮಾಡುತ್ತಿರುವ ಸರಕಾರಿ ಅಧಿಕಾರಿಗಳ ವಾಹನಗಳು ಎಲ್ಲೆಂದರಲ್ಲಿ ಪಾರ್ಕ ಮಾಡಲಾತ್ತಿತ್ತು. ಆದರೆ ನಿನ್ನೆಯಷ್ಡೆ ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಬಗ್ಗೆ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬ್ಯಾರಿಕೇಡ್ ಮತ್ತು ನೋ ಪಾರ್ಕಿಂಗ್ ಬೋರ್ಡ್‌ ಗಳನ್ನ ಅಳವಡಿಸಿದ ಸಿಬ್ಬಂದಿ. 

ಧಾರವಾಡ: ಇದು ಕಚೇರಿನಾ? ಪಾರ್ಕಿಂಗ್ ಜೋನಾ? ಜಿಲ್ಲಾಧಿಕಾರಿಗಳೇ ಏನಿದು ಅವ್ಯವಸ್ಥೆ?

ಧಾರವಾಡ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮತ್ತು ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಮಾರ್ಗದರ್ಶನದಲ್ಲಿ ಧಾರವಾಡ ಸಂಚಾರಿ ಪೋಲಿಸ್ ಇನ್ಸ್ಪೆಕ್ಟರ್ ಶ್ರಿನಿವಾಸ ಮೇಟಿ ಅವರು ಸದ್ಯ ಜಿಲ್ಲಾಧಿಕಾರಿಗಳ ಕಚೇರಿಯ ಗೇಟನಿಂದ ನೂರು ಮಿಟರ್ ಅಂತರದವರಗೆ ಯಾವ ಸರಕಾರಿ ವಾಹನಗಳು ಮತ್ತು ಖಾಸಗಿ ವಾಹನಗಳು ಪಾರ್ಕ್ ಮಾಡದಂತೆ ನಿರ್ಬಂಧಿಸಲಾಗಿದೆ. ಒಂದು ಪಾರ್ಕಿಂಗ್ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಪೋಲಿಸ್ ಇಲಾಖೆ ಎಚ್ಚರಿಕೆ ನೀಡಿದೆ. 

Suvarna News big Impact Dharwad district administration responded to the report rav

 

ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್‌ ಜಾರಿಗೆ ಬದ್ಧ: ಸಚಿವ ಸಂತೋಷ್‌ ಲಾಡ್‌

ಅದೇನೆ ಇರಲಿ ದಿನನಿತ್ಯ ಆಗುವ ಕಾರ್ನರ್ ಅಪಘಾತಗಳನ್ನ ತಪ್ಪಿಸಬೇಕೆಂದು ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ, ಮತ್ತು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮತ್ತು ನೋ ಪಾರ್ಕಿಂಗ್ ಬೋರ್ಡ ಗಳನ್ನ ಅಳವಡಿಕೆ ಮಾಡಿರುವ ಸಂಚಾರಿ ಪೇದೆ ಲಕ್ಷ್ಮಣ ಲಮಾಣಿ ಅವರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಧನ್ಯವಾದಗಳನ್ನ ತಿಳಿಸುತ್ತದೆ. ಈ ಕ್ರಮ ತಾತ್ಕಾಲಿಕವಾಗಿರದೆ ಈ ಸಮಸ್ಯೆಗೆ ಅಂತ್ಯ ಹಾಡಲು ಈ ಭಾಗದಲ್ಲಿ ಒಬ್ಬ ಪೇದೆಯನ್ನ ನಿಯೋಜಿಸಬೇಕು. ರಸ್ತೆ ಬದಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವ ವಾಹನ ಸವಾರರಿಗೆ ದಂಡ ವಿಧಿಸಲಿ. ಒಟ್ಟಿನಲ್ಲಿ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಾಗಲಿ.

Latest Videos
Follow Us:
Download App:
  • android
  • ios