ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು ಅರೆಸ್ಟ್..!

 ನಟಿ ಉಮಾಶ್ರೀ ಅವರ ಮನೆ ಬಾಗಿಲು ಕಳ್ಳತನ ಮಾಡಿದ್ದ ಆರೋಪಿಗಳನ್ನ ಒಂದು ವಾರದಲ್ಲಿಯೇ  ಪೊಲೀಸರು ಬಂಧಿಸಿದ್ದಾರೆ.

bagalkot police arrested two Persons who stolen Actress Umashree house rbj

ಬಾಗಲಕೋಟೆ, (ನ.08) : ಮಾಜಿ ಸಚಿವೆ , ನಟಿ ಉಮಾಶ್ರೀ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಯಲ್ಲಪ್ಪರೆಡ್ಡಿ, ದುರ್ಗಪ್ಪ ವಾಲ್ಮೀಕಿ ಎಂದು ಗುರುತಿಸಲಾಗಿದೆ. ಇನ್ನು ಬಂಧಿತರಿಂದ 1,94000 ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಮನೆ ದರೋಡೆ, ಲೆಕ್ಕ ಸಿಕ್ಕಿಲ್ಲ

ನವೆಂಬರ್ 2 ರಂದು ಉಮಾಶ್ರೀ ಅವರ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮನೆಯಲ್ಲಿ ಕಳ್ಳತನವಾಗಿತ್ತು.  ಈ ಬಗ್ಗೆ ಉಮಾಶ್ರೀ ಅವರು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ದಾಖಲಿಸಿಕೊಂಡಿರುವ ತೇರದಾಳ ಪೊಲೀಸ್ರು, ಒಂದು ವಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos
Follow Us:
Download App:
  • android
  • ios