ಅಕ್ಟೋಬರ್ 3 ರಂದು ದುರ್ಗಾಪೂಜೆ ಪೆಂಡಾಲ್‌ಗೆ ಹೋಗಿದ್ದ ಬಾಲಕಿ ವಾಪಸ್‌ ಮನೆಗೆ ಮರಳಿಲ್ಲ ಎಂದು ಆಕೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಯುವಕನೊಬ್ಬ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಯತ್ನಿಸಿ ಬ್ಯಾಗ್‌ನಲ್ಲಿ ತುಂಬಿ ಆಕೆಯನ್ನು ಎಸೆದಿದ್ದಾನೆ ಎಂದು ತಿಳಿದುಬಂದಿದೆ. 

ಅಸ್ಸಾಂನಲ್ಲಿ (Assam) ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯನ್ನು (Minor Girl) ತನ್ನ ಗರ್ಲ್‌ಫ್ರೆಂಡ್‌ (Girl Friend) ಎಂದು ಹೇಳಿಕೊಂಡು ಅಪಹರಣ (Kidnap) , ಅತ್ಯಾಚಾರ (Rape) ಮಾಡಿದ್ದು ಮತ್ತು ಕೊಲೆಗೆ ಯತ್ನಿಸಿದ (Attempt to Murder) ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಕ್ಯಾಚಾರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಮನೆಯವರು ಪೊಲೀಸರಿಗೆ ನೀಡಿದ ದೂರಿನ ನಂತರ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ. 

ಅಪ್ರಾಪ್ತ ಬಾಲಕಿ ಅಕ್ಟೋಬರ್ 3 ರಂದು ಬೇರೊಬ್ಬರೊಂದಿಗೆ ದುರ್ಗಾ ಪೂಜೆಯ ಪೆಂಡಾಲ್‌ಗೆ ಹೋಗಿದ್ದಾಳೆಂದು ಆ ವ್ಯಕ್ತಿ ಆಕೆಯ ಮೇಲೆ ಕೋಪಗೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಇನ್ನು, ಅಕ್ಟೋಬರ್ 6 ರಂದು ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಯುವಕನನ್ನು ಸಂಜಯ್ ತೇಲಿ ಎಂದು ಗುರುತಿಸಲಾಗಿದ್ದು,, ಆತನನ್ನು ವಶಕ್ಕೆ ಪಡೆದ ನಂತರ ಕೋರ್ಟ್‌ನಲ್ಲಿ ವಿಚಾರಣೆಗೊಳಪಡಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ರಾಜಸ್ಥಾನದ ಅಲ್ವಾರ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ 8 ಹುಡುಗರಿಂದ ರೇಪ್‌!

ಆದರೆ, ಸೋಮವಾರ ರಾತ್ರಿ ಬಾಲಕಿಗೆ ತನ್ನನ್ನು ಭೇಟಿ ಮಾಡಲು ಆತನೇ ಬರಲು ಹೇಳಿದ್ದ. ಬಾಲಕಿ ಜತೆ ಆತ ಸಂಬಂಧ ಹೊಂದಿದ್ದು, ಆದರೆ ಆಕೆ ಬೇರೆ ಪುರುಷನೊಂದಿಗೆ ಕಳೆದ ಭಾನುವಾರ ಸಿನಿಮಾಗೆ ಹೋಗಿದ್ದ ಹಿನ್ನೆಲೆ ಆಕ್ರೋಶಗೊಂಡು ಆತ ಹೀಗೆ ಮಾಡಿರಬಹುದೆಂದು ಸ್ಥಳೀಯರು ಹೇಳಿದ್ದಾರೆ. 

ಬಂಧಿತ ಯುವಕ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆಕೆಯ ಕತ್ತು ಸೀಳಲು ಯತ್ನಿಸಿ, ಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಅದೃಷ್ಟವಶಾತ್‌ ಸಂತ್ರಸ್ಥ ಬಾಲಕಿ ಬದುಕುಳಿದಿದ್ದು, ಬ್ಯಾಗ್‌ನಿಂದ ಹೊರಬಂದು ಆಕೆಯೇ ಮನೆಗೆ ವಾಪಸ್‌ ಬಂದಿದ್ದಾಳೆಂದು ತಿಳಿದುಬಂದಿದೆ. 

ಇನ್ನು, ಅಪ್ರಾಪ್ತ ಬಾಲಕಿ ಮನೆಗೆ ಬಂದಾಗ ಆಕೆಯ ಬಟ್ಟೆಗಳು ಹರಿದಿದ್ದವು ಎನ್ನಲಾಗಿದ್ದು, ಸದ್ಯ ಆಕೆ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದೂ ಹೇಳಲಾಗುತ್ತಿದೆ. 

ಇದನ್ನೂ ಓದಿ: Hyderabad Gang Rape Case: ಶಾಸಕರ ಪುತ್ರ ಬಿಟ್ಟು ಉಳಿದ 4 ಅಪ್ರಾಪ್ತರನ್ನು ವಯಸ್ಕರಂತೆ ವಿಚಾರಣೆ

ಅಕ್ಟೋಬರ್ 3 ರಂದು ದುರ್ಗಾಪೂಜೆ ಪೆಂಡಾಲ್‌ಗೆ ಹೋಗಿದ್ದ ಬಾಲಕಿ ವಾಪಸ್‌ ಮನೆಗೆ ಮರಳಿಲ್ಲ ಎಂದು ಆಕೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಅಕ್ಟೋಬರ್ 4 ರಂದು ಕುಟುಂಬ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿತ್ತು. ಆದರೆ, ಅದೇ ದಿನ ಮಧ್ಯಾಹ್ನ ಆಕೆ ಮನೆಗೆ ವಾಪಸ್‌ ಮರಳಿದ್ದಳು ಎಂದು ತಿಳಿದುಬಂದಿದೆ. ಬಳಿಕ ಆಕೆಯ ಕುಟುಂಬವು ಸಂತ್ರಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿದುಬಂದಿದೆ. 

ದೇಶದಲ್ಲಿ ಆಗಾಗ್ಗೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಪೊಲೀಸ್‌ ಇಲಾಖೆ ಹಾಗೂ ಸರ್ಕಾರ ಕಡಿವಾಣ ಹಾಕಲೇಬೇಕಿದೆ. 

ಇದನ್ನೂ ಓದಿ: Madhya Pradesh: ವಕೀಲ ಆತ್ಮಹತ್ಯೆ; ಜಬಲ್‌ಪುರ ಹೈಕೋರ್ಟ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