31 ಕೆಜಿ ಬೆಳ್ಳಿ ಕದ್ದ ಆರೋಪಿಗಳ ಬಂಧನ: ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸಕ್ಕಿದ್ದ ಹುಡುಗರಿಂದಲೇ ಮೋಸ!
ಜುವೆಲರ್ಸ್ ಅಂಗಡಿಯಲ್ಲಿ ಕೆಲಸ ಮಾಡೋ ಹುಡುಗರೇ ಮಾಲೀಕರಿಗೆ ಗೊತ್ತಿಲ್ಲದ ಹಾಗೇ ಕಳ್ಳತನ ಮಾಡಿದ್ದ 31 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡೋ ಮೂಲಕ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ಸಿಯಾಗಿದ್ದಾರೆ.
ಬಳ್ಳಾರಿ (ಜೂ.22) : ಜುವೆಲರ್ಸ್ ಅಂಗಡಿಯಲ್ಲಿ ಕೆಲಸ ಮಾಡೋ ಹುಡುಗರೇ ಮಾಲೀಕರಿಗೆ ಗೊತ್ತಿಲ್ಲದ ಹಾಗೇ ಕಳ್ಳತನ ಮಾಡಿದ್ದ 31 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡೋ ಮೂಲಕ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ಸಿಯಾಗಿದ್ದಾರೆ.
ಬಳ್ಳಾರಿಯ ಚಂದ್ರಕಾಂತ ಸೋನಿ(Chandrakanta sony) ಎನ್ನುವವರ ಅಂಗಡಿಯಲ್ಲಿ 31 ಕೆ.ಜಿ. ಬೆಳ್ಳಿ ಕಳವು ಮಾಡಿದ್ದ ಆರು ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಅಂಗಡಿ ಮಾಲೀಕ ಚಂದ್ರಕಾಂತ ಸೋನಿ ಇಲ್ಲದ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರು ಜನ ಆರೋಪಿಗಳು 22 ಲಕ್ಷ ರೂ. ಮೌಲ್ಯದ 31 ಕೆ.ಜಿ. ಬೆಳ್ಳಿಯನ್ನು ಹಂತ ಹಂತವಾಗಿ ಕಳವು ಮಾಡಿದ್ದಾರೆ. ಚಂದ್ರಕಾಂತ ಸೋನಿ ಅವರ ಜತೆಗಿದ್ದ ಆರೋಪಿಯೊಬ್ಬ ಮಾಲೀಕರ ಕಾರಿನಲ್ಲಿ 2 ಕೆ.ಜಿ. ಬೆಳ್ಳಿ ಇಟ್ಟಿದ್ದು , ಮೊದಲು ಪತ್ತೆಯಾಗಿದೆ. ಅದರ ವಿಚಾರಣೆ ಮಾಡಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
Karnataka crimes: ಸುಳ್ಳು ವೆಬ್ ಸೈಟ್ ಸೃಷ್ಟಿಸಿ .17 ಲಕ್ಷ ವಂಚನೆ
ಮೊದಲು ಎರಡು ಕೆ.ಜಿ. ಬೆಳ್ಳಿ ಬಗ್ಗೆ ಸಂಶಯಗೊಂಡು ಚಂದ್ರಕಾಂತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಆರು ಆರೋಪಿಗಳು 31 ಕೆ.ಜಿ. ಬೆಳ್ಳಿ ಕಳವು ಮಾಡಿದ್ದು ಪತ್ತೆಯಾಗಿದೆ.
ಈ ಪ್ರಕರಣ ಪತ್ತೆಗೆ ಸಿರುಗುಪ್ಪ ಡಿವೈಎಸ್ಪಿ ವೆಂಕಟೇಶ ಮತ್ತು ಬಳ್ಳಾರಿ ಗ್ರಾಮೀಣ ಇನ್ಸ್‌ಪೆಕ್ಟರ್ ಪಿ. ನಿರಂಜನ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಇದೀಗ ಬೆಳ್ಳಿ ವಶಪಡಿಸಿಕೊಂಡು ಆರೋಪಗಳನ್ನು ಬಂದಿಸಿದ್ದಾರೆ.
ವಾಹನ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ: 9 ಬೈಕ್ ವಶ
ಬೆಂಗಳೂರು: ನಗರದಲ್ಲಿ ವಾಹನ ಕಳ್ಳತನ ಮಾಡುತ್ತಿದ್ದವನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, 9 ಬೈಕ್ ಜಪ್ತಿ ಮಾಡಿದ್ದಾರೆ.
ಗೋರಿಪಾಳ್ಯದ ನಿವಾಸಿ ಯಾಸಿನ್ ಅರಾಫತ್ ಬಂಧಿತನಾಗಿದ್ದು, ಆರೋಪಿಯಿಂದ ಆಟೋ ಹಾಗೂ 9 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಲಾಸಿಪಾಳ್ಯ ಬಳಿ ಆಟೋ ಕಳ್ಳತನ ಬಗ್ಗೆ ಚಾಲಕ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾವೇರಿಯಲ್ಲಿ ಆರ್‌ಎಂಡಿ ಗುಟ್ಕಾ ಕದ್ದ ಖದೀಮರು, ತಮಿಳುನಾಡಲ್ಲಿ ತಿಂದು ಸಿಕ್ಕಿಬಿದ್ರು
ಯಾಸಿನ್ ವೃತ್ತಿಪರ ಕಳ್ಳನಾಗಿದ್ದು, ಹಲವು ತಿಂಗಳಿಂದ ವಾಹನ ಕಳ್ಳತನದಲ್ಲಿ ಆತ ತೊಡಗಿದ್ದಾನೆ. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಆತನನ್ನು ಬಂಧಿಸಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ನಂತರ ಮತ್ತೆ ತನ್ನ ಚಾಳಿಯನ್ನು ಯಾಸಿನ್ ಮುಂದುವರೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.