Asianet Suvarna News Asianet Suvarna News

ಆಸ್ಪತ್ರೇಲಿ ಕ್ಯೂ ದಾಟಿಕೊಂಡು ಹೋದ ದಂಪತಿ ಮೇಲೆ ಹಲ್ಲೆ: ಮಗುವೆಂದೂ ಕರುಣೆ ತೋರಲಿಲ್ಲ!

ಆಸ್ಪತ್ರೆಯಲ್ಲಿ ವೈದ್ಯರ ಬಳಿ ತಪಾಸಣೆಗೆ ಹೋಗಲು ಸರದಿ ಸಾಲನ್ನು ದಾಟಿಕೊಂಡು ಹೋದರೆಂಬ ಕಾರಣಕ್ಕೆ ಆಸ್ಪತ್ರೆಯಲ್ಲಿಯೇ ದಂಪತಿಯನ್ನು ಹಿಡಿದು ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Assault on a couple crossing the queue in Bengaluru hospital sat
Author
First Published Apr 18, 2023, 6:57 PM IST | Last Updated Apr 18, 2023, 6:57 PM IST

ಬೆಂಗಳೂರು (ಏ.18): ಆಸ್ಪತ್ರೆಗೆ ಹೋದವರು ವೈದ್ಯರ ಬಳಿ ತಪಾಸಣೆಗೆ ಹೋಗಲು ಸರದಿ ಸಾಲಿನಲ್ಲಿ ನಿಂತಿದ್ದರೂ, ತಮ್ಮನ್ನು ದಾಟಿಕೊಂಡು ಹೋದರೆಂಬ ಕಾರಣಕ್ಕೆ ಆಸ್ಪತ್ರೆಯಲ್ಲಿಯೇ ದಂಪತಿಯನ್ನು ಹಿಡಿದು ಥಳಿಸಿದ ಘಟನೆ ಬೆಂಗಳೂರಿನ ಯಲಹಂಕದ ಬಳಿಯಿರುವ ಅಟ್ಟೂರು ಬಡಾವಣೆಯ ಮೀರಜ್ ಆಸ್ತ್ಪತ್ರೆಯಲ್ಲಿ ನಡೆದಿದೆ. 

ಕ್ಷುಲ್ಲಕ ಕಾರಣಕ್ಕೆ ಜಗಳ, ಹಲ್ಲೆ ಹಾಗೂ ಕೊಲೆ ಮಾಡಿರುವ ಸಾಕಷ್ಟು ಘನೆಗಳನ್ನು ಇತ್ತೀಚೆಗೆ ನೋಡುತ್ತಿದ್ದೇವೆ. ಆದರೆ, ಈಗ ಬೆಂಗಳೂರಿನಲ್ಲಿಯೂ ಕೂಡ ಇಷ್ಟೊಂದು ಸಿಲ್ಲಿ ವಿಚಾರಕ್ಕೆ ಜಗಳ ಮಾಡಿದರೇ ಎಂದು ಬೇಸರ ಮಾಡಿಕೊಳ್ಳುವ ಘಟನೆ ನಡೆದಿದ್ದು, ಮರುಕ ಹುಟ್ಟುವುದಂತೂ ಗ್ಯಾರಂಟಿ ಆಗಿದೆ. ಇಲ್ನೋಡಿ ನಿನ್ನೆ ಸಂಜೆ ವೇಳೆ ಯಲಹಂಕದ ಅಟ್ಟೂರು ಬಡಾವಣೆಯ ಮೀರಜ್ ಆಸ್ತ್ಪತ್ರೆಯಲ್ಲಿ ವೈದ್ಯರ ಬಳಿ ತಪಾಸಣೆಗೆ ಹೋಗಿದ್ದ ರೋಗಿಗಳು ಸರದಿ ಸಾಲಿನಲ್ಲಿ ಕುಳಿತಿದ್ದರು. ಇನ್ನು ಕೆಲವರು ಕುಳಿತುಕೊಳ್ಳಲು ಜಾಗವಿಲ್ಲದೇ ನಿಂತಿದ್ದರು. 

ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ ಚುನಾವಣಾಧಿಕಾರಿ, ಶವಾಗಾರದಲ್ಲಿ ಎದ್ದುಕೂತ!

