ಪೇದೆ ಅಡ್ಡ ಬಂದರೂ ಅವರ ಮೇಲೆಯೇ ಕಾರು ಹತ್ತಿಸಿದ್ದಾನೆ. ಈ ವೇಳೆ ಪ್ರಭು ಬಾನೆಟ್‌ ಮೇಲೆ ಬಿದ್ದಿದ್ದರೂ ಆರೋಪಿ ಸುಮಾರು ನೂರು ಮೀಟರ್‌ಗೂ ಹೆಚ್ಚು ದೂರ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಪ್ರಭು ಕಾರಿನಿಂದ ಕೆಳಗೆ ಹಾರಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ(ಅ.25):  ದಾಖಲೆಗಳ ಪರಿಶೀಲನೆಗಾಗಿ ಕಾರು ಅಡ್ಡಹಾಕಿದ ಪೊಲೀಸ್ ಪೇದೆ ಮೇಲೆ ಕಾರು ಹತ್ತಿಸಲೆತ್ನಿಸಿದ್ದಷ್ಟೇ ಅಲ್ಲದೆ, ಪೇದೆ ಬಾನೆಟ್ ಮೇಲೆ ಬಿದ್ದಿದ್ದರೂ 100 ಮೀಟರ್ ದೂರ ಕಾರು ಚಲಾಯಿಸಿಕೊಂಡು ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಕಾರು ಚಾಲಕನನ್ನು ಭದ್ರಾವತಿಯ ಕೇಬಲ್ ಆಪರೇಟರ್ ಮಿಥುನ್ ಜಗ ದಾಳೆ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸೂಚಿಸಿದ್ದಾರೆ. 

ಶಿವಮೊಗ್ಗದ ಟಿಪ್ಪು ನಗರದಲ್ಲಿ ವಿಚಿತ್ರ ಪ್ರಕರಣ; ಮೊಬೈಲ್ ಟವರ್‌ ಅನ್ನೇ ಕದ್ದ ಕಳ್ಳರು!

ಆಗಿದ್ದೇನು?: 

ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಟ್ರಾಫಿಕ್ ಸಿಬ್ಬಂದಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಭದ್ರಾವತಿಯಿಂದ ಬಂದ ಕಾರೊಂದನ್ನು ಪೇದೆ ಪ್ರಭು ತಡೆದಿದ್ದಾರೆ. ಈ ವೇಳೆ ಚಾಲಕ, ಪೊಲೀಸ್ ಪೇದೆ ನಡುವೆ ಮಾತಿನ ಚಕಮಕಿ ನಡೆದಿದೆ. ಚಾಲಕ ಕಾರು ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದಾನೆ. 