ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ. ಸುಮಾರು 10 ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳು ಅರುಣ್ ನನ್ನ ಕೊಲ ಮಾಡಿ ಪರಾರಿಯಾಗಿದ್ದಾರೆ. 

ಬೆಂಗಳೂರು(ಡಿ.06):  ಆಟೋ ಚಾಲಕನನ್ನ ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆಗೈದ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಂಬರ್ ಲೇಔಟ್‌ನಲ್ಲಿ ನಿನ್ನೆ(ಮಂಗಳವಾರ) ರಾತ್ರಿ ನಡೆದಿದೆ. ಅರುಣ್ (24) ಎಂಬಾತನೇ ಕೊಲೆಯಾದ ಆಟೋ ಚಾಲಕನಾಗಿದ್ದಾನೆ. 

ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದೆ. ಸುಮಾರು 10 ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳು ಅರುಣ್ ನನ್ನ ಕೊಲ ಮಾಡಿ ಪರಾರಿಯಾಗಿದ್ದಾರೆ. 

ಬೆಂಗಳೂರು ಗಿರಿನಗರ ಬಾಬು ಕೊಲೆ: ಆಂಟಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಬೀದಿ ಹೆಣವಾದ

ಅರುಣ್‌ಗೆ ಮುಂದಿನ ತಿಂಗಳು ಮದುವೆ ಸಹ ಫಿಕ್ಸ್ ಆಗಿತ್ತು ಅಂತ ತಿಳಿದು ಬಂದಿದೆ. ಕೊಲೆಯಾದ ಅರುಣ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.