ಸರದಿ ಸಾಲನ್ನೂ ನೋಡದೇ ನುಗ್ಗಿದ ದಂಪತಿ: ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹಲವು ರೋಗಿಗಳು ಆಸ್ಪತ್ರೆಯಲ್ಲಿ ವೈದ್ಯರ ಭೇಟಿಗಾಗಿ ಕಾಯುತ್ತಿದ್ದರೂ, ಮಗುವಿಗೆ ಜ್ವರ ಬಂದಿದೆಯೆಂದು ಮಗುವನ್ನು ಎತ್ತಿಕೊಂಡು ಬಂದ ದಂಪತಿ ಸರದಿ ಸಾಲಿನಲ್ಲಿ ಕುಳಿತಿದ್ದ ಮತ್ತು ನಿಂತಿದ್ದವರನ್ನು ದಾಟಿಕೊಂಡು ಸೀದಾ ವೈದ್ಯರ ಬಳಿ ಹೋಗಿ ಮಗುವಿನ ತಪಾಸಣೆ ಮಾಡಿಸಿಕೊಂಡು ಬಂದಿದ್ದಾರೆ. ಆದರೆ, ಇದರಿಂದ ಸರದಿ ಸಾಲಿನಲ್ಲಿದ್ದ ರೋಗಿಗಳು ಹಾಗೂ ಅವರ ಸಂಬಂಧಿಕರು ಈ ದಂಪತಿಯ ನಡೆಗೆ ತೀವ್ರ ಅಸಮಾಧಾನಗೊಂಡು ಕಾಯುತ್ತಾ ಕುಳಿತಿದ್ದರು. ಅದರಲ್ಲಿ ಇಬ್ಬರು ವ್ಯಕ್ತಿಗಳು ದಂಪತಿ ಬಂದರೆ ಸರಿಯಾಗಿ ಬುದ್ಧಿ ಕಲಿಸುವುದಾಗಿ ಕಾಯುತ್ತಿದ್ದರು.

ವೈದ್ಯರ ಕೊಠಡಿಯಿಂದ ಬಂದವರ ಮೇಲೆ ಹಲ್ಲೆ: ಮಗುವನ್ನು ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡ ಹೋದ ದಂಪತಿಯನ್ನು ಸರದಿ ಸಾಲಿನಲ್ಲಿ ಕುಳಿತಿದ್ದವರು ಪ್ರಶ್ನೆ ಮಾಡಿ, ನೀವು ಹೋಗಿದ್ದು ತಪ್ಪು ಎಂದು ಹೇಳಿದ್ದಾರೆ. ಈ ವೇಳೆ ಸ್ವಲ್ಪ ಗರ್ವದಿಂದಲೇ ಮಾತನಾಡಿದ ವ್ಯಕ್ತಿಗೆ ಅಲ್ಲಿದ್ದ ರೋಗಿಯ ಸಂಬಂಧಿಕರಿಬ್ಬರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನೀವು ಸರದಿ ಸಾಲಿನಲ್ಲಿ ಒಂದು ಗಂಟೆಯಿಂದ ಕಾಯುತ್ತಾ ಕುಳಿತವರನ್ನು ಕ್ಯಾರೇ ಎನ್ನದೇ ಸೀದಾ ಗೂಳಿಯ ಹಾಗೆ ನುಗ್ಗಿ ತಪಾಸಣೆ ಮಾಡಿಸಿಕೊಂಡು ಬಂದು ಪುನಃ ನಗಮೇ ದಬಾಯಿಸುತ್ತೀರಾ ಎಂದು ಹೊಡೆದಿದ್ದಾರೆ. ಈ ವೀಡಿಯೋ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

BEGALURU: 2 ವರ್ಷದ ಮಗುವನ್ನು ಬಲಿ ಪಡೆದ ಜಲಮಂಡಳಿ!

ಪೊಲೀಸ್‌ ಠಾಣೆಯಲ್ಲಿ ಪ್ರಕರಣ: ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ದಂಪತಿಯನ್ನು ರಾಘವೇಂದ್ರ ಮತ್ತು ಸುಧಾ ಎಂದು ಗುರುತಿಸಲಾಗಿದೆ. ಇನ್ನು ಹಲ್ಲೆ ಮಾಡಿದ ವ್ಯಕ್ತಿಗಳನ್ನು ಅಶ್ವಿನ್‌ ಮತ್ತು ದಿಲೀಪ್‌ ಎಂದು ಪತ್ತೆಹಚ್ಚಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆಗೆ ಹೋಗುವ ವೇಳೆ ಸರದಿ ಸಾಲು ದಾಟಿಕೊಂಡು ಹೋಗಿದ್ದಕ್ಕೆ ಹಲ್ಲೆ ಮಾಡಿರುವುದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಸ್ವಲ್ಪ ಹೊತ್ತು ಕುಳಿತಿದ್ದರೆ ಸಾಕಿತ್ತು. ಆದರೆ, ಮಗುವಿನ ಜ್ವರದ ಭಯದಲ್ಲಿ ದಂಪತಿ ಒಳಗೆ ಹೋಗಿದ್ದು, ಹಲ್ಲೆ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಹಲ್ಲೆ ಮಾಡಿದ ಯುವಕರ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios