ಹಫ್ತಾ ವಸೂಲಿಗೆ ಅಂಗಡಿ ಮಾಲಿಕನ ಮೇಲೆ ಮಚ್ಚು ಬೀಸಿದ್ದವ ಸೆರೆ
ಹಣ ಕೊಡುವಂತೆ ಮೀನು ಅಂಗಡಿ ಮಾಲಿಕನ ಮೇಲೆ ಮಾರಕಾಸ್ತ್ರ ಬೀಸಿ ಗುಂಡಾಗಿರಿ ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಬಾಣಸವಾಡಿಯ ಸುದೇಶ್(28) ಬಂಧಿತ. ಆರೋಪಿಯು ಶನಿವಾರ ಸಂಜೆ ಬಾಣಸವಾಡಿ ಜೈಭಾರತ ನಗರದಲ್ಲಿ ಇರುವ ಮೀನು ಅಂಗಡಿ ಮಾಲಿಕ ಮನೋಜ್ ಮೇಲೆ ಮಚ್ಚು ಬೀಸಿ ಜೀವ ಬೆದರಿಕೆ ಹಾಕಿದ್ದ.
ಬೆಂಗಳೂರು (ಡಿ.19) : ಹಣ ಕೊಡುವಂತೆ ಮೀನು ಅಂಗಡಿ ಮಾಲಿಕನ ಮೇಲೆ ಮಾರಕಾಸ್ತ್ರ ಬೀಸಿ ಗುಂಡಾಗಿರಿ ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಬಾಣಸವಾಡಿಯ ಸುದೇಶ್(28) ಬಂಧಿತ. ಆರೋಪಿಯು ಶನಿವಾರ ಸಂಜೆ ಬಾಣಸವಾಡಿ ಜೈಭಾರತ ನಗರದಲ್ಲಿ ಇರುವ ಮೀನು ಅಂಗಡಿ ಮಾಲಿಕ ಮನೋಜ್ ಮೇಲೆ ಮಚ್ಚು ಬೀಸಿ ಜೀವ ಬೆದರಿಕೆ ಹಾಕಿದ್ದ.
Bengaluru: ರೌಡಿ ಮೇಲೆ ಗುಂಡಿನ ದಾಳಿ: ಮೂವರ ಬಂಧನ
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಂಗಡಿ ಎದುರು ಮಚ್ಚು ಬೀಸುವ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ಪರಿಶೀಲನೆ ಮಾಡಿದಾಗ, ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದು ಗೊತ್ತಾಯಿತು. ಈ ವೇಳೆ ಬಾಣಸವಾಡಿ ಪೊಲೀಸರು, ಘಟನೆ ನಡೆದಿದ್ದ ಮೀನು ಅಂಗಡಿ ಬಳಿ ತೆರಳಿ ಮಾಲಿಕ ಮನೋಜ್‌ನನ್ನು ಸಂಪರ್ಕಿಸಿ ವಿಚಾರಣೆ ಮಾಡಿದ್ದರು.
ಈ ವೇಳೆ ಮನೋಜ್ ‘ವ್ಯಕ್ತಿಯೊಬ್ಬ ಮಧ್ಯಾಹ್ನ ಅಂಗಡಿ ಬಳಿ ಬಂದು ಹಣಕ್ಕೆ ಪೀಡಿಸುತ್ತಿದ್ದ. ಹಣ ಕೊಡುವುದಿಲ್ಲ ಎಂದೆ. ಇದಕ್ಕೆ ಆತ ಹೊರಗಡೆಯಿಂದ ಬಂದು ಹಾರಾಡುತ್ತೀಯಾ ಮಗನೇ ಎಂದು ಆವಾಜ್ ಹಾಕಿದ. ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದ. ಸಂಜೆ ಮತ್ತೆ ಅಂಗಡಿ ಬಳಿ ಬಂದು ಹಣ ಕೇಳಿದ. ಆಗಲೂ ಹಣ ಕೊಡುವುದಿಲ್ಲ ಎಂದೆ. ಈ ವೇಳೆ ಆರೋಪಿಯು ನನ್ನ ಮೇಲೆ ಮಚ್ಚು ಬೀಸಿದ. ಅಲ್ಲದೆ, ಅಂಗಡಿ ಎದುರು ಇರಿಸಿದ್ದ ವಸ್ತುಗಳನ್ನು ಒಡೆದು ದಾಂಧಲೆ ನಡೆಸಿ, ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ’ ಎಂದು ಮಾಹಿತಿ ನೀಡಿದ್ದರು. ಈ ಸಂಬಂಧ ಮನೋಜ್‌ನಿಂದ ದೂರು ಪಡೆದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸುದೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Bengaluru: ಟೀ ಅಂಗಡಿ ಹುಡುಗರ ಮೇಲಿನ ಹಲ್ಲೆ ಪ್ರಕರಣಕ್ಕೆ ರಿವೇಂಜ್ ಟ್ವಿಸ್ಟ್