ಬೆಂಗಳೂರು ಜಲಮಂಡಳಿ ನಿರ್ಲಕ್ಷ್ಯಕ್ಕೆ ಇನ್ನೂ ಏನೂ ಅರಿಯದ ಮಗುವೊಂದು ಬಲಿಯಾಗಿದೆ. ನಗರದ ಬ್ಯಾಡರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.
ಬೆಂಗಳೂರು (ಏ.18): ಬೆಂಗಳೂರು ಜಲಮಂಡಳಿ ನಿರ್ಲಕ್ಷ್ಯಕ್ಕೆ ಇನ್ನೂ ಏನೂ ಅರಿಯದ ಮಗುವೊಂದು ಬಲಿಯಾಗಿದೆ. ನಗರದ ಬ್ಯಾಡರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಬಿಡಬ್ಲ್ಯೂಎಸ್ ಎಸ್ ಬಿ ನಿರ್ಲಕ್ಷ್ಯದಿಂದಾಗಿ ದಂಪತಿ ತಮ್ಮ 2 ವರ್ಷದ ಮಗುವನ್ನು ಕಳೆದುಕೊಂಡಿದ್ದಾರೆ. ಕಾಮಕಾರಿಗೆ ಎಂದು ಗುಂಡಿ ತೆಗೆದು ಜಲಮಂಡಳಿ ಮುಚ್ಚದೆ ನಿರ್ಲಕ್ಷ್ಯ ತೋರಿದೆ. ಈ ಗುಂಡಿಗೆ ಮಗು ಬಿದ್ದು ಸಾವನ್ನಪ್ಪಿದೆ. ಹನುಮಾನ್ ಹಾಗೂ ಹಂಸ ದಂಪತಿಯ ಕಾರ್ತಿಕ್ ಎಂಬ ಮಗು ಮೃತ ದುರ್ದೈವಿ. ಘಟನೆ ಸಂಬಂಧ ಜಲಮಂಡಳಿಯ ಇಂಜಿನಿಯರ್ ಹಾಗೂ ಕಾಂಟ್ರಾಕ್ಟರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹೊಂಡದ ಸುತ್ತಲೂ ಯಾವುದೇ ಎಚ್ಚರಿಕೆ ಫಲಕಗಳು ಅಥವಾ ಬ್ಯಾರಿಕೇಡ್‌ಗಳು ಇಲ್ಲದಿರುವುದು ಈ ಅಹಿತಕರ ಘಟನೆಗೆ ಕಾರಣವಾಯಿತು. ಬೆಂಗಳೂರಿನಲ್ಲಿರುವ BWSSB ನಂತಹ ಇತರ ನಾಗರಿಕ ಏಜೆನ್ಸಿಗಳು ಈ ಹಿಂದೆ ಕೂಡ ಇದೇ ರೀತಿಯ ಘಟನೆಗಳು ನಡೆದು ಟೀಕೆಗೆ ಒಳಗಾಗಿದ್ದವು, ಅವುಗಳ ಕಳಪೆ ಕೆಲಸ ಮತ್ತು ನಿವಾಸಿಗಳ ನಿರ್ಲಕ್ಷ್ಯದ ಆರೋಪಕ್ಕೆ ಒಳಗಾಗಿದ್ದವು.
ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ ಚುನಾವಣಾಧಿಕಾರಿ, ಶವಾಗಾರದಲ್ಲಿ ಎದ್ದುಕೂತ!
ಆಸ್ಪತ್ರೆಯಲ್ಲಿದ್ದ 7 ದಿನದ ಶಿಶು ಅಪಹರಿಸಿದ ಮಹಿಳೆ:
ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಇರುವ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯಲ್ಲಿ ಏಳು ದಿನಗಳ ನವಜಾತ ಗಂಡು ಶಿಶುವೊಂದನ್ನು ಕಿಡಿಗೇಡಿ ಮಹಿಳೆ ಅಪಹರಿಸಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ದಂಪತಿ ಮಗು ಅಪಹರಣವಾಗಿದ್ದು, ಮುಂಜಾನೆ ಜನರಲ್ ವಾರ್ಡ್‌ನಲ್ಲಿ ಮಗುವಿನ ತಾಯಿ, ಶುಶ್ರೂಷಕಿ ಹಾಗೂ ಭದ್ರತಾ ಸಿಬ್ಬಂದಿ ನಿದ್ರೆಯಲ್ಲಿದ್ದಾಗ ಈ ಕೃತ್ಯ ನಡೆದಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ಅಪರಿಚಿತ ಮಹಿಳೆ ಮಗು ತೆಗೆದುಕೊಂಡು ಹೋಗುವ ದೃಶ್ಯಾವಳಿ ಪತ್ತೆಯಾಗಿದೆ. ಈ ಮಾಹಿತಿ ಆಧರಿಸಿ ಆಕೆಯ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Bengaluru: ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ ಮಾಜಿ ಕಾನ್ಸ್‌ಟೇಬಲ್ ಬಂಧನ!
ತಿಪಟೂರಿನಿಂದ ಹೆರಿಗೆ ಸಲುವಾಗಿ ಬಂದಿದ್ದ ತಾಯಿ, ಏಳು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಬಾಣಂತಿ ಹಾಗೂ ಮಗು ವೈದ್ಯಕೀಯ ಆರೈಕೆಯಲ್ಲಿದ್ದರು. ಶನಿವಾರ ಮುಂಜಾನೆ 5ಕ್ಕೆ ಆಸ್ಪತ್ರೆ ಪ್ರವೇಶಿಸಿರುವ ಅಪರಿಚಿತ ಮಹಿಳೆ, ಜನರಲ್ ವಾರ್ಡ್‌ನಲ್ಲಿ ತಾಯಿ, ಶುಶ್ರೂಷಕಿ ಹಾಗೂ ಭದ್ರತಾ ಕಾವಲುಗಾರ ನಿದ್ರೆಯಲ್ಲಿರುವುದನ್ನು ಗಮನಿಸಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾಳೆ. ಕೆಲ ಹೊತ್ತಿನ ಬಳಿಕ ತಾಯಿ ನಿದ್ರೆಯಿಂದ ಎಚ್ಚರಗೊಂಡಾಗ ಮಗು ಕಾಣದೆ ಕಂಗಾಲಾಗಿದ್ದಾರೆ. ಕೂಡಲೇ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
