ಬಾಗಲಕೋಟೆ( ನ. 02) ಉಪಚುನಾವಣೆ ಪ್ರಚಾರದಲ್ಲಿ ನಟಿ, ಹಿರಿಯ ಕಾಂಗ್ರೆಸ್ ನಾಯಕಿ ಉಮಾಶ್ರೀ ಬ್ಯೂಸಿಯಾಗಿದ್ದರೆ ಅತ್ತ ಅವರ ಮನೆಗೆ ಕಳ್ಳರು ಕನ್ನ ಕೊರೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ವಿದ್ಯಾನಗರದಲ್ಲಿರೋ ಮನೆಗೆ ನುಗ್ಗಿ ಟ್ರಿಜರಿ ಒಡೆದು ಒಡವೆ ಹಣ ಕದ್ದಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಹೇಳಿದೆ. ರಬಕವಿಗೆ ಬೆಂಗಳೂರಿನಿಂದ ಉಮಾಶ್ರೀ ಆಗಮಿಸುತ್ತಿದ್ದು ಅವರು ಬಂದ ಮೇಲೆ ಎಲ್ಲ ಲೆಕ್ಕ ಸಿಗಬೇಕಿದೆ.

ಹದಿನೈದು ಕೋಟಿ ರೂ. ಮೊಬೈಲ್ ಹೊತ್ತಿದ್ದ ಲಾರಿಯನ್ನೇ ಅಪಹರಿಸಿದ್ರು

ಸ್ಥಳಕ್ಕೆ ತೇರದಾಳ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್‌ಐ ವಿಜಯಕುಮಾರ ಕಾಂಬಳೆ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು ಉಮಾಶ್ರೀ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವಾಗಿ